Breaking News
Home / Recent Posts / ವಿವಿಧಡೆ ಶ್ರೀ ಭಗೀರಥರ ಜಯಂತಿ ಆಚರಣೆ

ವಿವಿಧಡೆ ಶ್ರೀ ಭಗೀರಥರ ಜಯಂತಿ ಆಚರಣೆ

Spread the love

ಮೂಡಲಗಿ ಪಟ್ಟಣದಲ್ಲಿ ವಿವಿಧಡೆ ಶ್ರೀ ಭಗೀರಥರ ಜಯಂತಿ ಆಚರಣೆ

ಮೂಡಲಗಿ: ಪಟ್ಟಣದ ಭಗೀರಥ ಉಪ್ಪಾರ ಸಮಾಜ ಸೇವಾ ಸಂಘ ಮತ್ತು ತಾಲೂಕಾ ಉಪ್ಪಾರ ಸಮಾಜ ಸಂಘದ ಆಶ್ರಯದಲ್ಲಿ ಮೂಡಲಗಿ ಪಟ್ಟಣದ ಗಣೇಶ ನಗರದಲ್ಲಿನ ಶ್ರೀ ಭಗೀರಥ ವೃತ್ತದಲ್ಲಿ ಗುರುವಾರದಂದು ಶ್ರೀ ಭಗೀರಥ ಮಹರ್ಷಿ ಜಯಂತಿಯನ್ನು ಆಚರಿಸಲ್ಲಾಯಿತು.
ಭಗೀರಥ ಉಪ್ಪಾರ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವಬಸು ಹಂದಿಗುಂದ ಅವರು ಶ್ರೀ ಭಗೀರಥ ಮಹರ್ಷಿ ಅವರ ಭಾವಚಿತ್ರಕ್ಕೆ ಪೂಜೆ ಪುಪ್ಪಾರಚಣೆ ನೆರವೇರಿಸಿ ಮಾತನಾಡಿ, ಶ್ರೀ ಭಗೀರಥ ಮಹರ್ಷಿ ಅವರು ತಮ್ಮ ಘೋರ ತಪಸ್ಸಿನಿಂದ ಶಿವನ ಮುಡಿಯಿಂದ ಗಂಗಯನ್ನು ಧರೆಗಿಳಿಸಿದ ಛಲ ಇಂದಿನ ಯುವಜನತೆಗೆ ಮಾದರಿಯಾಗಬೇಕು, ಭೂಮಿಗೆ ನೀರು ತರುವ ನಿಟ್ಟಿನಲ್ಲಿ ಭಗೀರಥರು ತೋರಿದ ಬದ್ಧತೆಯಿಂದ ನಾವು ಅವರನ್ನೂ ಇಂದಿಗೂ ಸ್ಮರಿಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಮೂಡಲಗಿ ತಾಲೂಕಾ ಉಪ್ಪಾರ ಸಮಾಜ ಸಂಘದ ಅಧ್ಯಕ್ಷ ರಾಮಣ್ಣಾ ಹಂದಿಗುಂದ, ಪರಸಪ್ಪ ತಿಗಡಿ, ರಂಗಪ್ಪ ಕಪಲಗುದ್ದಿ, ಮಹಾದೇವ ಮಲಗೌಡರ, ಭರಮಣ್ಣ ಕಪಲಗುದ್ದಿ, ಶಿವಬಸು ಕಂಕಣವಾಡಿ, ಬಸವರಾಜ ಹುಚನ್ನವರ, ಅಲ್ಲಪ್ಪ ಕಂಕಣವಾಡಿ, ರಾಘವೇಂದ್ರ ಕಂಕಣವಾಡಿ ಹಾಗೂ ಉಪ್ಪಾರ ಸಮಾಜ ಬಾಂಧವರು ಮತ್ತಿತರರು ಇದ್ದರು.
ತಾಲೂಕಾ ಆಡಳಿತದಿಂದ: ಮೂಡಲಗಿ ತಹಶೀಲ್ದಾರ ಕಛೇರಿಯಲ್ಲಿ ತಾಲೂಕಾ ಆಡಳಿತದಿಂದ ಜರುಗಿದ ಶ್ರೀ ಭಗೀರಥರ ಜಯಂತಿ ಕಾರ್ಯಕ್ರಮ ತಹಶೀಲ್ದಾರ ಪ್ರಶಾಂತ ಚನಗೊಂಡ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಸಮಯದಲ್ಲಿ ಉಪ್ಪಾರ ಸಮಾಜದ ಮುಖಂಡ ಸುಭಾಸ ಪೂಜೇರಿ, ಗುಂಡಪ್ಪ ಕಮತೆ, ವಿ.ಪಿ.ನಾಯ್ಕ ಹಾಗೂ ತಹಶೀಲ್ದಾರ ಕಛೇರಿ ಸಿಬ್ಬಂದಿ ವರ್ಗದವರು ಇದ್ದರು.
ಭಗೀರಥ ನಗರ: ಮೂಡಲಗಿ ಪಟ್ಟಣ ಶ್ರೀ ಭಗೀರಥ ನಗರದ ಕಂಕಣವಾಡಿ ಗಲ್ಲಿಯ ಹತ್ತಿರ ಶ್ರೀ ಭಗೀರಥ ವೃತ್ತದಲ್ಲಿ ಜರುಗಿದ ಶ್ರೀ ಭಗೀರಥ ಜಯಂತಿಯಲ್ಲಿ ಭಗೀರಥರ ಭಾವಚಿತ್ರಕ್ಕೆ ಈರಯ್ಯಾ ಹಿರೇಮಠ ಅವರು ಪೂಜೆಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮುಖೇಶ ಕಂಕಣವಾಡಿ, ಅಶೋಕ ಕಂಕಣವಾಡಿ, ಸುಭಾಸ ಪೂಜೇರಿ, ಲಕ್ಷ್ಮಣ ಅಡಿಹುಡಿ, ಸುಭಾಸ ಗೋಡ್ಯಾಗೋಳ, ಸುಭಾಸ ಕಂಕಣವಾಡಿ, ಅಡಿವೇಪ್ಪ ಶಿರಸಂಗಿ, ಮಹಾದೇವ ಕಂಕಣವಾಡಿ ಅಜಪ್ಪ ಕಂಕಣವಾಡಿ ಹಾಗೂ ಉಪ್ಪಾರ ಸಮಾಜ ಬಾಂಧವರು ಮತ್ತಿತರರು ಇದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ