ಮೂಡಲಗಿ: ಶಕ್ತಿ ಅಂದರೆ ನವ ದೇವತೆಗಳ ದರ್ಬಾರ ಈ ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಧ್ಯಾನ ಪ್ರಾರ್ಥನೆ ಭಕ್ತಿ ಶೃದ್ದೆಯಿಂದ ದೇವಿ ಆರಾಧನೆ ಮಾಡಬೇಕು ಎಂದು ಚಿಕ್ಕೋಡಿ ಜಿಲ್ಲಾ ಉಪ ಯೋಜನಾಧಿಕಾರಿ ರೇವತಿ ಮಠದ ಹೇಳಿದರು. ಅವರು ಹಳ್ಳೂರ ಗ್ರಾಮದ ಶ್ರೀ ಧ್ಯಾಮವ್ವಾ ತಾಯಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ನಿಮಿತ್ಯವಾಗಿ 9 ದಿವಸಗಳ ವರಗೆ ನಡೆಯುವ ಶ್ರೀ ದೇವಿ ಪುರಾಣ ಕಾರ್ಯಕ್ರಮವನ್ನು ಸಸಿಗೆ ನೀರು ಉನಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚನ ಆದ್ಯತೆ ನೀಡಿ ಅವರಿಗೆ ಉತ್ತಮ ಸಂಸ್ಕಾರ ಕೊಡೋಣ ಎಂದರು. ಕಪರಟ್ಟಿ ಕಳ್ಳಿಗುದ್ದಿಯ ಪೂಜ್ಯಶ್ರೀ ಬಸವರಾಜ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಗ್ರಾಮದ ಗುರು ಹಿರಿಯರು ಸಹಕಾರದಿಂದ ಹಳ್ಳೂರ ಗ್ರಾಮದಲ್ಲಿ 9 ದಿನಗಳ ದೇವಿ ಪುರಾಣ ವಿಶೇಷವಾಗಿ ನಡೆಯುತ್ತದೆ ಆದಿಶಕ್ತಿ ಪರಾಕ್ರಮಿ ದೇವಿಯ ಹಲವಾರು ಅವತಾರಗಳು ಬರುತ್ತವೆ ಆದರಿಂದ ಎಲ್ಲರು ಹೆಚ್ಚಿನ ಪ್ರಮಾಣದಲ್ಲಿ ಬಂಧು ಆ ದೇವಿಯ ಮಹಿಮೆ ತಿಳಿದುಕೊಳೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೈವದ ಹಿರಿಯರಾದ ಬಸವಣೆಪ್ಪಾ ಡಬ್ಬಣ್ಣವರ, ಶಿವಪ್ಪ ನಿಡೋಣಿ, ಮಲ್ಲಿಕಾರ್ಜುನ ಸಂತಿ, ಬಾಳಗೌಡ ಪಾಟೀಲ, ಚಿಕ್ಕೋಡಿ ಜಿಲ್ಲಾ ಉಪ ಯೋಜನಾಧಿಕಾರಿ ಪ್ರಕಾಶ ಹಿರೇಮಠ, ತಾಲೂಕ ಪಂಚಾಯತ್ ಮಾಜಿ ಸದಸ್ಯ ಸವಿತಾ ಡಬ್ಬಣ್ಣವರ, ಶಂಕರಯ್ಯ ಹಿರೇಮಠ, ದುಂಡಪ್ಪ ಮಹಾರಾಜರು, ಶ್ರೀಶೈಲ ಹಿರೇಮಠ, ಮಲ್ಲಪ್ಪ ಕೊಂಗಲಿ, ಶಿದಗಿರೆಪ್ಪ ಬಡಿಗೇರ, ಸಿದ್ದಯ್ಯ ಹಿರೇಮಠ, ಲಕ್ಷ್ಮಣ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತ ಸಿದ್ದಣ್ಣ ದುರದುಂಡಿ ನಿರೂಪಿಸಿ ವಂದಿಸಿದರು.
ಪೂರ್ವದಲ್ಲಿ ಹಳ್ಳೂರ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಿಂದ ಸುಮಂಗಲೆಯರಿಂದ ಆರತಿ ಹಾಗೂ ಕುಂಭಮೇಳ ಸಕಲ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬಿದಿಗಳ ಮೂಲಕ ಪೂಜ್ಯರನ್ನು ಬರಮಾಡಿಕೊಳಲಾಯಿತು.