ಮೂಡಲಗಿ: ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದಿ ಭಾಷಾ ಶಿಕ್ಷಕರಿಗೆ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ( ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕರಡು ನಿಯಮಾವಳಿಯಿಂದ ತೊಂದರೆಯಾಗುತ್ತಿದೆ. ಅವೈಜ್ಞಾನಿಕ ನಿಯಮವಾಗಿರುವದರಿಂದ ಹಿಂದಿ ಭಾಷೆ ಶಿಕ್ಷಕರಿಗೆ ಸ್ನೇಹಿಯುತ ವರ್ಗಾವಣೆ ನಿಯಮ ಜಾರಿಗೆ ತರುವಂತೆ ರಾಜ್ಯ ಪ್ರಾಥಮಿಕ ಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘದ ರಾಜ್ಯ ಗೌರವಾಧ್ಯಕ್ಷೆ ಮಂಜುಳಾ ಗೀದಿ ಆಗ್ರಹಿಸಿದ್ದಾರೆ.
ಅವರು ಪಟ್ಟಣದ ಬಿಇಒ ಕಛೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ‘ಹಿಂದಿ ಭಾಷಾ’ ಶಿಕ್ಷಕರಿಗೆ ಆಗಿರುವ ಅವೈಜ್ಞಾನಿಕ ಕರಡು ಕುರಿತು ಮನವಿ ಸಲ್ಲಿಸಿ ಮಾತನಡಿದರು. ರಾಜ್ಯ ಸರಕಾರವು ಪ್ರಾಥಮಿಕ ಶಿಕ್ಷಣದಲ್ಲಿ 1 ರಿಂದ 5 ನೇ ತರಗತಿ, 6 ರಿಂದ 8 ನೇ ತರಗತಿ ಎಂದು ಹುದ್ದೆಗಳನ್ನು ಸೃಷ್ಠಿ ಮಾಡಿತು. ಸದ್ಯದ ಪರಿಸ್ಥಿತಿಯಲ್ಲಿ ಈ ಮೊದಲು ನಾವು ಹಿಂದಿ ಭಾಷಾ ಶಿಕ್ಷಕರೆಂದು ಆಯ್ಕೆಯಾಗಿದ್ದು ಈಗಿನ ನಿಯಮಾವಳಿ ಪ್ರಕಾರ 1 ರಿಂದ 5 ನೇ ತರಗತಿಯ ಶಿಕ್ಷಕರೆಂದು ಪರಿಗಣಿಸಿದ್ದಾರೆ. ಆದರೆ ಹಿಂದಿ ಭಾಷೆ ಇರುವದು 6 ನೇ ತರಗತಿಯಿಂದ. ಪ್ರಾಥಮಿಕ ವಿಭಾಗದಲ್ಲಿ ಬೋಧಿಸಲು ಹೇಗೆ ಸಾದ್ಯವಾಗುವದು. ವರ್ಗಾವಣೆಯಲ್ಲಿ ನಮಗೆ ಯಾವುದೇ ರೀತಿಯಲ್ಲಿ ಅವಕಾಶವಿರುವದಿಲ್ಲ. ಹಿಂದಿ ಭಾಷಾ ಶಿಕ್ಷಕರಿಗೆ ಆಗಿರುವ ತೊಂದರೆಯನ್ನು ಸರಿಪಡಿಸಿ ಸಮಸ್ಯೆಗೆ ಸೂಕ್ತ ಪರಿಹಾರ ಸೂಚಿಸಲು ವಿನಂತಿಸಿದ್ದಾರೆ.
ಮನವಿ ಸ್ವೀಕರಿಸಿದ ಬಿಇಒ ಅಜಿತ ಮನ್ನಿಕೇರಿ ಮಾತನಾಡಿ, ಹಿಂದಿ ಭಾಷಾ ಶಿಕ್ಷಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೇಲಾಧಿಕಾರಿಗಳಿಗೆ ಹಾಗೂ ಸರಕಾರಕ್ಕೆ ವರದಿ ನೀಡಲಾಗುವದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಛೇರಿ ಪಂತ್ರಾಂಕಿತ ವ್ಯವಸ್ಥಾಪಕ ಪಿ.ಎಚ್ ಒಂಟಿ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸಿದ್ರಾಮ ಲೋಕನ್ನವರ, ತಾಲೂಕಾಧ್ಯಕ್ಷ ಬಿ.ಆರ್ ತರಕಾರ, ಕಾರ್ಯದರ್ಶಿ ಎಲ್ ಎಮ್ ಬಡಕಲ, ಪದಾಧಿಕಾರಿಗಳಾದ ಆರ್.ಎಮ್ ಮಹಾಲಿಂಗಪೂರ, ಮಾಲತೇಶ ಸಣ್ಣಕ್ಕಿ, ಎಡ್ವಿನ್ ಪರಸಣ್ಣವರ, ಬಿ.ಬಿ ಕಿವಟಿ, ಶಿವಬಸು ಶೆಟ್ಟರ, ಎಸ್.ಎಮ್ ಮಂಗಿ, ಎಫ್.ಡಿ ದೊಡಮನಿ, ಎಸ್.ವಿ ಸೋಮವ್ವಗೋಳ, ಕೆ.ಎಲ್ ಮೀಶಿ ಮತ್ತಿತರರು ಉಪಸ್ಥಿತರಿದ್ದರು.
Home / ತಾಲ್ಲೂಕು / ಹಿಂದಿ ಭಾಷಾ ಶಿಕ್ಷಕರಿಗೆ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ( ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕರಡು ನಿಯಮಾವಳಿಯಿಂದ ತೊಂದರೆ.
Check Also
ಬೀದರ ಡಾ|| ಶಿವಕುಮಾರ ಸ್ವಾಮೀಜಿಗಳಿಂದ ಡಿ.3ರಿಂದ 15ನೇ ಸತ್ಸಂಗ ಸಮ್ಮೇಳನ –ವೇ.ಶಂಕರಯ್ಯಾ ಹಿರೇಮಠ
Spread the loveಬೀದರ ಡಾ|| ಶಿವಕುಮಾರ ಸ್ವಾಮೀಜಿಗಳಿಂದ ಡಿ.3ರಿಂದ 15ನೇ ಸತ್ಸಂಗ ಸಮ್ಮೇಳನ –ವೇ.ಶಂಕರಯ್ಯಾ ಹಿರೇಮಠ ಮೂಡಲಗಿ: ಪಟ್ಟಣದ ಆರ್.ಡಿ.ಸಂಸ್ಥೆಯ …