*ಅಕ್ಷರ ದಾಸೋಹ ಬಿಸಿ ಊಟದ ಯೋಜನೆಯ ನೌಕರರ ವಿವಿಧ ಬೇಡಿಕೆಗಾಗಿ ಆಗ್ರಹಿಸಿ ಮನವಿ*
ಮೂಡಲಗಿ: ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರ ಸಂಘ(ಸಿಐಟಿಯು)ದಿಂದ ಬಿಸಿ ಊಟ ಯೋಜನೆಯ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮೂಡಲಗಿ ತಾಲೂಕಾ ಪಂಚಾಯ ಅಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಅಕ್ಷರ ದಾಸೋಹ ಯೋಜನೆಯ ಮಧ್ಯಾಹ್ನದ ಬಿಸಿ ಊಟ ಯೋಜನೆ ಪ್ರಾರಂಭವಾದ ವರ್ಷದಿಂದಲೂ ಮಕ್ಕಳ ಶೈಕ್ಷಣಿಕ ಉನ್ನತಿಗೆ, ಮಕ್ಕಳ ಗೈರು ಹಾಜರಿ ತಡೆಗಟ್ಟಲ, ಅಪೌಷ್ಠಿಕತೆ ತಡೆಗಟ್ಟಲು, ಶಿಕ್ಷಣ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಳೆದ 21 ವರ್ಷಗಳಿಂದ 1ಲಕ್ಷ 17 ಸಾವಿರ ಮಹಿಳೆಯರು 58 ಲಕ್ಷ 39 ಸಾವಿರ ಬಡ, ರೈತ, ಕೃಷಿ ಕೂಲಿಕಾರರ, ದೀನ ದಲಿತ ಮಕ್ಕಳಿಗೆ ಬಿಸಿ ಆಹಾರ ಬೇಯಿಸಿ ಹಾಲು ನೀಡಿ ಶಾಲೆಯಲ್ಲಿ ನೀಡುವ ಎಲ್ಲಾ ಕೆಲಸ ನಿರ್ವಹಿಸಿ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಮಹಿಳೆಯ ತಾಯ್ತನದ ಪರಿಶ್ರಮವಿದೆ, ದಿನಕ್ಕೆ ಸುಮಾರು 6 ಗಂತೆಗಿಂತಲೂ ಅಧಿಕ ಸಮಯ ಕೆಲಸ ಮಾಡುತ್ತಿರು ಪರಿಶ್ರಮ ಗುರುತಿಸಿ ಕನಿಷ್ಠ ಕೂಲಿ 21 ಸಾವಿರ ನೀಡಕೇಕಿದೆ, ಬಿಸಿ ಊಟ ನೌಕರರನ್ನು ಶಿಕ್ಷಣ ಇಲಾಖೆಯ ಜವಾಬ್ದಾರಿಗೆ ಸಂಪೂರ್ಣವಾಗಿ ತಂದು ಸ್ಪಂದಿಸಬೇಕು.
2923ರ ಬಜೆಟ್ ದಲ್ಲಿನ ಒಂದು ಸಾವಿರ ಗೌರವ ಧನವನ್ನು ಬಿಡುಗಡೆ ಮಾಡಬೇಕು, ಬೆಲೆ ಏರಿಕೆ ಆಧಾರದಲ್ಲಿ 12ಸಾವಿರ ವೇತನ ನೀಡ ಬೇಕು, ನಿವೃತ್ತಿ ಹೊಂದಿದ ಮತ್ತು ಹೊಂದುತ್ತಿರುವ ನೌಕರಿಗೆ 1ಲಕ್ಷ ಪರಿಹಾರ ನೀಡಲು ಆದೇಶಿಸಬೇಕು, ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿ ಮುಖ್ಯ ಅಡುಗೆಯವರಿಗೆ ನೀಡಬೇಕು, ಅಪಘಾತದಲ್ಲಿ ರಣ ಹೊಂದಿದ ಟಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು, ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ನೀಡಬೇಕು, ಮಾರ್ಚ 31ಕ್ಕೆ ಬೀಡುಗಡೆ ಮಾಡುವ ಸುತ್ತೋಲೆಯಲ್ಲಿ ಬದಲಾವಣೆ ಮಾಡಬೇಕು, ಬಿಸಿ ಊಟ ಯೋಜನೆಯ ಯಾವುದೇ ಸ್ವರೂಪದ ಜವಾಬ್ದಾರಿಯನ್ನು ಖಾಸಗಿಸಂಘ-ಸಂಸ್ಥೆಗಳಿಗೆ ನೀಡದೇ ಸರ್ಕಾರದ ಧಿನದಲ್ಲಿಯೇ ನಿರ್ವಹಿಸಬೇಕು, ಈಗಾಗಲೇ ಸಂಘಗಳಿಗೆ ನೀಡಿದ ಶಾಲೆಗಳ ಬಿಸಿ ಊಟ ವಾಪಸ್ಸು ಪಡೆದು ಸರ್ಕಾರವೇ ಊಟ ನೀಡುವಂತಾಗಬೇಕು, ಪ್ರತಿ ಶಾಲೆಯಲ್ಲಿ ಕನಿಷ್ಠ ಎರಡು ಜನ ಅಡುಗೆಯವು ನೇಮಿಸಬೇಕು ಹಾಗೂ ಈಗಾಗಲೇ ಶಾಲೆಯಲ್ಲಿ ಅಡುಗೆ ಕೆಲಸದ ಜೊತೆ ಶಾಲಾ ಸ್ವಚ್ಚತೆ, ಕೈತೋಟ ನಿರ್ವಹಣೆ, ಶಾಲಾ ಸಮಯದ ಗಂತೆ ಬಾರಿಸುವುದು, ಇನ್ನಿತರ ಕೆಲಸ ಚಾಚು ತಪ್ಪದೇ ಮಾಡುತ್ತಿರುವದರಿಂದ ಬಿಸಿ ಊಟ ನೌಕರರನ್ನು “ಡಿ” ಗ್ರೂಪ್ ನೌಕರರನ್ನಾಗಿ ಪರಿಗಣಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂರ್ಧದಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರ ಸಂಘದ ತಾಲೂಕ ಅಧ್ಯಕ್ಷೆ ಮಾಸಾಬಿ ದಲಾಯಿತ, ಕಾರ್ಯದರ್ಶಿ ಪಾರ್ವತಿ ಕೌಜಲಗಿ, ಖಜಾಂಚಿ ಶಶಿಕಲಾ ಕೊಕಟನೂರ ಹಾಗೂ ತಾಲೂಕಿನ ಅಕ್ಷರ ದಾಸೋಹ ಬಿಸಿ ಊಟ ಯೋಜನೆ ಸಿಬ್ಬಂದಿ ವರ್ಗದವರು ಇದ್ದರು.