Breaking News
Home / Recent Posts / ಶಿವನ ಧ್ಯಾನವು ಜೀವನದಲ್ಲಿ ಶಾಂತಿ, ನೆಮ್ಮದಿ ತರುತ್ತದೆ

ಶಿವನ ಧ್ಯಾನವು ಜೀವನದಲ್ಲಿ ಶಾಂತಿ, ನೆಮ್ಮದಿ ತರುತ್ತದೆ

Spread the love

 

ಶಿವನ ಧ್ಯಾನವು ಜೀವನದಲ್ಲಿ ಶಾಂತಿ, ನೆಮ್ಮದಿ ತರುತ್ತದೆ

ಮೂಡಲಗಿ: ಶಿವರಾತ್ರಿ ದಿನದಂದು ಮಾಡುವ ಉಪವಾಸ, ಧ್ಯಾನ ಮತ್ತು ಪ್ರಾರ್ಥನೆ ಇವುಗಳಿಂದ ದೇವರ ಅನುಗ್ರಹವಾಗುವುದು’ ಎಂದು ವಿಜಯಪುರದ ಪ್ರಜಾಪಿತ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕರಾದ ಬ್ರಹ್ಮಕುಮಾರಿ ಶೈಲಾ ಅಕ್ಕನವರು ಹೇಳಿದರು.
ಇಲ್ಲಿಯ ಲಕ್ಷ್ಮೀನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದದಲ್ಲಿ 87ನೇ ಶಿವರಾತ್ರಿಯನ್ನು ಧ್ಜಜಾರೋಹಣವನ್ನು ನೇರವೇರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಶುದ್ಧ ಮನಸ್ಸು ಮತ್ತು ಸಾತ್ವಿಕ ಆಹಾರವು ಮನುಷ್ಯನಲ್ಲಿ ಶಾಂತಿ, ನೆಮ್ಮದಿಯನ್ನು ತರುತ್ತವೆ ಎಂದರು.
ಮೂಡಲಗಿಯ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕರಾದ ಬ್ರಹ್ಮಕುಮಾರಿ ರೇಖಾ ಅಕ್ಕನವರು ಪ್ರಾಸ್ತಾವಿಕ ಮಾತನಾಡಿ ಶಿವರಾತ್ರಿಯ ಮಹತ್ವವನ್ನು ತಿಳಿಸಿದರು.
ಸವಿತಾ ಅಕ್ಕನವರು, ವಿಜಯಪುರದ ಬ್ರಹ್ಮಕುಮಾರ ಡಾ. ರಿಷಿಕೇಶ ಪಾಟೀಲ, ಬ್ರಹ್ಮಕುಮಾರ ಚೇತನ ಉಪಸ್ಥಿತರಿದ್ದರು.
ಈಶ್ವರಿ ವಿಶ್ವವಿದ್ಯಾಲಯ ಕೇಂದ್ರದಿಂದ ಸಾತ್ವಿಕ ಆಹಾರವನ್ನು ವಿತರಿಸಿದರು.
ಶಿವಪುತ್ರಯ್ಯ ಮಠಪತಿ, ವೈ.ಬಿ. ಕುಲಿಗೋಡ, ಈರಪ್ಪ ಹಂದಿಗುಂದ, ಈರಪ್ಪ ಹಂದಿಗುಂದ, ತುಂಗವ್ವ ಸೋನವಾಲಕರ, ಸುಮಿತ್ರ ಸೋನವಾಲಕರ, ಮಹಾದೇವಿ ತಾಂವಂಶಿ, ತಾರಾ ಸೋನವಾಲ್ಕರ, ರಜನಿ ಬಂದಿ, ಸರೋಜಾ ಹೊಸೂರ, ಲಕ್ಷ್ಮೀ ಮತ್ತಿತರರು ಇದ್ದರು.

 


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ