*ಧರ್ಮಟ್ಟಿಯಲ್ಲಿ ಏ.17 ರಿಂದ ಮೂರು ದಿನಗಳ ಕಾಲ ವಿಜ್ಞಾನ ಬೇಸಿಗೆ ಶಿಬಿರ- ಬಸವರಾಜ ಭಜಂತ್ರಿ*
ಮೂಡಲಗಿ: ಕರ್ನಾಟಕ ಜ್ಞಾನ ವಿಜ್ಞಾನ ಸಮೀತಿಯಿಂದ ಮೂಡಲಗಿ ತಾಲೂಕಾ ಘಟಕ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಆಶ್ರಯದಲ್ಲಿ ತಾಲೂಕಿನ ಧರ್ಮಟ್ಟಿ ಗ್ರಾಮದ ಬಡ್ಡಿ ಸೆಂಟ್ರಲ್ ಶಾಲೆಯಲ್ಲಿ ಏ.೧೭ ರಿಂದ ೧೯ರವರೆಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮೀತಿಯ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿಜ್ಞಾನ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮೀತಿಯ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಭಜಂತ್ರಿ ತಿಳಿಸಿದ್ದರು.
ರವಿವಾರ ರಂದು ಪಟ್ಟಣದ ಪ್ರತಿಕಾ ಕಾರ್ಯಾಲಯದ ಪತ್ರಿಕಾಗೋಷ್ಠಿಯಲ್ಲಿ ಶಿಬಿರದ ಬಗ್ಗೆ ಮಾಹಿತಿ ನೀಡಿದ ಅವರು, ಏ.17 ರಂದು ಮುಂಜಾಣೆ 8 ಘಂಟೆಗೆ ಧ್ವಜಾರೋಹಣ, 8 .30 ಕ್ಕೆ ಯೋಗಾಸನ ಹಾಗೂ 10 ಕ್ಕೆ ಉದ್ಘಾಟನೆ ಸಮಾರಂಭದ ದಿವ್ಯ ಸಾನಿಧ್ಯ ಸುಣಧೋಳಿಯ ಶಿವಾನಂದ ಶ್ರೀಗಳ ವಹಿಸುವರು. ಬಿಇಒ ಅಜೀತ ಮನ್ನಿಕೇರಿ ಅಧ್ಯಕ್ಷತೆ ವಹಿಸುವರು. ಖಾನಟ್ಟಿ ಪ್ರೌಢ ಶಾಲೆಯ “ನೈರ್ಮಲ್ಯ ಹಾಗೂ ಆರೋಗ್ಯ” ಅಂತರ್ಜಾಲ ರಸಪ್ರಶ್ನೆ ವಿಜೇತ ವಿದ್ಯಾರ್ಥಿಗಳು ಉದ್ಘಾಟಿಸುವರು. ಏ.17, 18, 19 ರಂದು ಉಪನ್ಯಾಸಕರಿಂದ ವಿವಿಧ ಚಿಂತನ ಗೋಷ್ಠಿ ಜರುಗಲಿವೆ. ಏ.19 ರಂದು ಜರುಗುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಮೀತಿಯ ಅಧ್ಯಕ್ಷ ಬಸವರಾಜ ಭಜಂತ್ರಿ ವಹಿಸುವರು, ಮುಖ್ಯ ಅತಿಥಿಗಳಾಗಿ ಡಾ.ಲಕ್ಷ್ಮಣ ಚೌರಿ, ಪ್ರಾಚಾರ್ಯ ಜಯಾನಂದ ಮಾದರ ಬಡ್ಡಿ ಸೆಂಟ್ರಲ್ ಶಾಲೆಯ ಅಧ್ಯಕ್ಷ ಚನ್ನಬಸು ಬಡ್ಡಿ ಮತ್ತು ಪ್ರಾಚಾರ್ಯ ಸಾಜು.ಪಿ.ರಾಜನ್ ಭಾಗವಹಿಸುವರು.
ಪ್ರತಿಕಾಗೋಷ್ಠಿಯಲ್ಲಿ ವಿಜ್ಞಾನ ಸಮೀತಿ ಉಪಾಧ್ಯಕ್ಷ ಡಾ. ಮಹಾದೇವ ಪೋತರಾಜ, ಸಹಕಾರ್ಯದರ್ಶಿ ರಾಜಶ್ರೀ ನಾಯಿಕ ಮತ್ತು ಕಾರ್ಯಕಾರಣಿ ಸದಸ್ಯೆ ಸರಳಾ ಬಾಂಡೆ ಉಪಸ್ಥಿತರಿದ್ದರು.