Breaking News
Home / Recent Posts / ಕೇಂದ್ರ ಸರ್ಕಾರದಿಂದ ಎಸ್ ಸಿ ಸಮುದಾಯದ ಸಾಮಾಜಿಕ ಅಭಿವೃದ್ದಿಗೆ ರೂ 1690.72 ಕೋಟಿ ಬಿಡುಗಡೆ – ಸಂಸದ ಈರಣ್ಣ ಕಡಾಡಿ

ಕೇಂದ್ರ ಸರ್ಕಾರದಿಂದ ಎಸ್ ಸಿ ಸಮುದಾಯದ ಸಾಮಾಜಿಕ ಅಭಿವೃದ್ದಿಗೆ ರೂ 1690.72 ಕೋಟಿ ಬಿಡುಗಡೆ – ಸಂಸದ ಈರಣ್ಣ ಕಡಾಡಿ

Spread the love

ಕೇಂದ್ರ ಸರ್ಕಾರದಿಂದ ಎಸ್ ಸಿ ಸಮುದಾಯದ ಸಾಮಾಜಿಕ ಅಭಿವೃದ್ದಿಗೆ ರೂ 1690.72 ಕೋಟಿ ಬಿಡುಗಡೆ – ಸಂಸದ ಈರಣ್ಣ ಕಡಾಡಿ

ಮೂಡಲಗಿ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ಕರ್ನಾಟಕಕ್ಕೆ ಕಳೆದ 5 ವರ್ಷಗಳಲ್ಲಿ ಎಸ್.ಸಿ ಗಳ ಸಾಮಾಜಿಕ ಉನ್ನತಿಗಾಗಿ ವಿವಿಧ ಯೋಜನೆಗಳ ಅಡಿಯಲ್ಲಿ ರೂ. 1690.72 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ ನಾರಾಯಣಸ್ವಾಮಿ ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ರಾಜ್ಯಸಭೆಯ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಬಾಬು ಜಗಜೀವನ ರಾಮ್ ಛತ್ರವಾಸ್ ಯೋಜನೆಯಡಿ ಹಾಸ್ಟೆಲ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಪ್ರಧಾನ ಮಂತ್ರಿ ಅನುಶುಚಿತ್ ಜಾತಿ ಅಭ್ಯುದಯ ಯೋಜನೆ ಅಡಿಯಲ್ಲಿ 2018 ರಿಂದ, ಪ್ರಧಾನ ಮಂತ್ರಿ ಅನುಶುಚಿತ್ ಜಾತಿ ಅಭ್ಯುದಯ ಯೋಜನೆ (Pಒ-ಂಎಂಙ) ನ ‘ಹಾಸ್ಟೆಲ್ ಕಾಂಪೆÇನೆಂಟ್’ ಬಾಬು ಜಗಜೀವನ್ ರಾಮ್ ಛತ್ರವಾಸ್ ಯೋಜನೆಯ ಹಿಂದಿನ ಯೋಜನೆ ಅಡಿಯಲ್ಲಿ 81 ಹಾಸ್ಟೆಲ್‍ಗಳ ನಿರ್ಮಾಣಕ್ಕೆ ಹಣಕಾಸಿನ ನೆರವು ನೀಡಲಾಗಿದೆ.
2007-08 ರಿಂದ, ಪ್ರಧಾನ್‍ನ ‘ಹಾಸ್ಟೆಲ್’ ಘಟಕ ಬಾಬು ಜಗಜೀವನ್ ರಾಮ್ ಛತ್ರವಾಸ್ ಯೋಜನೆಯ ಹಿಂದಿನ ಯೋಜನೆ ಅಡಿಯಲ್ಲಿ 42 ಹಾಸ್ಟೆಲ್‍ಗಳ 17 ಬಾಲಕಿಯರ ಹಾಸ್ಟೆಲ್‍ಗಳು ಮತ್ತು 25 ಬಾಲಕರ ಹಾಸ್ಟೆಲ್‍ಗಳ ನಿರ್ಮಾಣಕ್ಕಾಗಿ ಸಚಿವಾಲಯವು ಕರ್ನಾಟಕ ರಾಜ್ಯಕ್ಕೆ ಹಣಕಾಸಿನ ನೆರವು ನೀಡಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ