Breaking News
Home / Recent Posts / ಹುಣಶ್ಯಾಳ ಪಿ.ಜಿ ಯ ಶ್ರೀ ಲಕ್ಷ್ಮಿ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ಹುಣಶ್ಯಾಳ ಪಿ.ಜಿ ಯ ಶ್ರೀ ಲಕ್ಷ್ಮಿ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

Spread the love

21ಎ
ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿ.ಜಿ ಯ ಶ್ರೀ ಲಕ್ಷ್ಮಿ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ನಿಮಿತ್ಯವಾಗಿ ಹಮ್ಮಿಕೊಂಡ 6ನೇ ದಿನದ ದುರ್ಗಾ ಶಕ್ತಿ ಪೂಜೆ ಕುಂಕುಮಾರ್ಚನೆ ಪ್ರವಚನ ಕಾರ್ಯಕ್ರಮ ನೆರವೇರಿತು
ಸಮಾರಂಭದ ಮುಖ್ಯ ಅಥಿತಿಗಳಾಗಿ ಮೂಡಲಗಿಯ ಆರ್.ಡಿ.ಎಸ್ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಟಿ.ಎಸ್.ವಂಟಗೋಡಿ ಮಾತನಾಡಿ, ಜನರಿಗೆ ಕಂಟಕ ವಾಗಿರುವ 9ಜನ ದುಷ್ಟ ರಾಕ್ಷಸರನ್ನು ಸಂಹರಿಸಿ ಜನರಿಗೆ ಶಾಂತಿ ಸೌಕ್ಯವನ್ನು ತಂದುಕೊಟ್ಟ ಚಾಮುಂಡಿಷವರಿಯ ಅವತಾರವೇ ದುರ್ಗಾ ಮಾತೆ ಟಿವಿ ಮತು ಮೊಬೈಲ್ ಗಳ ಬರಾಟೆಯಲ್ಲಿ ದುರ್ಗಾ ಮಾತೆಯ ಪೂಜೆಯನ್ನು ಹಮ್ಮಿಕೊಳ್ಳುವದರ ಮೂಲಕ ಹಾಗೂ ಪ್ರವಚನದ ಮೂಲಕ ಜನರಲಿರುವ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಸುಜ್ಞಾನದ ಮಹಾ ಬೆಳಕನ್ನ ನಿಡುವದರ ಮೂಲಕ ಜನರ ಮನದ ಮೈಲಿಗೆಯನ್ನು ಕಳೆಯುವ ಕಾರ್ಯ ಮಾಡುತ್ತಿರುವ ಹುಣಶ್ಯಾಳ ಪಿ.ಜಿ ಗುರು ಹಿರಿಯರ ಯುವಕರ ಸೇವೆ ಶ್ಲಾಘನೀಯ ಎಂದರು
ಸಮಾರಂಭದ ದಿವ್ಯ ಸಾನಿಧ್ಯ ವನ್ನು ಮಲ್ಲಯ ಸ್ವಾಮಿಗಳು ವಹಿಸಿಕೊಂಡು ಆಶೀರ್ವಚನ ನೀಡಿದರು
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮದ ಗಣ್ಯರಾದ ಚಂದ್ರಗೌಡ ಪಾಟೀಲ್ ವಹಿಸಿದ್ದರು.
ವೇದಿಕೆಯಲ್ಲಿ ಮಹಾಂತೇಶ ರೊಡ್ಡನವರ. ರಾಮನಾಯ್ಕ ನಾಯ್ಕ, ಮಹದೇವ್ ಕಡಿ, ಮಹದೇವ್ ಹುದಲಿ,
ತಮ್ಮನಿ ಬಡವನ್ನಿ, ಪಂಡು ಪಾಟೀಲ ಮತ್ತಿತರರು ಜ್ಞಾನೇಶ್ವರ ಭಂಗೆರ ಉಪಸ್ಥಿತಿರಿದ್ದರು
ಲಕ್ಕಾಪ ಪಾಟೀಲ ನಿರೂಪಿಸಿದರು, ಅಪ್ಪಣ್ಣಾ ಮಗದುಮ ವಂದಿಸಿದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ