Breaking News
Home / ತಾಲ್ಲೂಕು / ನೂತನವಾಗಿ ರಚಿಸಲ್ಪಟ್ಟಿರುವ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ನೀತಿ ನಿಯಮಾವಳಿಗಳಲ್ಲಿ ಸಾಕಷ್ಟು ಬದಲಾವಣೆ ಕುರಿತು ಮನವಿ ಸಲ್ಲಿಕೆ.

ನೂತನವಾಗಿ ರಚಿಸಲ್ಪಟ್ಟಿರುವ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ನೀತಿ ನಿಯಮಾವಳಿಗಳಲ್ಲಿ ಸಾಕಷ್ಟು ಬದಲಾವಣೆ ಕುರಿತು ಮನವಿ ಸಲ್ಲಿಕೆ.

Spread the love

ಮೂಡಲಗಿ: ನೂತನವಾಗಿ ರಚಿಸಲ್ಪಟ್ಟಿರುವ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ನೀತಿ ನಿಯಮಾವಳಿಗಳಲ್ಲಿ ಸಾಕಷ್ಟು ಬದಲಾವಣೆಯಾಗುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿಯವರ ಮುಖಾಂತರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮೂಡಲಗಿ ತಾಲೂಕಾ ಘಟಕದಿಂದ ಮನವಿ ಸಲ್ಲಿಸಿದರು.
ಶುಕ್ರವಾರದಂದು ಪಟ್ಟಣದ ಬಿಇಒ ಕಛೇರಿಯಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬಿಇಒ ಅವರಿಗೆ ವರ್ಗಾವಣೆ ನಿಯಮಗಳ ಬದಲಾವಣೆ ಕುರಿತು ಮನವಿ ಸಲ್ಲಿಸಿದರು. ಮನವಿಯಲ್ಲಿಹೊಸ ವರ್ಗಾವಣೆ ಮಾರ್ಗಸೂಚಿಯಿಂದ ಶಿಕ್ಷಕರಿಗೆ ಆಗುವ ತೊಂದರೆಗಳನ್ನು ತಿಳಿಸಿದ್ದಾರೆ. ತಾಲೂಕಿನಲ್ಲಿ 25% ಖಾಲಿ ಹುದ್ದೆಗಳಿದ್ದರೆ ವಕಾಶವಿರುವದಿಲ್ಲ ಬದಲಾಗಿ ಎಲ್ಲ ತಾಲೂಕುಗಳಿಗೂ ಮುಕ್ತ ಅವಕಾಶ ನೀಡಬೇಕು. ಪರಸ್ಪರ ವರ್ಗಾವಣೆಗೆ 7 ವರ್ಷ ಕಡ್ಡಾಯ ಸೇವೆ ಬದಲಾಗಿ ಈ ಮೊದಲಿನ 3 ವರ್ಷ ಸೇವೆಯಂತೆ ಮುಂದುವರೆಸುವದು. ಘಟಕದ ಹೊರಗಿನ ವರ್ಗಾವಣ ಮೀತಿಯನ್ನು 2% ಬದಲಾಗಿ 5% ಕ್ಕೆ ಹೆಚ್ಚಿಸುವದು. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಶಾಲೆಯ ಸೇವಾ ಅವಧಿಯನ್ನು ಪರಿಗಣಿಸಿ ಸೇವಾ ಹಿರಿತನಕ್ಕೆ ಆದ್ಯತೆ ನೀಡಬೇಕು. ಪತಿ ಪತ್ನಿ ಪ್ರಕರಣಗಳಲ್ಲಿ ಸರಕಾರಿ ನೌಕರರಾಗಿದ್ದರೆ ಆದ್ಯತೆ ನೀಡಿ ಅರೆ ಸರಕಾರಿ ನೌಕರರಿಗೂ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.
ಸೇವಾ ನಿರತ ಪದವೀಧರ ಶಿಕ್ಷಕರಿಗೆ ನ್ಯಾಯ ದೊರಕಿಸಿ ಕೋಡಬೇಕು. ವರ್ಗಾವಣೆಯಲ್ಲಿ ಪುರುಷ ಮಹಿಳೆ ತಾರತಮ್ಯ ತೆಗೆದು ಸೇವಾ ಜೇಷ್ಠತೆ ವರ್ಗಾವಣೆಯಲ್ಲಿ ಆದ್ಯತೆ ನೀಡಬೇಕು. ಹಿಂದೀ ಭಾಷಾ ಮತ್ತು ದೈಹಿಕ ಶಿಕ್ಷಣ ಶಿಕ್ಷಕರಿಗೆ ಕೌನ್ಸಲಿಂಗದಲ್ಲಿ ಹುದ್ದೆಗಳ ಸಮಸ್ಯೆ ಇದ್ದು, 6 ರಿಂದ 8 ನೇ ತರಗತಿಯವರೆಗೆ ಖಾಲಿ ಹುದ್ದೆಗಳನ್ನು ನೀಡುವದು. ಮುಖ್ಯೋಪಾಧ್ಯಯರ ವರ್ಗಾವಣೆಯಲ್ಲಿ ಶೇಕಡಾ ಮಿತಿ ನಿಗದಿಗೋಲಿಸದೆ ಖಾಲಿ ಇರುವ ಎಲ್ಲ ಹುದ್ದೆಗಳನ್ನು ನೀಡಬೇಕು. ಪ್ರಸಕ್ತ ಸಾಲಿನಲ್ಲಿ ವಿಕಲಚೇತನ ಶಿಕ್ಷಕರಿಗೆ ಸೇವಾವಧಿಯಲ್ಲಿ ಒಂದು ಬಾರಿ ಮಾತ್ರ ವರ್ಗಾವಣೆಗೆ ಅವಕಾಶ ನೀಡಿದ್ದು ಈ ನಿಯಮ ರದ್ದುಗೋಳಿಸಿ ಮೊದಲಿನಂತೆ ಆದ್ಯತೆ ನೀಡಬೇಕು. ವಲಯ ವರ್ಗಾವಣೆಯಲ್ಲಿ ದಂಪತಿ ಪ್ರಕರಣಗಳಿಗೆ ವಿನಾಯಿತಿ ನೀಡುವ ಮೂಲಕ ಶಿಕ್ಷಕರಿಗೆ ಅನುಕೂಲ ಮಾಡಿಕೊಡ ಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿದ ಬಿಇಒ ಅಜಿತ ಮನ್ನಿಕೇರಿ ಮಾತನಾಡಿ, ಶಿಕ್ಷಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೇಲಾಧಿಕಾರಿಗಳಿಗೆ ಹಾಗೂ ಸರಕಾರಕ್ಕೆ ವರದಿ ನೀಡಲಾಗುವದು. ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಪ್ರಾರಂಭಗೊಳ್ಳಲಿದ್ದು ಶಿಕ್ಷಕ ಸಮೂಹ ಸಹಕಾರ ನೀಡಬೇಕು. ಶಿಕ್ಷಕರಿಗೆ ಅಗತ್ಯವಿರುವ ಎಲ್ಲ ಸೇವೆಗಳನ್ನು ಸಕಾಲದಲ್ಲಿ ಪೂರೈಕೆ ಮಾಡಲಾಗುವದು ಎಂದರು.
ಈ ಸಂದರ್ಭದಲ್ಲಿ ಕಛೇರಿ ಪಂತ್ರಾಂಕಿತ ವ್ಯವಸ್ಥಾಪಕ ಪಿ.ಎಚ್ ಒಂಟಿ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸಿದ್ರಾಮ ಲೋಕನ್ನವರ, ತಾಲೂಕಾಧ್ಯಕ್ಷ ಬಿ.ಆರ್ ತರಕಾರ, ಕಾರ್ಯದರ್ಶಿ ಎಲ್ ಎಮ್ ಬಡಕಲ, ಪದಾಧಿಕಾರಿಗಳಾದ ಆರ್.ಎಮ್ ಮಹಾಲಿಂಗಪೂರ, ಮಾಲತೇಶ ಸಣ್ಣಕ್ಕಿ, ಎಡ್ವಿನ್ ಪರಸಣ್ಣವರ, ಬಿ.ಬಿ ಕಿವಟಿ, ಮಂಜುಳಾ ಗೀದಿ, ಎಸ್.ಎಮ್ ಮಂಗಿ, ಎಫ್.ಡಿ ದೊಡಮನಿ, ಎಸ್.ವಿ ಸೋಮವ್ವಗೋಳ, ಕೆ.ಎಲ್ ಮೀಶಿ ಮತ್ತಿತರರು ಉಪಸ್ಥಿತರಿದ್ದರು.


Spread the love

About inmudalgi

Check Also

ತಾಯಿಯ ಎದೆ ಹಾಲಿನ ಮಹತ್ವ” ಬಗ್ಗೆ ಜಾಗೃತಿ ಕಾರ್ಯಕ್ರಮ

Spread the love ಮೂಡಲಗಿ : ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಎದೆಹಾಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ