ಮೂಡಲಗಿ : ತುಳಸಿ ಅಭಿವೃದ್ಧಿ ಸಂಸ್ಥೆ ಬೆಳಗಾವಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಡಲಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಾಧಕಿಯರಿಗೆ ವೀರ ರಾಣಿ ಕಿತ್ತೂರ ಚನ್ನಮ್ಮ ಪ್ರಶಸ್ತಿ ಪ್ರಾದನ ಕಾರ್ಯಕ್ರಮ ಮಾರ್ಚ 13ರಂದು ಮಧ್ಯಹ್ನಾ 1;30ಕ್ಕೆ ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ಜರುಗಲಿದೆ ಎಂದು ತುಳಿಸಿ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಲಕ್ಷ್ಮೀ ಗೂಟುರ ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿದ್ದಣ್ಣಾ ದುರದುಂಡಿ ತಿಳಿಸಿದ್ದಾರೆ.
ಕಾರ್ಯಕ್ರಮ ಉದ್ಘಾಟನೆಯನ್ನು ದಿವಾಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಧೀಶರಾದ ಜ್ಯೋತಿ ಪಾಟೀಲ, ಅಧ್ಯಕ್ಷೆಯನ್ನು ತಹಶೀಲ್ದಾರ ಪ್ರಶಾಂತ ಚನಗೊಂಡ, ಮುಖ್ಯ ಅಥಿತಿಗಳಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್ ಜಿ ಚಿನ್ನನವರ, ಬಿಇಒ ಅಜೀತ ಮನ್ನಿಕೇರಿ, ಸಿಡಿಪಿಒ ಯಲ್ಲಪ್ಪ ಗದಾಡಿ, ಸಿಪಿಐ ಶ್ರೀಶೈಲ ಬ್ಯಾಕೂಡ, ವೈದ್ಯಾಧಿಕಾರಿ ಡಾ ಭಾರತಿ ಕೋಣಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವವರು. ಮಹಿಳಾ ಸಾಧಕಿಯರಾದ ಸಾವಿತ್ರಿ ಕಮಲಾಪೂರ ಸಾಹಿತ್ಯ ಕ್ಷೇತ್ರ, ಪ್ರೇಮಾ ಗಾಣಿಗೇರ ಕೃಷಿ ಕ್ಷೇತ್ರ, ಶೈಲಾ ಹೂಗಾರ ಶಿಕ್ಷಣ ಕ್ಷೇತ್ರ, ಲಕ್ಷ್ಮೀ ಜೋಕಾನಟ್ಟಿ ಜನಪದ ಕ್ಷೇತ್ರ, ದೀಪಶ್ರೀ ದೇಸೂರಕರ ಮಾದರಿ ಅಂಗನವಾಡಿ ಕೇಂದ್ರ, ಮಾಲತಿ ಸಪ್ತಸಾಗರ ಮಾದರಿ ಅಂಗನವಾಡಿ ಕೇಂದ್ರ, ಕಸ್ತೂರ ಹೆಗ್ಗಾಣಿ ಸಂಘಟನಾ ಕ್ಷೇತ್ರ, ರತ್ನಾ ಹಳ್ಳಿ ಆಶಾ ಕಾರ್ಯಕರ್ತೆ, ಇಂದ್ರವ್ವ ಬಂಡ್ರೋಳ್ಳಿ ಪೊಲೀಸ್ ಇಲಾಖೆ ಇವರಿಗೆ ವೀರ ರಾಣಿ ಕಿತ್ತೂರ ಚನ್ನಮ್ಮ ಪ್ರಶಸ್ತಿ ಪ್ರಾದನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.