ಹಳ್ಳೂರ ಬಸವೇಶ್ವರ ಸೊಸಾಯಿಟಿಗೆ 55.93 ಲಕ್ಷ ಲಾಭ
ಮೂಡಲಗಿ: ತಾಲೂಕಿನ ಹಳ್ಳೂರ ಗ್ರಾಮದ ಬಸವೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ 2023ನೇ ಮಾರ್ಚ ಅಂತ್ಯದಲ್ಲಿ ಒಟ್ಟು ರೂ.55.93 ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ’ ಎಂದು ಸೊಸಾಯಿಟಿ ಅಧ್ಯಕ್ಷ ಕುಮಾರ ಲೋಕನ್ನವರ ಹೇಳಿದರು.
ಸೋಮವಾರದಂದು ಸೊಸಾಯಿಟಿಯ ಪ್ರಗತಿ ಕುರಿತು ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು ಬ್ಯಾಂಕ್‍ವು ರೂ. 27.85 ಕೋಟಿ ಠೇವು, ರೂ. 19.96 ಕೋಟಿ ಸಾಲಗಳು, ರೂ, 82 ಲಕ್ಷ ಶೇರು ಬಂಡವಾಳ, ರೂ, 8.99 ಕೋಟಿ ಗುಂತಾವೆಳು, ರೂ.3.19 ಕೋಟಿ ನಿಧಿಗಳು, ರೂ. 33.17 ಕೋಟಿ ದುಡಿಯುವ ಬಂಡವಾಳ ಹೊಂದಿದೆ ಎಂದು ತಿಳಿಸಿದರು.
ಬ್ಯಾಂಕ್‍ನ ಉಪಾಧ್ಯಕ್ಷ ಬಸಪ್ಪ ಸಂತಿ, ನಿರ್ದೇಶಕರಾದ ಹಣಮಂತ ತೇರದಾಳ, ಶಂಕರ ಬೋಳನ್ನವರ, ನಿಂಗಪ್ಪ ಸುಣಧೋಳಿ, ಶಂಕಯ್ಯ ಹಿರೇಮಠ, ಬಸಪ್ಪ ತಳವಾರ ಸೊಸಾಯಿಟಿಯ ಮುಖ್ಯಕಾರ್ಯನಿರ್ವಾಹಕ ಕೆಂಪಣ್ಣ ಹುಬ್ಬಳಿ ಇದ್ದರು.
IN MUDALGI Latest Kannada News