ಮೂಡಲಗಿ : ಯೋಗಾಸನದಿಂದ ಶಾರೀರಿಕ ಮಾನಸಿಕ ಸಮತೋಲನದ ಜೊತೆಗೆ ಬೌದ್ಧಿಕವಾಗಿ ಮನುಷ್ಯನ ಸರ್ವೋತೋಮುಖ ಬೆಳವಣಿಗೆಗೆ ಸಹಾಯಕವಾಗಿ ಉಲ್ಲಾಸಮಯ ಜೀವನ ನಮ್ಮದಾಗಿರುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಶಿವರಾಜ ಕಾಂಬಳೆ ಹೇಳಿದರು.
ಅವರು ಸಮೀಪದ ಪಟಗುಂದಿಯ ಸರಕಾರಿ ಕನ್ನಡ ಮತ್ತು ಉರ್ದು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜರುಗಿದ ೯ನೇ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ, ಇಂದಿನ ಮಾನಸಿಕ ದೈಹಿಕ ಒತ್ತಡಗಳಿಂದಾಗಿ ಅನೇಕ ರೋಗ ರುಜನುಗಳಿಗೆ ಆಹ್ವಾನ ನೀಡುವಂತಾಗಿದೆ. ವಿದ್ಯಾರ್ಥಿ ಜೀವನದಲ್ಲಿಯೇ ಸರಳ ಹಾಗೂ ಉಪಯುಕ್ತ ಯೋಗಗಳನ್ನು ರೂಡಿಸಿಕೊಳ್ಳುವ ಮೂಲಕ ಅಮೃತದಂತಹ ಭೋಜನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸರಕಾರ ಒದಗಿಸುವ ಹತ್ತು ಹಲವಾರು ಯೋಜನೆಗಳನ್ನು ಬಳಸಿಕೊಳ್ಳ ಬೇಕು. ಪೌಷ್ಠಿಕಾಂಶಯುಕ್ತ ಆಹಾರವನ್ನು ಮದ್ಯಾಹ್ನ ಉಪಹಾರ ಯೋಜನೆಯ ಮೂಲಕ ವಿದ್ಯಾರ್ಥಿ ಜೀವನದಲ್ಲಿಯೇ ಉತ್ತಮ ಆಹಾರ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಹೇಳಿದರು.
ಈ ಸಂದರ್ಭದಲ್ಲಿ ಯೋಗಾಸನದ ಪ್ರಮುಖ ಆಸನಗಳಾದ ಸೂರ್ಯ ನಮಸ್ಕಾರ, ತಾಡಾಸನ, ಹೃಷ್ಕಾಸನ, ಪಾದಹಸ್ತಾಸನ, ವಜ್ರಾಸನ, ಶಶಾಂಕಾಸನ, ಭದ್ರಾಸನಗಳಂತಹ ಅನೇಕ ಆಸನಗಳ ಕುರಿತು ವಿದ್ಯಾರ್ಥಿಗಳಿಗೆ ಪರಿಚಯಿಸಿ ಪ್ರತಿನಿತ್ಯ ರೂಡಿಸಿಕೊಳ್ಳುವದರ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಧಾನಗುರು ರಾಜು ಕೊಳದೂರ, ಎಮ್.ಎನ್ ಪೆಂಡಾರಿ, ಎ.ಎ ಪಟವೇಗಾರ, ಕೆ.ಎಲ್ ಮೀಶಿ, ಎಸ್.ಐ ನದಾಫ್, ಮಹಾಂತೇಶ ಭಜಂತ್ರಿ, ಲಕ್ಷ್ಮಿ ಕೆಳಗೇರಿ,ಜಯಶ್ರೀ ಸರ್ವಿ ಹಾಗೂ ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Home / Recent Posts / ಪಟಗುಂದಿಯ ಸರಕಾರಿ ಕನ್ನಡ ಮತ್ತು ಉರ್ದು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿಶ್ವ ಯೋಗ ದಿನಾಚರಣೆ
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …