Breaking News
Home / Recent Posts / ಒಗ್ಗಟ್ಟಿನಿಂದ ದುಡಿದು ಜಾತ್ರೆಯನ್ನು ಯಶಸ್ವಿ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ

ಒಗ್ಗಟ್ಟಿನಿಂದ ದುಡಿದು ಜಾತ್ರೆಯನ್ನು ಯಶಸ್ವಿ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

ಮೂಡಲಗಿ : 17 ವರ್ಷಗಳ ನಂತರ ಸಡಗರ ಸಂಭ್ರಮದಿಂದ ನಡೆದಿರುವ ಹಳ್ಳೂರ ಗ್ರಾಮ ದೇವತೆ ಜಾತ್ರಾ ಮಹೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಮಾಡಿರುವ ಗ್ರಾಮದ ಮುಖಂಡರು ಮತ್ತು ಜಾತ್ರಾ ಕಮೀಟಿ ಪದಾಧಿಕಾರಿಗಳನ್ನು ಅಭಿನಂದಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಸಕಲರಿಗೂ ದೇವಿಯು ಒಳ್ಳೆಯದನ್ನು ಮಾಡಲಿ. ನಾಡು ಸಂಪದ್ಭರಿತವಾಗಿ ಹಚ್ಚ ಹಸಿರಿನಿಂದ ಕಂಗೊಳಿಸಲಿ ಎಂದು ಅವರು ಪ್ರಾರ್ಥಿಸಿದರು.

ತಾಲೂಕಿನ ಹಳ್ಳೂರ ಗ್ರಾಮದ ಮಹಾಲಕ್ಷ್ಮೀದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಅವರು, ಎಲ್ಲರೂ ಒಗ್ಗಟ್ಟಿನಿಂದ ದುಡಿದು ಜಾತ್ರೆಯನ್ನು ಯಶಸ್ವಿ ಮಾಡಿರುವುದಕ್ಕೆ ಬಾಲಚಂದ್ರ ಜಾರಕಿಹೊಳಿ ಅವರು ಕೃತಜ್ಞತೆ ಸಲ್ಲಿಸಿದರು.
ಕಳೆದ ಮೇ 10 ರಂದು ಜರುಗಿದ ಸಾರ್ವತ್ರಿಕ ಚುನಾವಣೆಯಲ್ಲಿ ಆರನೇ ಬಾರಿಗೆ ವಿಧಾನಸಭೆಗೆ ಪ್ರವೇಶಿಸಲು ಕ್ಷೇತ್ರದ ಎಲ್ಲ ಸಮುದಾಯಗಳ ಪ್ರಮುಖರು ಹಾಗೂ ಬಿಜೆಪಿ ಕಾರ್ಯಕರ್ತರು ಆಶೀರ್ವಾದ ಮಾಡಿದ್ದಾರೆ. ಕಾರ್ಯಕರ್ತರ ಶ್ರಮದ

ಫಲವಾಗಿ ಬಿಜೆಪಿಯಲ್ಲಿಯೇ ರಾಜ್ಯದಲ್ಲಿ ಅತ್ಯಧಿಕ ಮತಗಳ ಮುನ್ನಡೆಯೊಂದಿಗೆ ಆಯ್ಕೆಯಾಗಿದ್ದೇನೆ. ಅದಕ್ಕಾಗಿ ಸಮಸ್ತ ಕಾರ್ಯಕರ್ತರಿಗೂ ಹಾಗೂ ಮತದಾರ ಬಂಧುಗಳಿಗೂ ಸದಾ ಚಿರಋಣಿಯಾಗಿರುವೆ ಎಂದು ಅವರು ಹೇಳಿದರು.

ಹಳ್ಳೂರ ಗ್ರಾಮಸ್ಥರು ಒಂದಾಗಿ, ಒಗ್ಗಟ್ಟಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಹಳ್ಳೂರ ಗ್ರಾಮಸ್ಥರ ಪ್ರೀತಿ ಅಭಿಮಾನಕ್ಕೆ ನಾನೂ ಕೂಡ ಆಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭರವಸೆ ನೀಡಿದರು.
ಜಾತ್ರಾ ಮಹೋತ್ಸವ ಕಮೀಟಿಯಿಂದ ಬಾಲಚಂದ್ರ ಜಾರಕಿಹೊಳಿ ಅವರನ್ನು ಗ್ರಾಮಸ್ಥರು ಸತ್ಕರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಡಿವೆಪ್ಪ ಫಾಲಭಾವಿ, ಹನಮಂತ ತೇರದಾಳ, ಭೀಮಶಿ ಮಗದುಮ್ಮ, ಲಕ್ಷ್ಮಣ ಕತ್ತಿ, ಸುರೇಶ ಕತ್ತಿ, ಶಿವನಗೌಡ ಪಾಟೀಲ, ಶಿವದುಂಡು ಕೊಂಗಾಲಿ, ಶ್ರೀಶೈಲ ಬಾಗೋಡಿ, ಕುಮಾರ ಲೋಕನ್ನವರ, ಈಶ್ವರ ಬೆಳಗಲಿ, ಲಕ್ಷ್ಮಣ ಛಬ್ಬಿ, ಹನಮಂತ ಫಾಲಬಾವಿ, ಮಲ್ಲಪ್ಪ ಛಬ್ಬಿ, ಬಾಹುಬಲಿ ಸಪ್ತಸಾಗರ, ಭೀಮಶಿ ಹೊಸಟ್ಟಿ, ಗುರುನಾಥ ಬೋಳನ್ನವರ, ರಾಮಗೌಡ ಪಾಟೀಲ, ರವಿ ಪಾಟೀಲ, ಈಶ್ವರ ಫಾಲಭಾವಿ, ಮಹಾವೀರ ಛಬ್ಬಿ, ಸುರೇಶ ಡಬ್ಬನ್ನವರ, ಶಿವಪ್ಪ ಕೌಜಲಗಿ, ಸದಾಶಿವ ಮಾವರಕರ, ಗಜು ಮಿರ್ಜಿ, ನಾಗಪ್ಪ ವಕೀಲಗೋಳ, ಗುರು ಹಿಪ್ಪರಗಿ, ನಾರಾಯಣ ಪೂಜೇರಿ, ಮುರಿಗೆಪ್ಪ ಮಾಲಗಾರ, ಸಿದ್ದಪ್ಪ ದುರದುಂಡಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

About inmudalgi

Check Also

ಲಿಂಗಾಯತ ಸಮಾಜದವರನ್ನೇ ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಜಾರಕಿಹೊಳಿ ಕುಟುಂಬದಿಂದ ಅಧ್ಯಕ್ಷರಾಗುವ ಮಾತೇ ಇಲ್ಲ – ಬೆಮುಲ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love ಬೆಳಗಾವಿ: ಈಗ ಬಹಳ ಜನರ ಬಯಕೆ ಬಿಡಿಸಿಸಿ ಬ್ಯಾಂಕ್‌ಗೆ ಬರುವುದು. ಆದರೆ, ನಾನು ಬಿಡಿಸಿಸಿ ಬ್ಯಾಂಕ್‌ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ