ಮೂಡಲಗಿಯ ಢವಳೇಶ್ವರ ಓಣಿಯಲ್ಲಿರುವ ಶ್ರೀ ಲಕ್ಷ್ಮೇದೇವಿ ನೂತನ ದೇವಸ್ಥಾನ
ಮೇ 29ರಂದು ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ
ನಂಬಿದ ಭಕ್ತರಿಗೆ ವರ ನೀಡುವ ಮೂಡಲಗಿ ಲಕ್ಷ್ಮೀದೇವಿ
ಮೂಡಲಗಿ: ಇಲ್ಲಿಯ ಢವಳೇಶ್ವರ ಓಣಿಯ ಶ್ರೀ ಲಕ್ಷ್ಮೀದೇವಿ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಜಾತ್ರೆಯು ಮೇ 29, 30ರಂದು ಜರುಗಲಿದೆ.
ಮೇ 29ರಂದು ಬೆಳಿಗ್ಗೆ ಬಸವೇಶ್ವರ ಕಲ್ಯಾಣ ಮಂಟಪದಿಂದ ಕುಂಭ ಮೇಳ, ಆರತಿ ವಿವಿಧ ವಾದ್ಯಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗುವುದು. ದೇವಸ್ಥಾನದಲ್ಲಿ ಹೋ, ಹವನಗಳೊಂದಿಗೆ ಲಕ್ಷ್ಮೀದೇವಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಜರುಗುವುದು, ಮಧ್ಯಾಹ್ನ 12ರಿಂದ ಮಹಾಪ್ರಸಾದ ಇರುವುದು. ರಾತ್ರಿ 9ಕ್ಕೆ ಡೊಳ್ಳಿನ ಹಾಡುಗಳು ಇರುವವು.
ಇತಿಹಾಸ: ನೂರಾರು ವರ್ಷಗಳ ಪೂರ್ವದಲ್ಲಿ ಢವಳೇಶ್ವರ ಓಣಿಯಲ್ಲಿ ಮರವೊಂದರ ಬಳಿಯಲ್ಲಿ ಶಿಲೆಯೊಂದು ಉದ್ಭವಿಸಿದ್ದು, ಊರಿನ ರೈತಾಪಿ ಜನರೆಲ್ಲ ‘ಊರಿಗೆ ಲಕ್ಷ್ಮೀ ಬಂದಳು’ ಎಂದು ಭಕ್ತಿಯಿಂದ ಸಂಭ್ರಮಿಸಿ ಪೂಜೆಯನ್ನು ಮಾಡಿಕೊಂಡು ಬಂದಿದ್ದಾರೆ. ನಂತರ ಲಕ್ಷ್ಮೀ ಪಾದಗಟ್ಟೆ ಎಂದು ಭಕ್ತರು ಆರಾಧಿಸುತ್ತಿರುವರು. 5-6 ದಶಕಗಳ ಪೂರ್ವದಲ್ಲಿ ದಿ. ಚನ್ನಪ್ಪ ಢವಳೇಶ್ವರ ಹಾಗೂ ದಿ. ಗಿರೇಪ್ಪ ಢವಳೇಶ್ವರ ಸಹೋದರರು ಚಿಕ್ಕದಾದ ಗುಡಿಯನ್ನು ನಿರ್ಮಿಸಿ ಅತ್ಯಂತ ಭಕ್ತಿಯಿಂದ ಪೂಜೆಯನ್ನು ಮಾಡಿಕೊಂಡು ಬಂದಿರುವುವರು. ಲಕ್ಷ್ಮೀದೇವಿಗೆ ಅಪಾರ ಭಕ್ತವೃಂದವು ಇದ್ದು, ದೇವಿಯ ದರ್ಶನ ಮಾಡಿದವರಿಗೆ ಮತ್ತು ಇಷ್ಟಿತಾರ್ಥ ನೆರವೇರಿಸುವ ಲಕ್ಷ್ಮೀ ಎಂದು ಭಕ್ತರಲ್ಲಿ ನಂಬಿಕೆ ಬೇರೂರಿದೆ. ಹೀಗಾಗಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಭಕ್ತರು ವಿಶೇಷ ಪೂಜೆ ಮತ್ತು ಉಡಿ ತುಂಬಿ ಹರಕೆ ಹೊರುವರು. ಮೂಲದಲ್ಲಿದ್ದ ಚಿಕ್ಕ ಗುಡಿಯು ಶಿಥಿ¯ಗೊಂಡಿದ್ದರಿಂದ ಈಗ ಢವಳೇಶ್ವರ ಕುಟುಂಬದವರು ರೂ. 10 ಲಕ್ಷವರೆಗೆ ಭಕ್ತಿ ಸೇವೆ ಮಾಡಿ ಜೀರ್ಣೋದ್ದಾರಗೊಳಿಸಿದ್ದಾರೆ.
ಜಾತ್ರೆ: ಪ್ರತಿ ವರ್ಷದಂತೆ ಈ ವರ್ಷವು ಮೇ 30ರಂದು ಶ್ರೀ ಲಕ್ಷ್ಮೀದೇವಿ ಜಾತ್ರೆ ಇರುವುದು. ಬೆಳಿಗ್ಗೆ 8ಕ್ಕೆ ದೇವಿಗೆ ಅಭಿಷೇಕ, ಉಡಿ ತುಂಬುವುದು ಮತ್ತು ಮಧ್ಯಾಹ್ನ 12ಕ್ಕೆ ಮಹಾಪ್ರಸಾದ ಇರುವುದು.
ಉದ್ಘಾಟನೆ: ಮೂಡಲಗಿಯ ಶಿವಬೋಧರಂಗ ಮಠದ ಪೀಠಾಧಿಪತಿಗಳಾದ ದತ್ತಾತ್ರೇಯಬೋಧ ಸ್ವಾಮೀಜಿ, ಶ್ರೀಧರಬೋಧ ಸ್ವಾಮೀಜಿ ಹಾಗೂ ಸುಣಧೊಳಿಯ ಶಿವಾನಂದ ಸ್ವಾಮೀಜಿಯವರು ಸಾನ್ನಿಧ್ಯವಹಿಸುವರು. ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಗಿರೇಪ್ಪ ಢವಳೇಶ್ವರ ಅವರು ನೂತನ ದೇವಸ್ಥಾನವನ್ನು ಉದ್ಘಾಟಿಸುವರು ಎಂದು ಜಾತ್ರಾ ಸಮಿತಿಯವರು ತಿಳಿಸಿದ್ದಾರೆ.