Breaking News
Home / Recent Posts / ಯೂತ್ ಫಾರ್ ಪರಿವರ್ತನ ತಂಡದಿoದ ಉಚಿತವಾಗಿ ನೋಟ್ ಬುಕ್ ವಿತರಿಣೆ

ಯೂತ್ ಫಾರ್ ಪರಿವರ್ತನ ತಂಡದಿoದ ಉಚಿತವಾಗಿ ನೋಟ್ ಬುಕ್ ವಿತರಿಣೆ

Spread the love

ಮೂಡಲಗಿ: ಕಸ ದಿಂದ ರಸ ಎನ್ನುವಂತೆ ಬೆಂಗಳೂರಿನ ಯೂತ್ ಫಾರ್ ಪರಿವರ್ತನ ತಂಡವು ಬೇಸಿಗೆ ಸಮಯದಲ್ಲಿ ತಮ್ಮಯ ಅತ್ಯಮೂಲ್ಯ ಸಮಯವನ್ನು ನಿಗಧಿಗೊಳಿಸಿ ಮರು ಬಳಕೆಯ ನೋಟ್ ಬುಕ್‌ಗಳನ್ನು ಗ್ರಾಮೀಣ ವಿದ್ಯಾರ್ಥಿಗಳಿಗೆ ಬಳಕೆಯ ವಿನೂತನ ಯೋಜನೆ ಶ್ಲಾಘಣೀಯವಾಗಿದೆ ಎಂದು ಪ್ರಧಾನ ಗುರು ರಾಜು ಕೊಳದೂರ ಹೇಳಿದರು.
ಅವರು ಸಮೀಪದ ಪಟಗುಂದಿಯ ಸರಕಾರಿ ಕನ್ನಡ ಮತ್ತು ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಯೂತ್ ಫಾರ್ ಪರಿವರ್ತನ ತಂಡದಿoದ ಉಚಿತವಾಗಿ ನೀಡಲ್ಪಟ್ಟ ನೋಟ್ ಬುಕ್ ವಿತರಿಸಿ ಮಾತನಾಡಿದರು. ಮರು ಬಳಕೆ ಎನ್ನುವ ಉದ್ದೇಶವನ್ನಿಟ್ಟುಕೊಂಡು ನಗರದ ಹಾಗೂ ವಿವಿಧೆಡೆ ಉಪಯೋಕ್ತ ಹಾಳೆಗಳನ್ನು ಒಂದುಗೂಡಿಸಿ ಬುಕ್ ಬೈಂಡ್ ಮಾಡಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿತರಿಸುತ್ತಿರುವದು ಮೆಚ್ಚುವಂತಹದು. ಅವರು ಕೈಗೊಂಡಿರುವ ಮರು ಬಳಕೆಯ ಸಾಮರ್ಥ್ಯಗಳನ್ನು ಎಲ್ಲರೂ ಅಳವಡಿಸಿಕೊಂಡರೆ ಹಣದ ಉಳಿತಾಯದ ಜೊತೆಗೆ ನಾವಿಣ್ಯತೆಯ ಕಲೆಗಳನ್ನು ಕಲಿಯಬಹುದೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಎಸ್.ಡಿಎಮ್.ಸಿ ಅಧ್ಯಕ್ಷ ಯಲ್ಲಪ್ಪ ಪೂಜೇರಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಕೆ.ಎಲ್. ಮೀಶಿ, ಪ್ರಧಾನ ಗುರು ಎಮ್.ಎನ್ ಪೆಂಡಾರಿ, ಎ.ಎ ಪಟವೇಗಾರ, ಎಸ್.ಐ ನದಾಫ್, ರವಿರಾಜ ಕಾಂಬಳೆ, ಮಹಾಂತೇಶ ಭಜಂತ್ರಿ, ಲಕ್ಷ್ಮಿ ಕೆಳಗೇರಿ, ಜಯಶ್ರೀ ಸರ್ವಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.


Spread the love

About inmudalgi

Check Also

ಬೆಟಗೇರಿ ಗ್ರಾಮದಲ್ಲಿ ಕಟ್ಟಾ ವಾರ ಆಚರಣೆ

Spread the loveಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜನ-ಜಾನುವಾರುಗಳಿಗೆ ರೋಗ-ರುಜೀನ ಬರದಂತೆ ಹಾಗೂ ಸಕಾಲಕ್ಕೆ ಮಳೆಯಾಗದಿದ್ದ ಕಾರಣ ಮಳೆಗಾಗಿ ಇದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ