Breaking News
Home / Recent Posts / ರೈತರಿಗೆ ಬಂಪರ ಕೊಡುಗೆ- ಸಂಸದ ಈರಣ್ಣ ಕಡಾಡಿ ಹರ್ಷ

ರೈತರಿಗೆ ಬಂಪರ ಕೊಡುಗೆ- ಸಂಸದ ಈರಣ್ಣ ಕಡಾಡಿ ಹರ್ಷ

Spread the love

ರೈತರಿಗೆ ಬಂಪರ ಕೊಡುಗೆ- ಸಂಸದ ಈರಣ್ಣ ಕಡಾಡಿ ಹರ್ಷ

ಮೂಡಲಗಿ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ೨೦೨೩-೨೪ನೇ ಸಾಲಿನ ಬಜೆಟ್ ಮುಂದಿನ ೨೫ ವರ್ಷಗಳ ದೂರದೃಷ್ಠಿ ಹೊಂದಿರುವ ಸಮಚಿತ್ತದ ಸಮತೊಲನದ ಬಜೇಟ್‌ನ್ನು ರೈತಾಪಿ ವರ್ಗಕ್ಕೆ ಶೂನ್ಯ ಬಡ್ಡಿದರದಲ್ಲಿ ರೂ ೫ ಲಕ್ಷ ಸಾಲ ಸೌಲಭ್ಯ ನೀಡುವ ಮೂಲಕ ಕೃಷಿ, ನೀರಾವರಿ, ಆರೋಗ್ಯ, ಶಿಕ್ಷಣ, ಕೈಗಾರಿಕೆ,ಮಹಿಳೆಯರಿಗೆ, ಪ್ರವಾಸೋದ್ಯಮ ಹೀಗೆ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದೆ ಎಂದು ರಾಜ್ಯಸಭಾ ಸದಸ್ಯರು ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಬಜೆಟ್ ಕುರಿತು ಹರ್ಷ ವಕ್ತಪಡಿಸಿದರು.
ಈ ವರ್ಷದ ಒಟ್ಟು ಬಜೆಟ್ ಗಾತ್ರ ೩.೧ ಲಕ್ಷ ಕೋಟಿ ರೂ, ಕೃಷಿ ಕ್ಷೇತ್ರಕ್ಕೆ ೩೯,೦೩೧ ಕೋಟಿ ಅನುದಾನ ನೀಡಲಾಗಿದೆ. ಕಿಸಾನ್ ಕ್ರೇಡಿಟ್ ಕಾರ್ಡ ಹೊಂದಿರುವ ೫೦ ಲಕ್ಷ ರೈತರಿಗೆ ‘ಭೂ ಸಿರಿ’ ನೂತನ ಯೋಜನೆಯನ್ನು ಜಾರಿಗೆ ತಂದಿದ್ದು ಹೆಚ್ಚುವರಿಯಾಗಿ ರೂ ೧೦ ಸಾವಿರ ಸಹಾಯ ಧನ, ರಾಜ್ಯದ ೫೬ ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳಿಗೆ ಆರೋಗ್ಯ ಸೇವೆ ಒದಗಿಸಲು ಜೀವನ ಜೋತಿ ಯೋಜನೆ ಜಾರಿಗೆ ಇದಕ್ಕಾಗಿ ರೂ ೧೮೧ ಕೋಟಿ ಅನುದಾನ.ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ,ಮೀನುಗಾರರು,ಟ್ಯಾಕ್ಸಿ ಆಟೋ ಚಾಲಕರ ಮಕ್ಕಳಿಗೂ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ,ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು ತಲಾ ರೂ ೫೦೦ ಸಹಾಯ ಧನವನ್ನು ಡಿ.ಬಿ.ಟಿ ಮೂಲಕ ನೀಡಲಿದೆ ಎಂದರು.
ಹಾಲು ಉತ್ಪಾದಕರಿಗೆ ರೂ ೧೦೬೭ ಕೋಟಿ,ಕೀರುಧಾನ್ಯ ಬೆಳೆಗಾರಿಗೆ ಪ್ರತಿ ಹೆಕ್ಟೆರ್ ಗೆ ರೂ ೧೦ ಸಾವಿರ ಪ್ರೋತ್ಸಾಹ ಧನ,ಅಡಿಕೆ ಬೆಳೆ ರೋಗ ನಿರ್ವಹಣೆ,ತಂತ್ರಜ್ಞಾನ ಅಭಿವೃದ್ದಿಗೆ ರೂ ೧೦ ಲಕ್ಷ ಕೋಟಿ ಅನುದಾನ ಘೋಷಣೆ,ದ್ರಾಕ್ಷೀ ಬೆಳೆಗಾರಿಗೆ ೧೦೦ ಕೋಟಿ ರೂಗಳ ನೇರವು ಯೋಜನೆ ಆರಂಭಿಸಲಾಗುವುದು.ರೇಷ್ಸೇ ಬೆಳೆಯಲು ೧೦ ಸಾವಿರ ಹೆಕ್ಟೇರ್ ವಿಸ್ತರನೆಗೆ ಕ್ರಮ, ರೈತರ ಆದಾಯವನ್ನು ದ್ವೀಗುಣಗೊಳಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ನೀರಾವರಿ ಯೋಜನೆಗಳಿಗೆ ರೂ ೨೨,೮೫೪ ಕೋಟಿ ಹೆಚ್ಚಿನ ಅನುದಾನ, ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳಿಗೆ ರೂ ೪೯,೦೩೧ ಕೋಟಿ ಮೀಸಲು ಹೀಗೆ ಹಲವಾರು ಯೋಜನೆಗಳಿಗೆ ಅನುದಾನ ನೀಡಿದ್ದಾರೆ.
ಕಿತ್ತೂರ ಭಾಗದ ಅಭಿವೃದ್ದಿಗೆ ಕಿತ್ತೂರ ಕರ್ನಾಟಕ ಮಂಡಳಿ, ಧಾರವಾಡ – ಬೆಳಗಾವಿ ನೂತನ ರೈಲು ಮಾರ್ಗ ತ್ವರಿತಗತಿಯಲ್ಲಿ ಸಾಗಲು ಭೂ ಸ್ವಾದಿನಕ್ಕೆ ರೂ ೧೫೦ ಕೋಟಿ ಅನುದಾನ,ಬೆಳಗಾವಿಯ ಖಣಗಲಾ ಗ್ರಾಮದಲ್ಲಿ ಕೈಗಾರಿಕಾ ಹಬ್ಬ ಸ್ಥಾಪನೆನೆ ಕ್ರಮ,ಕಳಸಾ ಬಂಡೂರಿ ಯೋಜನೆಗೆ ರೂ ೮೦ ಕೋಟಿ ಅನುದಾನ ನೀಡಿದ್ದಾರೆಂದರು ಈ ಬಜೆಟ್‌ನ್ನು ಈರಣ್ಣ ಕಡಾಡಿ ಶ್ಲಾಘೀಸಿದ್ದಾರೆ ಮತ್ತು ಸ್ವಾಗತಿಸಿದ್ದಾರೆ.


Spread the love

About inmudalgi

Check Also

ಬ್ಯಾಂಕಿನ ಆರ್ಥಿಕ ಸಾಕ್ಷರತೆ ಅರಿವು ವಿದ್ಯಾರ್ಥಿಗಳಿಗೆ ಅವಶ್ಯಕ -ಶಿವಪುತ್ರ ಚನ್ನಗೌಡರ

Spread the loveಬ್ಯಾಂಕಿನ ಆರ್ಥಿಕ ಸಾಕ್ಷರತೆ ಅರಿವು ವಿದ್ಯಾರ್ಥಿಗಳಿಗೆ ಅವಶ್ಯಕ -ಶಿವಪುತ್ರ ಚನ್ನಗೌಡರ. ಮೂಡಲಗಿ : ಬ್ಯಾಂಕಿನ ಆರ್ಥಿಕ ಸಾಕ್ಷರತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ