Breaking News
Home / Recent Posts / ಸುಣಧೋಳಿಯ ಪಿಯು ಕಾಲೇಜಿನಲ್ಲಿ ಹಳ್ಳಿಹಬ್ಬ ಆಚರಣೆ

ಸುಣಧೋಳಿಯ ಪಿಯು ಕಾಲೇಜಿನಲ್ಲಿ ಹಳ್ಳಿಹಬ್ಬ ಆಚರಣೆ

Spread the love

ಸುಣಧೋಳಿಯ ಪಿಯು ಕಾಲೇಜಿನಲ್ಲಿ ಹಳ್ಳಿಹಬ್ಬ ಆಚರಣೆ

ಮೂಡಲಗಿ: ತಾಲೂಕಿನ ಸುಣಧೋಳಿ ಪಿಯು ಕಾಲೇಜಿನಲ್ಲಿ ರವಿವಾರ ಮಕರ ಸಂಕ್ರಾಂತಿಯ ದಿನದಂದು ಹಳ್ಳಿ ಹಬ್ಬವನ್ನು ಸುಣದೋಳಿಯ ಜಡಿಸಿದ್ಧೇಶ್ವರ ಮಠದ ಶ್ರೀ ಶಿವಾನಂದ ಸ್ವಾಮಿಜೀಗಳ ಸಾನಿಧ್ಯದಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನೀಯರು ಸಾಂಪ್ರದಾಯಿಕ ಹಳೆಯ ಕಾಲದ ಉಡುಗೆ ಧರಿಸಿ ಆಚರಿಸಿದರು.
ಕಾಲೇಜಿನ ಪ್ರಾಚಾರ್ಯ ಸುರೇಶ ಲಂಕೆಪ್ಪನವರ ಮಾತನಾಡಿ, ಕುರಿತು ಸಾಂಪ್ರದಾಯಿಕ ಉಡುಗೆ ತೊಡುಗೆಗಳಲ್ಲಿ ಭಾರತ ದೇಶವು ಮುಂಚೂಣಿಯಲ್ಲಿದ್ದು, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಹಳ್ಳಿ ಹಬ್ಬವನ್ನು ಆಚರಿಸುತ್ತಿರುವುದಕ್ಕೆ ಮುಂದಾಗಿರುವುದು ಸಂತಸ ಸಂಗತಿ ಎಂದ ಅವರು ಹಳೆಯ ಕಾಲದ ಗೀಗಿ ಪದಗಳು, ಸೋಬಾನ ಪದಗಳು, ಜನಪದ ಗೀತೆಗಳನ್ನು ನೆನಪಿಸಿ ಅವುಗಳ ಮಹತ್ವತೆ ತಿಳಿಸಿದರು,
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಸಂಜು ವಾಲಿ, ಗಿರೀಶ ನರಗುಂದ, ಎಚ್.ಎಮ್.ಹತ್ತರಕಿ, ಎ.ಕೆ.ಬಡಿಗೇರ್, ಎಸ್.ಆರ್.ತಿಗಡಿ ಉಪಸ್ಥಿತರಿದ್ದರು.
ಉಪನ್ಯಾಸಕ ಉದ್ದನ್ನವರ್ ನಿರೂಪಿಸಿದರು, ವಂದಿಸಿದರು.


Spread the love

About inmudalgi

Check Also

ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ  ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ