ಹಳ್ಳೂರ ಚೆಕ್ ಪೋಸ್ಟ್‍ಗೆ ಅರಭಾವಿ ಚುನಾವಣಾಧಿಕಾರಿ ಪ್ರಭಾವತಿ ಕೆ ಭೆಟಿ
ಮೂಡಲಗಿ: 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಅರಭಾವಿ ಮತಕ್ಷೇತ್ರ ಮತ್ತು ಬೆಳಗಾವಿ ಜಿಲ್ಲಾ ಗಡಿಭಾಗದ ತಾಲೂಕಿನ ಹಳ್ಳೂರಗ್ರಾಮದ ಹತ್ತಿರ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಿರುವ ಚೆಕ್ ಪೋಸ್ಟ್‍ಗೆ ಬೈಲಹೊಂಗಲ ಉಪವಿಭಾಗಾಧಕಾರಿ ಹಾಗೂ ಅರಭಾವಿ ಮತಕ್ಷೇತ್ರದ ಚುನಾವಣಾಧಿಕಾರಿ ಪ್ರಭಾವತಿ ಪಿ ಅವರು ಮಂಗಳವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಪತ್ರಕರ್ತರೊಂದಿಗೆ ಚುನಾವಣಾಧಿಕಾರಿ ಪ್ರಭಾವತಿ ಕೆ ಅವರು ಮಾತನಾಡಿ, ಚುನಾವಣಾ ಸಂರ್ಧಭದಲ್ಲಿ ಅಕ್ರಮಗಳನ್ನು ತಡೆಯಲು ಅರಭಾವಿ ಮತ ಕ್ಷೇತ್ರದಲ್ಲಿ ಹಳ್ಳುರ ಮತ್ತು ಯಾದವಾಡದಲ್ಲಿ ಕಳೆದ ನಾಲ್ಕು ದಿನಗ ಹಿಂದೆ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿದು. ಈ ಚೆಕ್ ಪೋಸ್ಟ್ ಗಳಲ್ಲಿ ದಿನ 24 ಗಂಟೆಗಳ ಕಾಲ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದು ಒಳ ಬರುವ ಮತ್ತು ಹೊರ ಹೋಗುವ ಪ್ರತಿ ವಾಹನಗಳ ಮೇಲೆ ನಿಗಾ ವಹಿಸಿ ತಪಾಸಣೆ ಮಾಡುತ್ತಾರೆ ಹಾಗೂ ಎರಡು ಚೆಕ್ ಪೋಸ್ಟೆ ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲ್ಲಾಗಿದೆ
ಅರಭಾವಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಸಾರ್ವಜನಿಕರ ದೂರು/ಮಾಹಿತಿಗಾಗಿ ಸಹಾಯವಾಣಿಯನ್ನು ತೆರೆಯಲಾಗಿದ್ದು, ಸಹಾಯವಾಣಿ ಸಂಖ್ಯೆ 8023900863 ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಮೂಡಲಗಿ ತಹಶೀಲ್ದಾರ ಪ್ರಶಾಂತ ಚನಗೊಂಡ, ಸ್ಥಿರ ಕಣ್ಗಾವಲು ಪಡೆಯ ಅಧಿಕಾರಿ ಹಣಮಂತ ತಾಳಿಕೋಟಿ, ಕಂದಾಯ ಇಲಾಖೆಯ ಆರ್.ಐ.ಹೊಸಮನಿ, ಬಿ.ಎಲ್.ಕೆಂಚರಡ್ಡಿ, ಅರ್ಜುನ ಪೂಜೇರಿ, ಕೆ.ಟಿ.ಚೌವ್ಹಾನ ಇದ್ದರು.