ದಿ.11ರಂದು ವಿದ್ಯುತ್ ಪೋರೈಕೆಯಲ್ಲಿ ವ್ಯತ್ಯಯ
ಮೂಡಲಗಿ : ಈಗಿರುವ ತಿಗಡಿಯ 33ಕೆವಿ ವಿದ್ಯುತ್ ವಿತರಣಾ ಉಪಕೇಂದ್ರವನ್ನು 110ಕೆವಿಯಾಗಿ ಮೇಲ್ದರ್ಜೆಗೆ ಏರಿಸುವ ಕಾಮಗಾರಿಯ ನಿಮಿತ್ತ 110 ಕೆವಿ ಮೂಡಲಗಿ,ನಾಗನೂರ ಲೈನ್ ನಿಂದ ತಿಗಡಿ ಉಪ ಕೇಂದ್ರಕ್ಕೆ ಲಿಲೋ ಲೈನ್ ಮಾಡುವ ಕಾಮಗಾರಿ ಕೆಲಸವನ್ನು ಕೈಗೊಳ್ಳಲು ಉದ್ದೇಶಿಸಿರುವುದರಿಂದ ಅ. 11ರಂದು ಮುಂಜಾನೆ 9 ಘಂಟೆಯಿಂದ ಸಂಜೆ 7 ಘಂಟೆಯವರೆಗೆ ವಿದ್ಯುತ್ ಪೊರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಕಾರಣ ತಿಗಡಿ ಉಪ ಕೇಂದ್ರದಿಂದ ಹೊರಹೋಗುವ ತಿಗಡಿ, ಮಸಗುಪ್ಪಿ, ಪಟಗುಂದಿ,ಸಿದ್ದಾಪೂರಹಟ್ಟಿ ಹಾಗೂ ಸುಣದೋಳಿ ನದಿ ದಂಡೆ ನೀರಾವರಿ ಪಂಪಸೆಟ್ ಮಾರ್ಗಗಳ ವಿದ್ಯುತ್ ಪೊರೈಕೆಯಲ್ಲಿ ವ್ಯತ್ಯಯವಾಗಲಿದೆ ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಎಮ್ ಎಸ್ ನಾಗನ್ನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.