Breaking News
Home / Recent Posts / ಲೋಕ ಅದಾಲತ್‍ನಲ್ಲಿ ಒಂದೇ ದಿನ 875 ಪ್ರಕರಣಗಳು ಇತ್ಯರ್ಥವಾಗಿವೆ- ನ್ಯಾಧೀಶರಾದ ಜ್ಯೋತಿ ಪಾಟೀಲ

ಲೋಕ ಅದಾಲತ್‍ನಲ್ಲಿ ಒಂದೇ ದಿನ 875 ಪ್ರಕರಣಗಳು ಇತ್ಯರ್ಥವಾಗಿವೆ- ನ್ಯಾಧೀಶರಾದ ಜ್ಯೋತಿ ಪಾಟೀಲ

Spread the love

ಮೂಡಲಗಿ : ಪಟ್ಟಣದಲ್ಲಿ ಶನಿವಾರ ನಡೆದ ಲೋಕ ಅದಾಲತ್‍ನಲ್ಲಿ ಕೌಟುಂಬಿಕ ಕಲಹದಿಂದ ದೂರಾಗಿದ್ದ ಮೂರು ಹೆಣ್ಣು ಮಕ್ಕಳು ಇರುವ ದಂಪತಿಗಳು ಒಂದಾಗಿದ್ದಾರೆ. ಮೂಡಲಗಿ ದಿವಾಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಜೀವನಂಶಕ್ಕಾಗಿ ಸತ್ತೆಪ್ಪ ಕುಬಸದ ವಿರುದ್ದ ಮಲ್ಲವ್ವ ಕುಬಸದ ಪ್ರಕರಣ ದಾಖಲಿಸಿದ್ದರು. ನ್ಯಾಧೀಶರಾದ ಜ್ಯೋತಿ ಪಾಟೀಲ ದಂಪತಿಗಳಿಗೆ ತಿಳಿವಳಿಕೆ ನೀಡಿ ರಾಜೀ ಮಾಡಿ ಪ್ರಕರಣವನ್ನು ಮುಕ್ತಾಯಗೊಳಿಸಿದರು.

ಲೋಕ ಅದಾಲತ್‍ನಲ್ಲಿ ಒಂದೇ ದಿನ 875 ಪ್ರಕರಣಗಳು ನ್ಯಾಧೀಶರಾದ ಜ್ಯೋತಿ ಪಾಟೀಲ ಸಮ್ಮುಖದಲ್ಲಿ ಇತ್ಯರ್ಥವಾಗಿವೆ. ಸಿವಿಲ್ ಪ್ರಕರಣಗಳು 35. ಕ್ರಿಮೀಲ್ ಪ್ರಕರಣಗಳು 4, ದಂಢದ ಕ್ರಿಮೀಲ್ ಪ್ರಕರಣಗಳು 640, ಬ್ಯಾಂಕ್ ಚೆಕ್ಕ್ ಪ್ರಕರಣಗಳು 16, ಜನ್ಮನ ಪ್ರಮಾಣ ಪತ್ರಗಳ ಪ್ರಕರಣಗಳು 175, ಜೀವನಂಶ ಪ್ರಕರಣಗಳು 5 ಇತ್ಯರ್ಥವಾಗಿವೆ. ಇನ್ನೂ ಬ್ಯಾಂಕ್ ಹಾಗೂ ಹೆಸ್ಕಂ, ಟಿಎಮ್‍ಸಿ, ಗ್ರಾಪಂ ತೆರಿಗೆ 25584 ಪ್ರಕರಣಗಳಲ್ಲಿ ಒಟ್ಟು 2 ಕೋಟಿ ಅಧಿಕ ಹಣವನ್ನು ಪಾವತಿಸುವಂತೆ ಆದೇಶ ಮಾಡಲಾಗಿದೆ. ಮೂಡಲಗಿ ದಿವಾಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದಿಂದ ಸರ್ಕಾರಕ್ಕೆ ಒಟ್ಟು 62 ಲಕ್ಷ ಅಧಿಕ ಹಣವನ್ನು ಪಾವತಿಸಲಾಗಿದೆ ಎಂದು ಕೋಟ್ ಅಧಿಕಾರಿಗಳು ತಿಳಿಸಿದ್ದಾರೆ.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ