Breaking News
Home / Recent Posts /  ಶ್ರೀ ಚಂದ್ರಮ್ಮತಾಯಿ ಮತ್ತು ಶ್ರೀ ಸದಾಶಿವ ಮುತ್ಯಾರ ಜಾತ್ರೆ

 ಶ್ರೀ ಚಂದ್ರಮ್ಮತಾಯಿ ಮತ್ತು ಶ್ರೀ ಸದಾಶಿವ ಮುತ್ಯಾರ ಜಾತ್ರೆ

Spread the love

 ಶ್ರೀ ಚಂದ್ರಮ್ಮತಾಯಿ ಮತ್ತು ಶ್ರೀ ಸದಾಶಿವ ಮುತ್ಯಾರ ಜಾತ್ರೆ

ಮೂಡಲಗಿ: ತಾಲೂಕಿನ ಪುಲಗಡ್ಡಿ ಗ್ರಾಮದಲ್ಲಿ ಆದಿಶಕ್ತಿ ಮಹಾಲಕ್ಷ್ಮೀ ಶ್ರೀ ಚಂದ್ರಮ್ಮತಾಯಿ ಹಾಗೂ ಶ್ರೀ ಸದಾಶಿವ ಮುತ್ಯಾ ರವರ ಪ್ರಥಮ ಮಹಾರಥೋತ್ಸವ ಹಾಗೂ ಶೆಟ್ಟೆಮ್ಮಾದೇವಿ ಜಾತ್ರಾ ಮಹೋತ್ಸವ ಮಾ.24 ರಿಂದ 28 ರವರಿಗೆ ವಿವಿಧ ಧಾರ್ಮಿಕ ಮತ್ತು ಸಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಹಾಗೂ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಐದು ದಿಗಳಕಾಲ ಸಡಗರ ಸಂಭ್ರಮದಿಂದ ಜರುಗಲಿದೆ ಎಂದು ಸಾಹಿತಿ ಜಯಾನಂದ ಮಾದರ ಹೇಳಿದರು.
ಅವರು ಗುರುವಾರದಂದು ಮೂಡಲಗಿ ಪತ್ರಿಕಾ ಕಛೇರಿಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ.24 ರಂದು ಸಂಜೆ 7 ಗಂಟೆಗೆ ಜರುಗುವ ಜಾತ್ರೆಯ ಉದ್ಘಾಟನೆ ಹಾಗೂ ರಾಜ್ಯ ಪ್ರಶಸ್ತಿ ಸಮಾರಂಭದ ಸಾನಿಧ್ಯವನ್ನು ಸುಣಧೋಳಿಯ ಶ್ರೀ ಶಿವಾನಂದ ಶ್ರೀಗಳು ವಹಿಸಿಸುವರು, ನವಲಗುಂದದ ಶ್ರೀ ಗೋಪಾಲರಡ್ಡಿ ಶಾಸ್ತ್ರೀಗಳು, ಹುಣಶ್ಯಾಳ ಪಿ.ಜಿಯ ಶ್ರೀ ನಿಜಗುಣ ದೇವರು ನೇತೃತ್ವ ವಹಿಸುವರು, ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು, ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಗೆ ದಾನ ಚಿಂತಾಮಣಿ ಪ್ರಶಸ್ತಿ ಮತ್ತು ಸಿನಿಮಾ ಹಾಗೂ ಧಾರಾವಾಹಿ ಹಿರಿಯ ಕಲಾವಿದೆ ಮಾಲತಿಶ್ರೀ ಮೈಸೂರು ಅವರಿಗೆ ರಂಗಭೂಮಿ ಕಲಾರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಮಾ.25ರಂದು ಜರುಗುವ ಹಿರಿಯ ನಾಗರಿಕ ಸನ್ಮಾನ, ವೇದಾಂತ ಸಮಾರಂಭ ಕಾರ್ಯಕ್ರಮದ ಸಾನಿಧ್ಯವನ್ನು ಮಮದಾಪೂರ ಶ್ರಿ ಮೌನ ಮಲ್ಲಿಕಾರ್ಜುನ ಸ್ವಾಮಿಗಳು ಹಾಗೂ ತಳಕಟನಾಳದ ಶ್ರೀ ಆತ್ಮಾನಂದ ಸ್ವಾಮಿಗಳು ವಹಿಸಿಸುವವರು, ವಡೇರಹಟ್ಟಿಯ ಶ್ರೀ ನಾರಾಯಣ ಶರಣರು ಮತ್ತು ಶ್ರೀ ಕಲ್ಮೇಶ್ವರ ಸ್ವಾಮಿಗಳ ನೇತೃತ್ವ ವಹಿಸುವರು,
ಮಾ.26ರಂದು ಮುಂಜಾನೆ 10ಕ್ಕೆ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರ ಮತ್ತು ಶ್ರೀ ಸಿದ್ಧಾರೂಢ ಮಹಿಳಾ ಕಲಾ ಸಂಘ ಜೋಕಾನಟ್ಟಿ ಆಶ್ರಯದಲ್ಲಿ ಜರಗುವ ಜಾನಪದ ಕಲಾ ಮಹೋತ್ಸವ ಸಾನಿಧ್ಯವನ್ನು ಹಲಗನಿ-ಸವದಿಯ ಶ್ರೀ ಸಂಗಮನಾಥ ಸ್ವಾಮೀಜಿ, ಬೀರನಹೊಳಿಯ ಶ್ರೀ ಚಿದಾನಂದ ಶ್ರೀಗಳು, ಕಪರಟ್ಟಿಯ ಶ್ರೀ ಬಸವರಾಜ ಹಿರೇಮಠ ವಹಿಸುವರು, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಉದ್ಘಾಟಿಸುವರು, ನ್ಯಾಯವಾದಿ ಮಹಾಂತೇಶ ಪಾಟೀಲ ಅಧ್ಯಕ್ಷತೆ ವಹಿಸುವರು, ಬೆಳುವಲ ನಾಡಿನ ಜಾನಪದ ಕೃಷಿ ಹಾಗೂ ಕಲಾ ಸಂಸ್ಕøತಿ ಕುರಿತು ಪ್ರಕಾಶ ಕೋಟಿನತೋಟ, ಡಾ.ಅರುಣ ಸವತಿಕಾಯಿ, ವಿದ್ಯಾ ರಡ್ಡಿ ಅವರು ಉಪನ್ಯಾಸ ನೀಡುವರು. ಜಾನಪದ ಸಾಂಸ್ಕøತಿ ಕಲಾ ಉತ್ಸವದ ಕಲಾ ಪ್ರದರ್ಶನಕ್ಕೆ ಕೆ.ಎಮ್.ಎಫ್.ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಚಾಲನೆ ನೀಡುವರು. ಅಂದು ಪುಲಗಡ್ಡಿ ಗ್ರಾಮದ ಹಿರಿಯರಿಗೆ ಮತ್ತಿತರಗೆ ಸತ್ಕಾರ ಸಮಾರಂಭ ಜರುಗಲಿದೆ.
ಮಾ.27ರಂದು ಸಂಜೆ 7ಗಂಟೆಗೆ ಶ್ರೀ ಶೆಟ್ಟೆಮ್ಮದೇವಿ ಹಾಗೂ ಗ್ರಾಮದ ದೇವರುಗಳ ಉಡಿ ತುಂಬುವುದು ಹಾಗೂ ನೈವೇದ್ಯ ಸಮರ್ಪಣೆ ಜರುಗುವುದು.
ಮಾ.28ರಂದು ಸಂಜೆ 4 ಗಂಟೆಗೆ ಆದಿಶಕ್ತಿ ಮಹಾಲಕ್ಷ್ಮೀ ಶ್ರೀ ಚಂದ್ರಮ್ಮತಾಯಿ ಹಾಗೂ ಶ್ರೀ ಸದಾಶಿವ ಮುತ್ಯಾರವರ ಪ್ರಥಮ ಮಹಾರಥೋತ್ಸವ ಜರುಗುವುದು. ಸಂಜೆ 7ಕ್ಕೆ ವೇದಾಂತ ಸಮಾವೇಶ ಹಾಗೂ ಸನ್ಮಾನ ಸಮಾರಂಭ ವಿವಿಧ ಪೂಜ್ಯ ಸಾನಿಧ್ಯದಲ್ಲಿ ಜರುಗಲಿದೆ ಎಂದು ಜಯಾನಂದ ಮಾದರ ತಿಳಿಸಿದರು.
ಈ ಸಂಧರ್ಭದಲ್ಲಿ ಯಮನಪ್ಪ ಹಿರೇಮನಿ, ಶ್ರೀಮಂತ ಹಿರೇಮನಿ, ಯಮನಪ್ಪ ಮಾದರ, ಸಚೀನ ಸಣ್ಣಕ್ಕಿ, ಲಕ್ಷ್ಮಣ ಮೇತ್ರಿ, ದುರ್ಗಪ್ಪ ಸಣ್ಣಕ್ಕಿ ಉಪಸ್ಥಿತರಿದ್ದರು.

 


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ