ಮೂಡಲಗಿ: ವಿವಿಧ ಟೆಲಿಕಾಂ ಸೇವಾ ಪೂರೈಕೆದಾರರ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ 2811 ಮೊಬೈಲ್ ಟವರ್ ಗಳನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರ ಸಂವಹನ ಇಲಾಖೆಯ ರಾಜ್ಯ ಸಚಿವ ದೇವುಸಿಂಗ್ ಚೌಹಾಣ್ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ರಾಜ್ಯಸಭೆಯ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಮೊಬೈಲ್ ಟವರ್‍ಗಳ ಸ್ಥಾಪನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕರ್ನಾಟಕ ರಾಜ್ಯದಲ್ಲಿ 47490 ಮೋಬೈಲ್ ಟವರ್‍ಗಳನ್ನು ಸ್ಥಾಪಿಸಲಾಗಿದೆ. (ಇಎಮ್‍ಎಫ್) ವಿಕಿರಣ ಮಾನದಂಡಗಳ ಮಿತಿಯನ್ನು ಮೀರಿದ ಟೆಲಿಕಾಂ ಸೇವಾ ಪೂರೈಕೆದಾರಿಂದ 13.10 ಕೋಟಿ ರೂ. ದಂಡವನ್ನು ವಸೂಲಿ ಮಾಡಲಾಗಿದೆ ಎಂದರು.ದೇಶಾದ್ಯಂತ 11,61,281 ಸಂಖ್ಯೆಯ ಬೇಸ್ ಟಾನ್ಸ್ರ್‍ಸಿವರ್ ಸ್ಟೇಷನ್‍ಗಳನ್ನು (ಬಿಟಿಎಸ್) ಪರೀಕ್ಷಿಸಿ, ಅದರಲ್ಲಿ 320 ನಿಗದಿತ ಮಿತಿಗಳನ್ನು ಮೀರಿರುವುದು ಕಂಡು ಬಂದಿದೆ ಎಂದರು.
ದಂಡದ ಮೂಲಕ ಸಂಗ್ರಹಿಸಿದ ಮೊತ್ತವನ್ನು ಭಾರತದ ಕನ್ಸಾಲಿಡೇಟೆಡ ಫಂಡೆಗೆ ಜಮಾ ಮಾಡಲಾಗುತ್ತದೆ. ಸರ್ಕಾರದ ವೆಚ್ಚಗಳನ್ನು ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾ ದಿಂದ ನಿಗದಿಪಡಿಸಿದ ಕಾರ್ಯವಿಧಾನವನ್ನು ಅನುಸರಿಸಿ ಮಾಡಲಾಗುತ್ತಿದೆ ಎಂದು ಸಚಿವರು ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
Home / Recent Posts / ಬೆಳಗಾವಿ ಜಿಲ್ಲೆಯಲ್ಲಿ 2811 ಮೊಬೈಲ್ ಟವರ್ ಗಳನ್ನು ಸ್ಥಾಪಿಸಲಾಗಿದೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಮಾಹಿತಿ
Check Also
ನ.22 ರಂದು ಕನ್ನಡ ರಾಜ್ಯೋತ್ಸವ ಭವ್ಯ ಮೇರವಣಿಗೆ
Spread the love ಇಂದು ಕನ್ನಡ ರಾಜ್ಯೋತ್ಸವ ಭವ್ಯ ಮೇರವಣಿಗೆ ಮೂಡಲಗಿ: ಮೂಡಲಗಿ ತಾಲೂಕಾ ಕನ್ನಡ ರಾಜ್ಯೋತ್ಸ ಸಮಿತಿ ಆಶಯದಲ್ಲಿ …