ಅ.1ರಂದು ಉಪ್ಪಾರ ಮಹಾಸಭಾದಿಂದ ಪ್ರತಿಭಾ ಪುರಸ್ಕಾರ ಸಮಾರಂಭ- ಲಾತೂರ್
ಮೂಡಲಗಿ: ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದಿಂದ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿಯವರಿಗೆ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಅ.1 ರಂದು ಹುಬ್ಬಳ್ಳಿ ಅಮರಗೋಳದಲ್ಲಿನ ವಿದ್ಯಾಧಿರಾಜ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲ್ಲಾಗಿದೆ ಎಂದು ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ್ಷ ವಿಷ್ಣು ಲಾತೂರ ತಿಳಿಸಿದರು.
ಅವರು ಗುರುವಾರದಂದು ಪಟ್ಟಣದ ಪತ್ರಿಕಾ ಕಛೇರಿಯಲ್ಲಿ ಜರುಗಿದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಉಪ್ಪಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಹಾಗೂ ನಮ್ಮ ಸಮಾಜದ ಏಕೈಕ ಶಾಸಕರು ಹಾಗೂ ಸರಕಾರದಿಂದ ಮಹರ್ಷಿ ಭಗೀರಥರ ಜಯಂತಿ ಆಚರಣೆ ಮಾಡಲ್ಲಿಕ್ಕೆ ಶ್ರಮೀಸಿದ 4ನೇ ಬಾರಿ ಚಾಮರಾಜನಗರದಿಂದ ಶಾಸಕರಾಗಿ ಆಯ್ಕೆಯಾದ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ನಮ್ಮ ಉಪ್ಪಾರ ಸಮಾಜ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೋಳಿಸಬೇಂದರು.
ಉಪ್ಪಾರ ಸಮಾಜದಲ್ಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ದ್ವಿತೀಯ ತರಗತಿಯಲ್ಲಿ ಹಾಗೂ ಯಾವುದೇ ಪದವಿಯಲ್ಲಿ ಶೇ.80ರಷ್ಟು ಅಂಕಪಡೆದವರು ಉತ್ತೀರ್ಣರಾದ ವಿದ್ಯಾರ್ಥಿಗಳು ಸಂಘಟಕರಲ್ಲಿ ತಮ್ಮ ಹೆಸರು ನೊಂದಾಯಿಸಕೊಂಡು ಬರುವಾಗ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ ಜೆರಾಕ್ಸ್ ಪ್ರತಿಯನ್ನು ತರತಕ್ಕದ್ದು- ಹೆಚ್ಚಿನ ಮಾಹಿತಿಗಾಗಿ 9448225046, 9886677266 ಸಂಪರ್ಕಿಸಬಹುದು ಎಂದು ತಿಳಿಸಿದರು.
ಈ ಸಮಯದಲ್ಲಿ ಸಮಜಾದ ಮುಖಂಡರಾದ ಸುಭಾಸ ಪೂಜೇರಿ, ಗುರು ಗಂಗಣ್ಣವರ ಮಹಾಸಭಾ ಕಾರ್ಯದರ್ಶಿ ಭರತ ಮೈಲಾರ್ ಇದ್ದರು.