Breaking News
Home / Recent Posts / ಬಸವಣ್ಣನವರ ಪ್ರಜಾಪ್ರಭುತ್ವದ ತಳಹದಿಯನ್ನು ಹನ್ನೆರಡನೇ ಶತಮಾನದಲ್ಲಿಯೇ ಜಗತ್ತಿಗೆ ಪರಿಚಯಿಸಿದ್ದರು

ಬಸವಣ್ಣನವರ ಪ್ರಜಾಪ್ರಭುತ್ವದ ತಳಹದಿಯನ್ನು ಹನ್ನೆರಡನೇ ಶತಮಾನದಲ್ಲಿಯೇ ಜಗತ್ತಿಗೆ ಪರಿಚಯಿಸಿದ್ದರು

Spread the love

ಮೂಡಲಗಿ: ಮಹಾಮಾನವತಾವಾದಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ತಳಹದಿಯನ್ನು ಹನ್ನೆರಡನೇ ಶತಮಾನದಲ್ಲಿಯೇ ಜಗತ್ತಿಗೆ ಪರಿಚಯಿಸಿದ್ದರು. ತಮ್ಮ ಅದ್ಭುತ ವಚನಗಳ ಮೂಲಕ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಬಸವಣ್ಣನವರ ಜೀವನವು ನಮಗೆಲ್ಲ ಇಂದಿಗೂ ಆದರ್ಶವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು
ರವಿವಾರ ಏ-23 ರಂದು ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಸಭಾಭವನದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ. ಪುಷ್ಪಾರ್ಚನೆ ಮಾಡಿ ಮಾತನಾಡಿದ ಈರಣ್ಣ ಕಡಾಡಿ ಅವರು ಬಸವಣ್ಣನವರು ಸಮಸಮಾಜದ ಕನಸು ಕಂಡು, ಅದನ್ನು ನನಸು ಮಾಡಲು ಶ್ರಮಿಸಿದ ಚೈತನ್ಯಪುರುಷರಾಗಿದ್ದರು.
ಈಗ ನಮ್ಮ ಬಿಜೆಪಿ ಪಕ್ಷವು ದೇಶಕ್ಕೆ ನೀಡಿರುವ ಹೊಸ ಮಂತ್ರವಾದ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಕೂಡ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಸಾಧಿಸುವ ಹೆಗ್ಗುರಿ ಹೊಂದಿದೆ. ಬಸವಣ್ಣನವರು ಹೇಗೆ ಪರಿಪೂರ್ಣ ಪ್ರಗತಿಗೆ ಹಂಬಲಿಸಿದರೋ ಹಾಗೆಯೇ ಬಿಜೆಪಿ ಕೂಡ ಅದೇ ವಿಚಾರವನ್ನು ಹೊಂದಿದೆ ಎಂದರಲ್ಲೇ ರೈತರು, ರೈತರ ಮಕ್ಕಳು, ನೇಕಾರರು, ಅಸಂಘಟಿತ ವಲಯದ ಕಾರ್ಮಿಕರು, ದುರ್ಬಲ ಸಮುದಾಯಗಳು, ಮಹಿಳೆಯರು, ವಯೋವೃದ್ಧರು, ಉದ್ಯಮಿಗಳು ಹೀಗೆ ಎಲ್ಲ ವರ್ಗಗಳ ಹಿತಾಸಕ್ತಿಗಳನ್ನೂ ಆದ್ಯತೆಗಳಾಗಿ ಪರಿಗಣಿಸಿದೆ. ಇದರಿಂದಾಗಿ ಪ್ರತಿಯೊಂದು ವಲಯದಲ್ಲೂ ಹೊಸತನದ ಸ್ಪರ್ಶ ಕಾಣುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಬಸವ ಜಯಂತಿ ನಿಮಿತ್ಯ ಪಟ್ಟಣದಲ್ಲಿ ನಡೆದ ಎತ್ತುಗಳ ಭವ್ಯ ಮೆರವಣಿಯಲ್ಲಿ ಭಾಗವಹಿಸಿ, ಎತ್ತುಗಳಿಗೆ ಪೂಜೆ ಸಲ್ಲಿಸಿ ನಮನ ಸಲ್ಲಿಸಿದರು.
ರಾವಸಾಬ ಬೆಳಕೂಡ, ಬಸವರಾಜ ಕಡಾಡಿ, ಪ್ರಭು ಕಡಾಡಿ, ಹಣಮಂತ ಸಂಗಟಿ, ಈರಣ್ಣ ಮುನ್ನೋಳಿಮಠ, ಶ್ರೀಶೈಲ ತುಪ್ಪದ, ಹಣಮಂತ ಕೌಜಲಗಿ, ಗಿರಮಲ್ಲಪ್ಪ ಸಂಸುದ್ದಿ, ಅಡಿವೆಪ್ಪ ಕುರಬೇಟ, ಶಿವಾನಂದ ಹೆಬ್ಬಾಳ, ಅಜೀತ ಚಿಕ್ಕೋಡಿ, ದಶಗೀರ ಕಮತನೂರ, ರಮೇಶ ಕಡಲಗಿ, ಶ್ರೀಶೈಲ ಕಡಾಡಿ, ಮಾರುತಿ ಹೂಗಾರ, ಶಿವಾನಂದ ಕಡಾಡಿ, ಪರಪ್ಪ ಗಿರೆಣ್ಣವರ ಸೇರಿದಂತೆ ಅನೇಕ ಸಹಕಾರಿಗಳು, ಪಕ್ಷದ ಪ್ರಮುಖರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ