Breaking News
Home / ತಾಲ್ಲೂಕು / ಮನುಷ್ಯನಿಗೆ ಮಾನಸಿಕ ನೆಮ್ಮದಿಯನ್ನು ನೀಡುವ ಅಪೂರ್ವ ಶಕ್ತಿಯು ಯೋಗದಲ್ಲಿದೆ– ಬಿ.ಇ.ಓ ಅಜೀತ ಮನ್ನಿಕೇರಿ.

ಮನುಷ್ಯನಿಗೆ ಮಾನಸಿಕ ನೆಮ್ಮದಿಯನ್ನು ನೀಡುವ ಅಪೂರ್ವ ಶಕ್ತಿಯು ಯೋಗದಲ್ಲಿದೆ– ಬಿ.ಇ.ಓ ಅಜೀತ ಮನ್ನಿಕೇರಿ.

Spread the love

ಮೂಡಲಗಿ : ಮನುಷ್ಯನಿಗೆ ಮಾನಸಿಕ ನೆಮ್ಮದಿಯನ್ನು ನೀಡುವ ಅಪೂರ್ವ ಶಕ್ತಿಯು ಯೋಗದಲ್ಲಿದೆ ಎಂದು ಮೂಡಲಗಿ ಬಿ.ಇ.ಓ ಅಜೀತ ಮನ್ನಿಕೇರಿ. ಹೇಳಿದರು.

ಅವರು ನಾಗಲಿಂಗ ನಗರದ ಮಧು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸೇವಾ ಸಂಘ ಕಾರ್ಯಲಯದ ಆವರಣದಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಬೆಳಗಾವಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ, ಮಂಜುನಾಥ ಸೈನಿಕ ತರಬೇತಿ ಕೇಂದ್ರ, ಗಾರ್ಡನ್ ಅಭಿವೃದ್ದಿ ಸಂಸ್ಥೆ, ಇವುಗಳ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಯೋಗ ದಿನಚರಣೆ ಕಾರ್ಯಕ್ರಮಕ್ಕೆ ಸಸಿಗೆ ನೀರು ಹನಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತ, ಯೋಗ ಕೇವಲ ಆಸನಾಭ್ಯಾಸವಲ್ಲ ಮನುಷ್ಯನಲ್ಲಿ ಅಡಗಿರುವ ದೈವತ್ವವನ್ನು ಜಾಗೃತಗೊಳಿಸಿ ನಮ್ಮ ಜೀವನದ ಗುರಿಯತ್ತ ನಮ್ಮನ್ನು ಕೈ ಹಿಡಿದು ಮುನ್ನಡೆಸುತ್ತದೆ. ಅದಕ್ಕಾಗಿ ನಾವು ಯೋಗಕ್ಕೆ ಶರಣಾಗಬೇಕು. ಇಂದಿನ ವೇಗದ ವ್ಯವಸ್ಥೆಯಲ್ಲಿ ಮನುಷ್ಯನ ದೇಹ ಮತ್ತು ಮನಸ್ಸಿನ ಮೇಲೆ ಸಾಕಷ್ಟು ಒತ್ತಡ ಬೀಳುತ್ತಿದ್ದು, ಅಂಥ ಒತ್ತಡದಿಂದ ಮುಕ್ತರಾಗಲು ನಿತ್ಯ ಯೋಗವನ್ನು ರೂಢಿಸಿಕೊಳ್ಳುವುದು ಅವಶ್ಯವಿದೆ ಎಂದರು.

ಮಂಜುನಾಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಎಲ್.ವಾಯ್.ಅಡಿಹುಡಿ ಯೋಗಾಸನ ಮಾಡಿಸಿ ಮಾತನಾಡಿ ವಿಶ್ವಕ್ಕೆ ಭಾರತ ಕೊಟ್ಟ ಕೊಡುಗೆ ಯೋಗ. ಯೋಗೋ ರಕ್ಷತಿ ರಕ್ಷಿತಃ ಎಂಬ ಉಕ್ತಿಯಂತೆ ಮಾನವ ಸಂಕುಲವನ್ನು ರಕ್ಷಿಸುವಲ್ಲಿ ಯೋಗವು ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಯೋಗಾಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ಆರೋಗ್ಯ ರಕ್ಷಣೆ ಹಾಗೂ ರೋಗಗಳನ್ನು ನಿಯಂತ್ರಿಸಬಹುದು ಎಂದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ, ರೋಗ ಬಂದ ಮೇಲೆ ಯೋಗ ಮಾಡುವ ಬದಲು ರೋಗ ಬರದಂತೆ ಇಂದಿನಿಂದಲೇ ಯೋಗ ಮಾಡಿ ಆರೋಗ್ಯವಂತರಾಗಿ ಎಂದು ಕರೆ ನೀಡಿದರು. ಯೋಗವನ್ನು ಪುಸ್ತಕದಿಂದ ಓದಿ ಕಲಿಯದೆ ಗುರುವಿನ ಮೂಲಕ ಕಲಿತು ಅಭ್ಯಾಸ ಮಾಡಿದರೆ ಆರೋಗ್ಯವಂತರಾಗಿ ಸದೃಡ ಬದುಕು ಪಡೆಯಲು ಸಾಧ್ಯವಿದೆ. ಬಾಲ್ಯದಿಂದಲೇ ಯೋಗಭ್ಯಾಸವನ್ನು ರೂಢಿಸಿಕೊಂಡರೆ ಮುಪ್ಪಿನಲ್ಲೂ ಯುವಕರಂತೆ ಬಾಳಬಹುದು ಎಂದು ಹೇಳಿದರು.
ಮಧು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸೇವಾ ಸಂಘ ಅಧ್ಯಕ್ಷೆ ಅಕ್ಕಮಾಹಾದೇವಿ ಗೋಡ್ಯಾಗೋಳ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ನಾಗನೂರ ಶ್ರೀ ಜಗದ್ಗುರು ರೇಣುಕಾಚಾರ್ಯ ಶಿವಲಿಂಗ ಆಶ್ರಮದ ಮಾತೋಶ್ರೀ ಕಾವ್ಯಶ್ರೀ ಅಮ್ಮನವರ ಯೋಗಾಸನದ ವಜ್ರಾಸನ, ಆದಿಮುದ್ರ, ಚಿನ್ಮಯಿ ಮುದ್ರ, ಮತ್ತು ವಿವಿದ ಆಸನಗಳನ್ನು ಮಾಡಿಸಿ ಆರ್ಶಿವಚನ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಯುವಕ ಸಂಘದ ಅಧ್ಯಕ್ಷ ಯಲ್ಲಾಲಿಂಗ ವಾಳದ, ಗಾರ್ಡನ ಅಭೀವೃದ್ದಿ ಸಂಸ್ಥೆ ಕಾರ್ಯದರ್ಶಿ ಸುಭಾಸ ಗೋಡ್ಯಾಗೋಳ, ಯುವ ಜೀವನ ಸೇವಾ ಸಂಸ್ಥೆ ಅಧ್ಯಕ್ಷ ಈರಪ್ಪಾ ಢವಳೆಶ್ವರ. ಎನ್.ವಾ.ಸಿ.ಲಕ್ಷ್ಮೀಬಾಯಿ ಮಾದರ, ಶಿಕ್ಷಕ ಬಿ.ಎ.ಡಾಂಗೆ, ರೇವತಿ ಮರಡಿ, ಮಂಜನಾಥ ರೇಳೆಕರ, ಸಿದ್ದವ್ವಾ ಅಡಿಹುಡಿ, ಲಕ್ಷ್ಮಣ ಸಾಯನ್ನವರ ಹಾಗೂ ಸಂಘದ ಪದಾದಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.
ರಾಜ್ಯ ಯುವ ಪ್ರಶಸ್ತಿ ವಿಜೇತೆ ಅಕ್ಕಮಾಹಾದೇವಿ ಜೊಕಾನಟ್ಟಿ ನಿರೂಪಿಸಿ ಸ್ವಾಗತಿಸಿದರು, ಗೀತಾ ಅಟಮಟ್ಟಿ ವಂದಿಸಿದರು.


Spread the love

About inmudalgi

Check Also

ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ  ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ