ಮೂಡಲಗಿ: 2023-24 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದು, ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರು ತಾವು ಬೆಳೆದ ಬೆಳೆಗಳನ್ನು ಉತ್ತಮ ಬೆಲೆಗೆ ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ.
ಗುರುವಾರ ಜೂ-08 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಗುಣಮಟ್ಟದ ಭತ್ತದ ಬೆಲೆಯನ್ನು ಕಳೆದ ಸಾಲಿಗಿಂತ 143 ರೂ. ಹೆಚ್ಚಳ ಮಾಡಿದ್ದು, 2183 ರೂ.ಗೆ ನಿಗದಿಪಡಿಸಲಾಗಿದೆ. ಜೋಳದ ಬೆಂಬಲ ಬೆಲೆಯನ್ನು ಕಳೆದ ಸಾಲಿಗಿಂತ 210 ರೂ. ಹೆಚ್ಚಳ ಮಾಡಿದ್ದು, 3180 ರೂ. ರಾಗಿ ಬೆಂಬಲ ಬೆಲೆಯನ್ನು ಕಳೆದ ಸಾಲಿಗಿಂತ 268 ರೂ. ಹೆಚ್ಚಳ ಮಾಡಿದ್ದು, 3846 ರೂ. ಗೋವಿನ ಜೋಳ ಬೆಂಬಲ ಬೆಲೆಯನ್ನು ಕಳೆದ ಸಾಲಿಗಿಂತ 128 ರೂ. ಹೆಚ್ಚಳ ಮಾಡಿದ್ದು, 2090 ರೂ. ತೊಗರಿ ಬೆಂಬಲ ಬೆಲೆಯನ್ನು ಕಳೆದ ಸಾಲಿಗಿಂತ 400 ರೂ ಹೆಚ್ಚಳ ಮಾಡಿದ್ದು, 7000 ರೂ. ಹೆಸರು ಕಾಳು ಕಳೆದ ಸಾಲಿಗಿಂತ 803 ರೂ ಹೆಚ್ಚಳ ಮಾಡಿದ್ದು, 8558 ರೂ. ಉದ್ದು ಕಳೆದ ಸಾಲಿಗಿಂತ 350 ರೂ ಹೆಚ್ಚಳ ಮಾಡಿದ್ದು, 6950 ರೂ. ಶೇಂಗಾ ಕಳೆದ ಸಾಲಿಗಿಂತ 527 ರೂ. ಹೆಚ್ಚಳ ಮಾಡಿದ್ದು, 6377 ರೂ. ಸೂರ್ಯಕಾಂತಿ ಕಳೆದ ಸಾಲಿಗಿಂತ 350 ರೂ ಹೆಚ್ಚಳ ಮಾಡಿದ್ದು, 6750 ರೂ. ಸೋಯಾಬಿನ್ ಕಳೆದ ಸಾಲಿಂತ 300 ರೂ ಹೆಚ್ಚಳ ಮಾಡಿದ್ದು, 4600 ರೂ. ಸಜ್ಜಿ ಕಳೆದ ಸಾಲಿಗಿಂತ 150 ರೂ ಹೆಚ್ಚಳ ಮಾಡಿದ್ದು ರೂ. 2500. ಎಳ್ಳು ಕಳೆದ ಸಾಲಿಗಿ0ತ 805 ರೂ ಹೆಚ್ಚಳ ಮಾಡಿದ್ದು, 8635 ರೂ. ಹುಚ್ಚೆಳ್ಳು ಕಳೆದ ಸಾಲಿಗಿಂತ ರೂ. 447 ರೂ ಹೆಚ್ಚಳ ಮಾಡಿದ್ದು, 7734 ರೂ. ಹತ್ತಿ (ಮಧ್ಯಮ) ಕಳೆದ ಸಾಲಿಗಿಂತ 540 ರೂ ಹೆಚ್ಚಳ ಮಾಡಿದ್ದು, ರೂ. 6620 ರೂ. ಹತ್ತಿ (ಉತ್ತಮ) ಕಳೆದ ಸಾಲಿಗಿಂತ 140 ರೂ. ಹೆಚ್ಚಳ ಮಾಡಲಾಗಿದೆ. ಈ ಮಹತ್ವದ ನಿರ್ಧಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಅವರಿಗೆ ಸಂಸದ ಈರಣ್ಣ ಕಡಾಡಿ ರಾಜ್ಯದ ರೈತರ ಪರವಾಗಿ ಅಭಿನಂದನೆ ತಿಳಿಸಿದ್ದಾರೆ.