ಮೂಡಲಗಿ : ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಚಚ್ಚ ಭಾರತf ಮಿಷನ್ ಯೋಜನಯಡಿಯಲ್ಲಿ ಜಿಲ್ಲಾ ಪಂಚಾಯತ ವತಿಯಿಂದ ಮಂಜೂರಾದ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಯಾದವಾಡ ಗ್ರಾಮದ ದೇವಸ್ಥಾನದ ಆವರಣದಲ್ಲಿ ಬುಧವಾರ ಜಿಲ್ಲಾ ಪಂಚಾಯತ ಸದಸ್ಯ ಗೋವಿಂದ ಕೊಪ್ಪದ ಹಾಗೂ ಗ್ರಾಮ ಅಧ್ಯಕ್ಷ ವಾಯ್ .ಎಲ್.ನ್ಯಾಮಗೌಡರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಜಿ.ಪಂ.ಸದಸ್ಯ ಗೋವಿಂದ ಕೊಪ್ಪದ,ಗ್ರಾ.ಪಂ.ಅಧ್ಯಕ್ಷ ವಾಯ್.ಎಲ್. ನ್ಯಾಮಗೌಡರ,ಗ್ರಾಮದ ಜನತೆಯ ಆರೋಗ್ಯ ಮತ್ತು ಸ್ವಚ್ಚತೆಗಾಗಿ ಗ್ರಾಮಸ್ಥರು ವಾಹನದಲ್ಲಿ ಕಸ ಹಾಕಲು ಸಹಕರಿಸಬೇಕೇಂದು ಮನವಿ ಮಾಡಿದರು.ಅಭಿವೃದ್ಧಿ ಅಧಿಕಾರಿಗಳಾದ ಎಂ.ಎಚ್.ಹುಡೇದ ಅವರು ಗ್ರಾಮದಲ್ಲಿ ಕಸ ವಿಲೇವಾರಿ ವಾಹನದ ಮಹತ್ವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಗ್ರಾಮದ ಹಿರಿಯರಾದ ರಂಗಪ್ಪ ಇಟ್ಟಣ್ಣವರ, ಬಸವರಾಜ ಹಿಡಕಲ್ಲ,
ಎಂ.ಎಸ್.ಚೆಕ್ಕೆನ್ನವರ, ಬಸವರಾಜ ಕೆರಿ, ಮಲ್ಲಪ್ಪ ಮಾಳೇದ, ಶ್ರೀಶೈಲ ಢವಳೇಶ್ವರ, ಈರಣ್ಣ ಬಳಿಗಾರ, ಗ್ರಾ.ಪಂ.ಸದಸ್ಯರಾದ ಚನ್ನಪ್ಪ ಇಜೇರಿ, ಸದಾಶಿವ ಅರಳಿಮಟ್ಟಿ ಹಾಗೂ ಗ್ರಾ.ಪಂ.ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.