ಮೂಡಲಗಿ : ತ್ಯಾಗ ಬಲಿದಾನದ ಪ್ರತೀಕವಾದ ಬಕ್ರೀದ ಹಬ್ಬ ಆಚರಣೆಯನ್ನು ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಗುರುವಾರದಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಸರಳವಾಗಿ ಹಬ್ಬ ಆಚರಿಸಿ ಪರಸ್ಪರರು ಶುಭಾಶಯ ವಿನಿಮಯ ಮಾಡಿಕೊಂಡರು
ಈ ಸಂದರ್ಭದಲ್ಲಿ ಧರ್ಮ ಗುರುಗಳಾದ ಮೌಲಾನಾ ಕೌಸರ ರಝಾ ಅವರು ಪ್ರವಚನ ನೀಡಿ ಮಾತನಾಡಿ, ಬಕ್ರೀದ ಹಬ್ಬವು ತ್ಯಾಗದ ಸಂಕೇತವಾಗಿದ್ದು ಮನು ಕುಲಕ್ಕೆ ಒಳ್ಳೆಯದಾಗಲಿ, ಎಲ್ಲರೂ ಪರಸ್ಪರ ಪ್ರೀತಿ ವಿಸ್ವಾಸದಿಂದ ಬದುಕಿ ಮಾದರಿಗಬೇಕು ಎಂದು ಹೇಳಿ, ಮಾನವ ಕುಲದ ಸಮಗ್ರ ಹಿತ,ಶಾಂತಿ ಕಲ್ಯಾಣ,ಅಭಿವೃದ್ದಿ ಹಾಗೂ ಮಳೆಗಾಗಿ ಎಲ್ಲರೂ ಪ್ರಾರ್ಥಿಸಿ ನಾಡು ಸುಭೀಕ್ಷೆ ಹೊಂದುವಂತೆ ಪ್ರಾರ್ಥಿಸೋಣ ಎಂದರು.
ಪಟ್ಟಣದ ವಿವಿಧ ಮಸೀದಿಗಳಲ್ಲಿಯೂ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು ಎಲ್ಲರಿಗೂ ಶುಭ ಕೋರಿ ಭಾವೈಕ್ಯತೆ ಮೆರೆದರು
ಬಿಟಿಟಿ ಕಮೀಟಿ ಅಧ್ಯಕ್ಷ ಶರೀಫ್ ಪಟೇಲ್, ಅಮೀರಹಮ್ಜಾ ಥರಥರಿ, ಹಸನಸಾಬ ಮುಗುಟಖಾನ, ಅಬ್ದುಲ್ ರೆಹಮಾನ ತಾಂಬೋಳಿ, ಇಮಾಮಹುಸೇನ ತಾಂಬೋಳಿ, ಮಲೀಕ ಕಳ್ಳಿಮನಿ, ಸಲೀಮ್ ಇನಾಮದಾರ, ರಾಜು ಅತ್ತಾರ, ದಸ್ತಗೀರ ನದಾಫ್ ದಾದು ಮುಗುಟಖಾನ, ಇಮಾಮಹುಸೇನ ಮುಲ್ಲಾ, ಇಬ್ರಾಹಿಂ ಅತ್ತಾರ, ಮದಾರ ಮುಗುಟಖಾನ ಹಾಗೂ ಧರ್ಮಗುರುಗಳು ಮತ್ತು ಅನೇಕ ಸಮುದಾಯ ಮುಖಂಡರು ಇದ್ದರು.
IN MUDALGI Latest Kannada News