ಏ.23ರಂದು ಮುನ್ಯಾಳ-ರಂಗಾಪುರ ಸದಾಶಿವಯೋಗೀಶ್ವರ ಜಾತ್ರೆ
ಮೂಡಲಗಿ: ತಾಲ್ಲೂಕಿನ ಮುನ್ಯಾಳ-ರಂಗಾಪೂರದ ಶ್ರೀ ಸದಾಶಿವಯೋಗೀಶ್ವರ ಜಾತ್ರಾ ಮಹೋತ್ಸವದ ರಥೋತ್ಸವವು ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಏ. 23ರಂದು ಸಂಜೆ 5.30ಕ್ಕೆ ಜರುಗಲಿದೆ.
ಬುಧವಾರ ರಥದ ಗಾಲಿಗಳ ಪೂಜೆ ಜರುಗಿತು. ಏ. 21ರಂದು ಸಂಜೆ 6.30ಕ್ಕೆ ಜರುಗಲಿರುವ ಸದ್ವಿಚಾರ ಚಿಂತನ ಕಾರ್ಯಕ್ರಮದಲ್ಲಿ ಹರ್ಲಾಪುರ-ಬಿಜಗುಪ್ಪಿ ಢವಳೇಶ್ವರಮಠದ ರೇಣುಕ ಶಿವಯೋಗಿ ಸ್ವಾಮೀಜಿಗಳಿಂದ ಚಿಂತನ ಇರುವುದು. ಶರೀಪ ಶಿವಯೋಗಿಗಳು, ಈಶ್ವರ ಬಡಿಗೇರ, ಲಕ್ಷ್ಮಣ ದೇವರು, ಅಶ್ವಿನಿ ಚಿಪ್ಪಲಕಟ್ಟಿ ಭಾಗವಹಿಸುವರು. ಮುಖ್ಯ ಅತಿಥಿಗಳಾಗಿ ಗೋಕಾಕ ಲಕ್ಷ್ಮೀ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸವೋತ್ತಮ ಜಾರಕಿಹೊಳಿ ಅವರು ಭಾಗವಹಿಸುವರು.
ಪ್ರಶಸ್ತಿ ಪ್ರದಾನ: ಏ. 22ರಂದು ಸಂಜೆ ನಡೆಯುವ ಸಮಾರಂಭದಲ್ಲಿ ‘ಪುರೋಹಿತ ರತ್ನ’ ಪ್ರಶಸ್ತಿ ಪ್ರದಾನ ಹಾಗೂ ಬಾಲಶೇಖರ ಬಂದಿ ಅವರಿಗೆ ‘ಪತ್ರಿಕಾ ಭೂಷಣ ಪ್ರಶಸ್ತಿ’ ನೀಡಲಾಗುವುದು ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏ. 23ರಂದು ಬೆಳಿಗ್ಗೆ ಮಠದಲ್ಲಿ ಅಯ್ಯಾಚಾರ ಮತ್ತು ಲಿಂಗದೀಕ್ಷೆ ಇರುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.