Breaking News
Home / Recent Posts / 31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4.37 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಮದಲಮಟ್ಟಿ(ಶಿವಾಪೂರ-ಹ) ಗ್ರಾಮದ ಸ.ಕಿ.ಪ್ರಾ.ಶಾಲೆಯಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಬಾಲಚಂದ್ರ ಜಾರಕಿಹೊಳಿ

31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4.37 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಮದಲಮಟ್ಟಿ(ಶಿವಾಪೂರ-ಹ) ಗ್ರಾಮದ ಸ.ಕಿ.ಪ್ರಾ.ಶಾಲೆಯಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಬಾಲಚಂದ್ರ ಜಾರಕಿಹೊಳಿ

Spread the love

31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4.37 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮದಲಮಟ್ಟಿ(ಶಿವಾಪೂರ-ಹ) ಗ್ರಾಮದ ಸ.ಕಿ.ಪ್ರಾ.ಶಾಲೆಯಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಪ್ರಾಶಸ್ತ್ಯ ನೀಡುತ್ತಿದ್ದು, 31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ 4.37 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಮಂಗಳವಾರದಂದು ಸಮೀಪದ ಮದಲಮಟ್ಟಿ(ಶಿವಾಪೂರ-ಹ) ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ 13.90 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ವಿವೇಕ ಶಾಲಾ ಕೊಠಡಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದಾಗಿ ಅವರು ಹೇಳಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಟಗೇರಿ, ಬೆಳವಿ ತೋಟ(ಬಳೋಬಾಳ), ಒಳಕಲಮರಡಿ(ದಂಡಾಪೂರ), ಭಗೀರಥ ನಗರ(ಗುಜನಟ್ಟಿ), ಹೊಸಯರಗುದ್ರಿ, ಅಂಬಿಗರ ತೋಟ ನಂ.2(ಹುಣಶ್ಯಾಳ ಪಿಜಿ), ಮುನ್ಯಾಳ ತೋಟ, ಅರಣ್ಯಸಿದ್ಧೇಶ್ವರ ತೋಟ, ನಾಗನೂರ, ಫಾಮಲದಿನ್ನಿ ತೋಟ, ಜೋಕಾನಟ್ಟಿ 2 ಶಾಲೆಗಳ ಪ್ರೌಢ ಶಾಲಾ ಕೊಠಡಿಗಳು, ಕಪರಟ್ಟಿ, ತಳಕಟ್ನಾಳ 3 ಶಾಲೆಗಳ ಕೊಠಡಿಗಳು, ಮಬನೂರ ತೋಟ ತಿಮ್ಮಾಪೂರ-2, ಹೆಣ್ಣು ಮಕ್ಕಳ ಶಾಲೆ ಬೆಟಗೇರಿ-2, ನಿಂಗಾಪೂರ, ಲಕ್ಷ್ಮೇಶ್ವರ, ದುರದುಂಡಿ, ಬಿ.ವ್ಹಿ. ನರಗುಂದ ಸರ್ಕಾರಿ ಪ್ರೌಢ ಶಾಲೆ ಸುಣಧೋಳಿ, ಹೊಸಯರಗುದ್ರಿ, ಢವಳೇಶ್ವರ, ತುಕ್ಕಾನಟ್ಟಿ ತೋಟ, ಮದಲಮಟ್ಟಿ(ಶಿವಾಪೂರ-ಹ), ವಿಜಯನಗರ ಮೂಡಲಗಿ, ನಾಗಲಿಂಗ ನಗರ, ಸರ್ಕಾರಿ ಪ್ರೌಢ ಶಾಲೆ ತಳಕಟ್ನಾಳ, ಶಾಲಾ ಕೊಠಡಿಗಳಿಗೆ ತಲಾ 13.90 ಲಕ್ಷ ರೂ.ಗಳಂತೆ ಒಟ್ಟು 4.37 ಕೋಟಿ ರೂ. ಗಳು ಬಿಡುಗಡೆಯಾಗಿದ್ದು, ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಮೂಡಲಗಿ ಶೈಕ್ಷಣಿಕ ವಲಯವು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಜಿಲ್ಲೆಯಲ್ಲಿಯೇ ಉತ್ತಮ ಸಾಧನೆ ಮಾಡುತ್ತಿದೆ ಎಂದು ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಘಟಪ್ರಭಾ ಜೆಜಿಕೋ ನಿರ್ದೇಶಕ ಶಿವನಗೌಡ ಪಾಟೀಲ, ಟಿಎಪಿಸಿಎಂಎಸ್ ನಿರ್ದೇಶಕ ಈಶ್ವರ ಬೆಳಗಲಿ, ಘಯೋನೀಬ ಮಹಾಮಂಡಳ ನಿರ್ದೇಶಕ ಕೆಂಪಣ್ಣಾ ಮುಧೋಳ, ಮಾಜಿ ತಾಪಂ ಸದಸ್ಯ ಶಿವಬಸು ಜುಂಜರವಾಡ, ಶಿವಾಪೂರ(ಹ) ಗ್ರಾಪಂ ಅಧ್ಯಕ್ಷ ಬಸವರಾಜ ಸಾಯನ್ನವರ, ಸತೀಶ ಜುಂಜರವಾಡ, ಶಂಕರ ಮದಲಮಟ್ಟಿ, ಶಿವಬಸು ಮುಗಳಖೋಡ, ರಾಜು ಮದಲಮಟ್ಟಿ, ಬಸು ಮುರಚೆಟ್ಟಿ, ಶ್ರೀಶೈಲ ಮದಲಮಟ್ಟಿ, ಯಲ್ಲಪ್ಪ ಮದಲಮಟ್ಟಿ, ಈರಪ್ಪ ಕೊಳವಿ, ಮಂಜು ಮದಲಮಟ್ಟಿ, ಮಾರುತಿ ಮದಲಮಟ್ಟಿ, ಸೋಮಪ್ಪ ಮದಲಮಟ್ಟಿ, ಪರಪ್ಪ ಗೊರಗುದ್ದಿ, ಬಸಪ್ಪ ಮುಧೋಳ, ಮೂಡಲಗಿ ಬಿಇಓ ಅಜೀತ ಮನ್ನಿಕೇರಿ, ಸಕಿಪ್ರಾ ಶಾಲೆ ಮದಲಮಟ್ಟಿ ಮುಖ್ಯೋಪಾಧ್ಯಾಯ ಎನ್.ಜಿ. ಹೆಬ್ಬಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ