ಮೂಡಲಗಿ ಲಯನ್ಸ್‍ಗೆ ಕ್ರಿಕೆಟ್ ಟೂರ್ನಿಯಲ್ಲಿ ರನ್ನರ್ಸ್ ಪ್ರಶಸ್ತಿ
ಮೂಡಲಗಿ: ಬಾಗಲಕೋಟ ಲಯನ್ಸ್ ಕ್ಲಬ್ ಆತಿಥ್ಯದಲ್ಲಿ ಜರುಗಿದ 2022-23ನೇ ಸಾಲಿನ ರೀಜನ್ ಲೀಗ್ ಕ್ರೀಕೆಟ್ ಟೂರ್ನಿಯಲ್ಲಿ ಮೂಡಲಗಿ ಲಯನ್ಸ್ ಕ್ಲಬ್ ಪರಿವಾರ ತಂಡವು ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಮೂಡಲಗಿ ತಂಡವು ಮೊದಲ ಮೂರು ಸುತ್ತಿನಲ್ಲಿ ಮುದ್ದೇಬಿಹಾಳ, ಜಮಖಂಡಿ ಮತ್ತು ಮಹಾಲಿಂಗಪೂರದೊಂದಿಗೆ ಆಡಿ ಗೆಲವು ಸಾಧಿಸಿತ್ತು. ಅಂತಿಮ ಪಂದ್ಯವನ್ನು ಇಲಕಲ್ ತಂಡದೊಂದಿಗೆ ಆಡಿ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
ಮೂಡಲಗಿ ಲಯನ್ಸ್ ಕ್ಲಬ್‍ದ ಅಪ್ಪಣ್ಣ ಬಡಿಗೇರ ಉತ್ತಮ ಬ್ಯಾಟ್ಸ್‍ಮನ್ ಪ್ರಶಸ್ತಿಯನ್ನು ಪಡೆದುಕೊಂಡಿರುವರು.
ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಎಸ್.ಎಸ್. ಪಾಟೀಲ, ಈರಣ್ಣ ಕೊಣ್ಣೂರ, ಸಂಜಯ ಮೋಕಾಶಿ, ಪುಲಕೇಶ ಸೋನವಾಲಕರ, ತಂಡದ ನಾಯಕ ಗಿರೀಶ ಆಸಂಗಿ, ಉಪನಾಯಕ ಶಿವಾನಂದ ಗಾಡವಿ, ವೆಂಕಟೇಶ ಸೋನವಾಲಕರ, ಡಾ. ತಿಮ್ಮಣ್ಣ ಗಿರಡ್ಡಿ, ಶಿವಬೋಧ ಯರಜರ್ವಿ, ಡಾ. ಮಲ್ಲಿಕಾರ್ಜುನ ಹಿರೇಮಠ, ಸಂಗಮೇಶ ಕೌಜಲಗಿ, ಶಿವಾನಂದ ಕಿತ್ತೂರ, ಶ್ರೀಶೈಲ್ ಲೋಕನ್ನವರ, ಡಾ. ಪ್ರಶಾಂತ ಬಾಬನ್ನವರ, ಡಾ. ಮಹೇಶ ಮಳವಾಡ, ಸುಪ್ರೀತ ಸೋನವಾಲಕರ, ಅಪ್ಪಣ್ಣ ಬಡಿಗೇರ, ಶಿವಬಸು ಈಟಿ, ಕೃಷ್ಣಾ ಕೆಂಪಸತ್ತಿ ರನ್ನರ್ಸ್ ಗೆಲುವ ಸಾಧಿಸಿದ್ದಕ್ಕೆ ವಿಜಯೋತ್ಸವ ಆಚರಿಸಿದರು.