ಮೂಡಲಗಿ : ಮಗುವಿನ ಕಲಿಕೆ ಫಲಪ್ರದವಾಗುವ ನಿಟ್ಟಿನಲ್ಲಿ ಶಿಕ್ಷಕ ಸಮೂಹ, ಮಾರ್ಗದರ್ಶಿ ಸಂಪನ್ಮೂಲ ವ್ಯಕ್ತಿಗಳ ಹಾಗೂ ಪಾಲಕರ ಕಾಳಜಿ ಅತ್ಯಾವಶ್ಯಕವಾಗಿದೆ. ಮಗು ಕೇಂದ್ರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಕ್ಕಳ ಭವಿಷ್ಯತ್ತಿನ ದೃಷ್ಠಿಯಲ್ಲಿ ಉತ್ತಮ ಪ್ರಜೆಗಳನ್ನಾಗಿಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಆರೀಫ್‍ಹುಸೇನ ಟೋಪಿಚಾಂದ ಹೇಳಿದರು.
ಸೋಮವಾರ ಸಮೀಪದ ಸಂಗನಕೇರಿ ಗ್ರಾಮದ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಮೂಡಲಗಿ ವಲಯದ ಉರ್ದು ಶಿಕ್ಷಕರ ಶೈಕ್ಷಣಿಕ ಮಾರ್ಗಸೂಚಿ ಕುರಿತು ವರ್ಷದ ಪ್ರಥಮ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು. ಮಗು ಕೇಂದ್ರಿತ ಕಲಿಕೆಯಾದಾಗ ಮಾತ್ರ ಶಿಕ್ಷಣ ಕ್ಷೇತ್ರ ವಿವಿಧ ಆಯಾಮಗಳಲ್ಲಿ ಮಗುವಿನ ವಿಕಸನ ಸಾಧ್ಯವಾಗುವದು. ಶಿಕ್ಷಣ ಇಲಾಖೆಯಿಂದ ದೊರೆಯುವ ವಿವಿಧ ಯೋಜನೆಗಳು, ಪ್ರೋತ್ಸಾಹಕಗಳು, ಸ್ಥಳೀಯ ಚುನಾಯಿತ ಪ್ರತಿನಿಧಿಗಳ, ಶಾಲಾ ಉಸ್ತುವಾರಿಗಳ, ಅಧಿಕಾರಿ ವರ್ಗದವರ ಸಹಕಾರದಿಂದ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಡಿ.ಕೆ ಜಮಾದಾರ, ಎಸ್.ಎ ಮುಲ್ಲಾ, ಎ.ಜಿ ಮನಿಯಾರ,, ಎಮ್.ಕೆ ರೋನ, ಎಮ್.ಎಮ್ ಬೋಜಗಾರ, ಎ.ಎಮ್ ಬಾಗವಾನ, ಎಸ್. ಬಾಗಸಿರಾಜ, ಪಿ.ಕೆ ಪಠಾಣ, ಎಮ್.ಎಸ್ ಶೇಖ ಹಾಗೂ ಶೈಕ್ಷಣಿಕ ವಲಯದ ಉರ್ದು ಶಿಕ್ಷಕ ಸಮೂಹದವರು ಹಾಜರಿದ್ದರು.