Breaking News
Home / Recent Posts / ಸ್ಕೌಟ್ಸ್ ಮತ್ತು ರೋವರ್ಸ್ ಬೇಸಿಗೆ ಶಿಬಿರ ಉದ್ಘಾಟನೆ

ಸ್ಕೌಟ್ಸ್ ಮತ್ತು ರೋವರ್ಸ್ ಬೇಸಿಗೆ ಶಿಬಿರ ಉದ್ಘಾಟನೆ

Spread the love

ಸ್ಕೌಟ್ಸ್ ಮತ್ತು ರೋವರ್ಸ್ ಬೇಸಿಗೆ ಶಿಬಿರ ಉದ್ಘಾಟನೆ

ಮೂಡಲಗಿ: ಕೆವಲ ವಿದ್ಯಾರ್ಥಿಗಳು ಅಷ್ಠೆ ಅಲ್ಲದೆ ಪ್ರತಿಯೋಬ್ಬ ಮನುಷ್ಯನ ಜೀವನದಲ್ಲಿ ಸ್ಕೌಟ್ಸ್-ಗೈಡ್ಸ್, ರೋವರ್ಸ್-ರೆಂಜೇರ್ಸ್ ಇವುಗಳು ಜೀವನದಲ್ಲಿ ಎದುರಾಗುವ ಎಂತಹ ಸಮಸ್ಯೆಗಳನ್ನು ಸಹಜವಾಗಿ ಎದುರಿಸುವ ಸಾಮಥ್ರ್ಯವನ್ನು ನೀಡುವ ಸಾಧನಗಳಾಗಿವೆ ಎಂದು ಎಂಇಎಸ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಂiÀದ ಪ್ರಾಚಾರ್ಯ ಪ್ರೊ.ಎ.ಪಿ.ರಡ್ಡಿ ಹೇಳಿದರು.
ಅವರು ಶುಕ್ರವಾರದಂದು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಎಸ್.ಎಸ್.ಆರ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಶ್ರಯದಲ್ಲಿ ಸ್ಕೌಟ್ಸ್ ಮತ್ತು ರೋವರ್ಸ ವಿದ್ಯಾರ್ಥಿಗಳಿಗಾಗಿ ಮೂರು ದಿನಗಳ ಕಾಲ ಹಮ್ಮಿಕೊಂಡ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಮನುಷ್ಯ ಧೈರ್ಯವಾಗಿ ಜೀವನ ಸಾಗಿಸಲು ಸ್ಕೌಟ್ಸ್-ಗೈಡ್ಸ್, ರೋವರ್ಸ್-ರೆಂಜೇರ್ಸ್ ಅತ್ಯಂತ ಮಹತ್ವದಾಗಿದೆ, ವಿದ್ಯಾರ್ಥಿಗಳು ಮುಕ್ತವಾಗಿ ಸ್ಕೌಟ್ಸ್‍ವನ್ನು ಆಯ್ಕೆ ಮಾಡಿಕೊಳ್ಳ ಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಶಿಬಿರವನ್ನು ಉದ್ಘಾಟಿಸಿದ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಮಯ, ಪರಿಸರ ಕಾಳಜಿಯನ್ನು ಮೈಗೂಡಿಸಿಕೊಂಡು ಜೀವನವನ್ನು ಉಜ್ವಲ ಗೊಳಿಸಕೊಳ್ಳಬೇಕೆಂದರು.
ಮೂಡಲಗಿ ರೋವರ್ಸ್ ಘಟಕದ ಕಾರ್ಯದರ್ಶಿ ಬಸವರಾಜ ನಿಡೋಣಿ ಮಾತನಾಡಿ, ಸ್ಕೌಟ್ಸ್-ಗೈಡ್ಸ್, ರೋವರ್ಸ್-ರೆಂಜೇರ್ಸ್ ಶಿಬಿರಾರ್ಥಿಗಳು ಮೂಲಭೂತ ತತ್ವಗಳ ಹಾಗೂ ಪ್ರಾರ್ಥನೆ, ನಿಯಮಗಳು ವಿದ್ಯಾರ್ಥಿ ಜೀವನಕ್ಕೆ ಅಳವಡಿಸಿಕೊಂಡಾಗ ಯಶಸನ್ನು ಕಾಣಬಹುದು ಎಂದವರು ಶಿಬಿರಾರ್ಥಿಗಳಿಗೆ ಸ್ಕೌಟ್ಸ್ ಮತ್ತು ರೋವರ್ಸ ನಿಯಮಗಳನ್ನು ಪ್ರಾತ್ಯಕ್ಷಿಕ್ಕೆ ನೀಡಿದರು.
ಸಮಾರಂಭದ ವೇದಿಕೆಯಲ್ಲಿ ಎಸ್.ಎಸ್.ಆರ್ ಪ.ಪೂ ಕಾಲೇಜಿನ ಪ್ರಾಚಾರ್ಯ ಎಸ್.ಡಿ.ತಳವಾರ, ಉಪಪ್ರಾಚಾರ್ಯ ಕೆ.ಎಸ್.ಹೊಸಟ್ಟಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಂ.ಬೊರಗಲ್ಲ, ಮಹಾವಿದ್ಯಾಲಯದ ರೋವರ್ಸ್ ಮುಖ್ಯಸ್ಥ ಪ್ರೊ.ಜಿ.ವಿ.ನಾಗರಾಜ, ಎಸ್.ಎಸ್.ಆರ್ ಪ.ಪೂ ಕಾಲೇಜಿನ ರೋವರ್ಸ್ ಮುಖ್ಯಸ್ಥ ಬಿ.ಜಿ.ಗಡಾದ, ಎಸ್.ಎಸ್.ಆರ್ ಪ್ರೌಢ ಶಾಲೆಯ ಸ್ಕೌಟ್ಸ್ ಶಿಕ್ಷಕ ಬಿ.ಕೆ.ಕಾಡಪ್ಪಗೋಳ ಮತ್ತಿತರರು ಇದ್ದರು. ಶಿಬಿರದಲ್ಲಿ 65 ಶಿಬಿರಾರ್ಥಿಗಳು ಭಾಗವಹಿಸಿದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ