‘ಉತ್ತಮ ಆರೋಗ್ಯ ಕಾಪಾಡಿಕೊಂಡು ಸದೃಢ ಸಮಾಜ ನಿರ್ಮಿಸಬೇಕು’
ಮೂಡಲಗಿ: ‘ಗ್ರಾಮೀಣ ಜನರು ಆರೋಗ್ಯದ ಬಗ್ಗೆ ನಿರ್ಲಕ್ಷತೆ ಮಾಡದೆ ಉತ್ತಮ ಆರೋಗ್ಯ ಕಾಪಾಡಿಕೊಂಡು ಸದೃಢ ಸಮಾಜ ನಿರ್ಮಿಸಬೇಕು’ ಎಂದು ಹರಿಯಾನದ ಗುರುಗ್ರಾಮದ ರೈಟ್ಸ್ ಸಂಸ್ಥೆಯ ನಿರ್ದೇಶಕ ಎಲ್.ಟಿ. ತಪಶಿ ಹೇಳಿದರು.
ಇಲ್ಲಿಯ ಶಾಂತಿ ನಿಕೇತನ ಪ್ರಾಥಮಿಕ ಶಾಲೆಯ ಆವರಣದಲ್ಲಿ ರೈಟ್ಸ್ ಸಂಸ್ಥೆ, ನೇತಾಜಿ ಇಂಟಿಗ್ರೇಟೆಡ್ ರೂರಲ್ ಡೆವೆಲೆಪ್‍ಮೆಂಟ್ ಸೊಸೈಟಿ, ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ, ವಿಶ್ವ ಭಾರತಿ ಶಿಕ್ಷಣ ಸಂಸ್ಥೆ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಆರೋಗ್ಯ ಇದ್ದಲ್ಲಿ ಉತ್ಸಾಹ ಮತ್ತು ಅಭಿವೃದ್ಧಿ ಸಾಧ್ಯ ಎಂದರು.
ಗುರುಗ್ರಾಮದ ರೈಟ್ಸ್ ಸಂಸ್ಥೆಯು ಬಡ ಮತ್ತು ಗ್ರಾಮೀಣ ಭಾಗದ ಜನರಿಗಾಗಿ ಹಲವಾರು ಸಾಮಾಜಿಕ ಸೇವಾ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಮೂಡಲಗಿ ಭಾಗದಲ್ಲಿ ಇನ್ನು ಹಲವಾರು ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದರು.
ನೇತಾಜಿ ಸಂಸ್ಥೆಯ ಅಧ್ಯಕ್ಷ ಈರಣ್ಣ ಕೊಣ್ಣೂರ ಮಾತನಾಡಿ ಆರೋಗ್ಯ ಉಚಿತ ತಪಾಸಣೆ ಮಾಡುವುದರೊಂದಿಗೆ ಉಚಿತ ಔಷಧಿಯನ್ನು ಸಹ ನೀಡಲಾಗುತ್ತಿದೆ. ಜನರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಹರಿಯಾಣದ ರೈಟ್ಸ್ ಸಂಸ್ಥೆಯ ಮಹೇಶ ಶ್ರೀನಿವಾಸನ್, ಡಾ. ಭಾರತಿ ಕೋಣಿ ಭಾಗವಹಿಸಿದ್ದರು.
ವಿಶ್ವ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಈಶ್ವರ ಮುರಗೋಡ ಅಧ್ಯಕ್ಷತೆವಹಿಸಿದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಎಸ್.ಎಸ್. ಪಾಟೀಲ, ಭಾಗ್ಯಲಕ್ಷ್ಮೀ ಮಹಿಳಾ ಮಂಡಳದ ಅಧ್ಯಕ್ಷೆ ಸುಜಾತಾ ಹಿರೇಮಠ, ಡಾ. ಸಚಿನ ಟಿ, ಡಾ. ತಿಮ್ಮಣ್ಣ ಗಿರಡ್ಡಿ, ಡಾ. ಎಂ.ಎಂ. ವಾಳವೇಕರ, ಡಾ. ಪ್ರಶಾಂತ ಬಾಬನ್ನವರ, ಡಾ. ಅನಿಲ ಪಾಟೀಲ, ಡಾ. ಯಲ್ಲಾಲಿಂಗ ಮುಳವಾಡ, ಡಾ. ಮಲ್ಲಿಕಾರ್ಜುನ ಹಿರೇಮಠ, ಡಾ. ಪ್ರಕಾಶ ನಿಡಗುಂದಿ, ಡಾ. ದೀಪಾ ಮಾಚಪ್ಪನ್ನವರ, ಜಿ.ಕೆ. ಮುರಗೋಡ, ಲಕ್ಷ್ಮಣ ಅಡಿಹುಡಿ, ವಿಶ್ವಭಾರತಿ ಸಂಸ್ಥೆಯ ಉಪಾಧ್ಯಕ್ಷ ಸುರೇಶ ಬೆಳಕೂಡ, ಸಾಗರ ಬೆಳಕೂಡ, ಈರಪ್ಪ ಚಿಪ್ಪಲಕಟ್ಟಿ ಇದ್ದರು.
ಮಾಲತಿ ಆಶ್ರೀತ್ ನಿರೂಪಿಸಿದರು, ಲಯನ್ಸ್ ಕಾರ್ಯದರ್ಶಿ ಸಂಗಮೇಶ ಕೌಜಲಗಿ ವಂದಿಸಿದರು.