ಡಾ.ಎ.ಪಿ.ಜಿ ಅಬ್ದುಲ್ ಕಲಾಂ ಜಯಂತಿ ಆಚರಣೆ
ಮೂಡಲಗಿ: ಪಟ್ಟಣದ ಶಿವಾಪೂರ(ಹ) ರಸ್ತೆಯಲ್ಲಿರುವ ಡಾ.ಎ.ಪಿ.ಜಿ ಅಬ್ದುಲ್ ಕಲಾಂ ವೃತ್ತದಲ್ಲಿ ಭಾರತ ರತ್ನ ಹಾಗೂ ಮಾಜಿ ರಾಷ್ಟ್ರಪತಿಗಳಾ ಡಾ.ಎ.ಪಿ.ಜಿ.ಅಬ್ದುಲ್ ಕಲಾಂ ಅವರ 92ನೇ ಜಯಂತಿಯನ್ನು ಆಚರಿಸಲಾಯಿತು.
ಮೂಡಲಗಿ ಪಿಎಸ್‍ಐ ಎಚ್.ವಾಯ್ ಬಾಲದಂಡಿ ಅವರು ಡಾ.ಎ.ಪಿ.ಜಿ.ಅಬ್ದುಲ್ ಕಲಾಂ ಅವರ ಭಾವ ಚಿತ್ರಕ್ಕೆ ಪೂಜೆಸಲ್ಲಿಸಿ ಮಾತನಾಡಿ, ಡಾ.ಎ.ಪಿ.ಜಿ.ಅಬ್ದುಲ್ ಕಲಾಂ ಅವರು ವಿಶ್ವ ಮಟ್ಟದಲ್ಲಿ ಭಾರತದ ಕಿರ್ತಿ ಎತ್ತಿ ಹಿಡಿದ್ದಾರೆ. ಬಲಿಷ್ಠ ರಾಷ್ಟ್ರಗಳ ಜತೆ ಭಾರತ ಪೈಪೋಟಿ ನಿಡುವಷ್ಟ್ರರ ಮಟ್ಟಿಗೆ ಭಾರತವನ್ನು ಬೆಳೆಸಿದ ಕಿರ್ತಿ ಅವರದು. ಅವರ ಆದರ್ಶ ತತ್ವಗಳು ಮಾದರಿಯಾಗಿವೆ, ಅವರು ಮಾಡಿದಂತ ಸಾಧನೆ ಬಹಳಷ್ಟು ಅಭುತ್ವಪೂರ್ವವಾದದು ಅವರನ್ನು ನಾವು ರಾಷ್ಟ್ರಪತಿಗಳನ್ನಾಗಿ ಪಡೆದಿರುವುದು ನಮ್ಮ ಪುಣ್ಯೆ, ಮಹಾನ ವ್ಯಕ್ತಿಗಳ ಅಜರಾಮರವಾಗಿ ಉಳಿಯಬೇಕಾದರೆ ಅವರ ಆದರ್ಶ ತತ್ವಗಳನ್ನು ಪಾಲಿಸಬೇಕು, ಮಹಾನ ವ್ಯಕ್ತಿಗಳ ಸಾಧನೆಯನ್ನು ಇಂದಿನ ಯುವ ಪೀಳಿಗೆಗೆ ತಿಳಿಸಿ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಪ್ರೇರಕವಾಗುವಂತೆ ಬೆಳಸಬೇಕು ಎಂದರು.
ಮಾಜಿ ಸೈನಿಕ ಶಂಕರ ತುಕ್ಕನ್ನವರ ಮಾತನಾಡಿ, ಡಾ.ಎ.ಪಿ.ಜಿ.ಬ್ದುಲ್ ಕಲಾಂ ಅವರ ಸಾಧನೆಯನ್ನು ವಿವರಿಸಿದರು
ಸಮಾರಂಭದಲ್ಲಿ ಭಾಗವಹಿಸಿದ್ದ ಗಣ್ಯರು ಡಾ.ಎ.ಪಿ.ಜಿ.ಅಬ್ದುಲ್ ಕಲಾಂ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಮಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಸಂತೋಷ ಸೋನವಾಲಕರ, ಹನಮಂತ ಗುಡ್ಲಮನಿ, ರವೀಂದ್ರ ಸಣ್ಣಕ್ಕಿ, ಅಬ್ದುಲಗಫಾರ ಡಾಂಗೆ, ಪುರಸಭೆ ಮಾಜಿ ಉಪಾಧ್ಯಕ್ಷ ರವೀಂದ್ರ ಸೋನವಾಲ್ಕರ, ಮೊಹಮ್ಮದಅಲ್ಲಿ ಮುಲ್ಲಾ, ಇದರೀಶ ಕಲಾರಕೊಪ್ಪ, ಚಾಂದಸಾಬ ದೇಸಾಯಿ, ಸಲೀಮ ಮಸ್ತೋಲಿ, ಡಾ.ಹನಮಂತ ಮಾರಾಪೂರ, ಅನ್ವರ ನದಾಫ್, ಶಿವಲಿಂಗ ಹಾದಿಮನಿ, ಸಿದ್ದು ಗಡ್ಡೇಕರ, ಬಸು ಝಂಡೇಕುರಬರ, ಕುತುಬುದ್ದಿನ ನೇಸರಗಿ, ಈಶ್ವರ ಕಂಕಣವಾಡಿ, ರಫೀಕ ನದಾಫ್, ಸಹಬಾಜ ಮುಲ್ಲಾ, ತಾಹೀರ ಮುಲ್ಲಾ, ಇರಶಾದ ದೇಸಾಯಿ, ಸಾರೂಕ ಮುಲ್ಲಾ, ಶಾನೂರ ಮೊಗಲ, ಯಾಸೀನ್ ಮೋಮಿನ, ಹಜರತ ಮುಲ್ಲಾ, ಎನ್.ಬಿ.ಒಡೇಯರ, ಲಕ್ಷ್ಮಣ ಗೋಡೆರ, ಮತ್ತಿತರರು ಇದ್ದರು.