ರಾಜ್ಯ ಯುವ ಘಟಕದ ನಿರ್ದೇಶಕರಾಗಿ ಗುಡ್ಲಮನಿ ನೇಮಕ
ಮೂಡಲಗಿ: ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಭಗವಂತರಾಯಗೌಡ ಪಾಟೀಲ ಅವರು ಮೂಡಲಗಿ ಪುರಸಭೆಯ ಅಧ್ಯಕ್ಷ ಹನಮಂತ ರಾಮಪ್ಪ ಗುಡ್ಲಮನಿ ಅವರನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಯುವ ಘಟಕದ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದಾರೆ.
ಮೂಡಲಗಿ ಪಟ್ಟಣ ಹಾಲು ಮತ ಸಮಾಜದ ಯುವ ಮುಖಂಡ ಹನಮಂತ ಗುಡ್ಲಮನಿ ಅವರನ್ನು ರಾಜ್ಯ ಯುವ ಘಟಕದ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ ಬಗ್ಗೆ ಬೆಂಗಳೂರದ ಸಂಘದ ಕಛೇರಿಯಲ್ಲಿ ಯವ ಘಟಕದ ರಾಜ್ಯ ಅದ್ಯಕ್ಷರಾದ ಭಗವಂತರಾಯಗೌಡ ಕೆ ಪಾಟಿಲ, ಪ್ರಧಾನ ಕಾರ್ಯದರ್ಶಿ ವೆಂಕಟೆಶಮೂರ್ತಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಡಾ.ರಾಜೇಂದ್ರ ಸಣ್ಣಕ್ಕಿ ಮತ್ತು ಕೆ ರಾಮಚಂದ್ರಪ್ಪಾ, ಕೃಷ್ಣಮೂರ್ತಿ ಅವರು ಪ್ರಮಾಣ ನೀಡಿ ತಕ್ಷದಿಂದ ಸಮಾಜದ ಏಳ್ಗೆಗಾಗಿ ಕಾರ್ಯಪ್ರವೃತರಾಗಬೇಕೆಂದು ತಿಳಿಸಿದ್ದಾರೆ.
ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಯುವ ಘಟಕದ ನಿರ್ದೇಶಕರಾಗಿ ಆಯ್ಕೆಯಾದ ಹನಮಂತ ಗುಡ್ಲಮನಿ ಅವರ ಆಯ್ಕೆಗೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಮೂಡಲಗಿ ತಾಲೂಕಾ ಘಟಕದ ಅಧ್ಯಕ್ಷ ಡಾ.ಎಸ್.ಎಸ್.ಪಾಟೀಲ, ಮೂಡಲಗಿ ತಾಲೂಕಾ ಭೂ ನ್ಯಾಯ ಮಂಡಳಿ ಸದಸ್ಯ ಭೀಮಶಿ ಮಗದುಮ್ಮ ಹಾಗೂ ಮೂಡಲಗಿ ತಾಲೂಕಿನ ಹಾಲು ಮತ ಸಮಾಜ ಭಾಂಧವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.