ರಾಜ್ಯ ಮಟ್ಟದ ಪ್ರೌಢ ಶಾಲೆಗಳ ಬಾಲಕರ ಕ್ರಿಕೇಟ್ ಪಂದ್ಯಾವಳಿ
ಮೈಸೂರ ತಂಡ ಪ್ರಥಮ, ಬೆಳಗಾವಿ ತಂಡ ದ್ವಿತೀಯ
ಮೂಡಲಗಿ: ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ಜಿ.ಪಂ ಬೆಳಗಾವಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಾರ್ಯಾಲಯ ಚಿಕ್ಕೋಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಮೂಡಲಗಿ ಹಾಗೂ ಮೂಡಲಗಿ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಬುಧವಾರದಂದು 17 ವರ್ಷದ ವಯೋಮಿತಿಯೊಳಗಿನ ಪ್ರೌಢ ಶಾಲೆಗಳ ರಾಜ್ಯ ಮಟ್ಟದ ಕ್ರಿಕೇಟ್ ಪಂದ್ಯಾವಳಿಯಲ್ಲಿ ಮೈಸೂರ ವಿಭಾಗದ ಮೈಸೂರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು.
ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ರಾಜ್ಯದ ನಾಲ್ಕು ವಿಭಾಗಗಳಿಂದ ಬೆಳಗಾವಿ, ಕಲಬುರ್ಗಿ, ಬೆಂಗಳೂರ, ಮೈಸೂರ ತಂಡಗಳು ಭಾಗವಹಿಸಿದವು. ಲೀಗ್ ಪಂದ್ಯಾವಳಿಯಲ್ಲಿ ಮೈಸೂರ ತಂಡ ಪ್ರಥಮ, ಬೆಳಗಾವಿ ತಂಡ ದ್ವಿತೀಯ ಮತ್ತು ಬೆಂಗಳೂರು ತಂಡ ತೃತೀಯ ಸ್ಥಾನ ಪಡೆದುಕೊಂಡರು.
ಮೈಸೂರ ಮತ್ತು ಬೆಳಗಾವಿ ತಂಡಗಳ ನಡುವೇ ನಡೆದ ಪಂದ್ಯದಲ್ಲಿ ಮೊದಲ್ಲೂ ಬ್ಯಾಟ್ ಮಾಡಿದ ಬೆಳಗಾವಿ ಏಳು ವಿಕೇಟ್ ನಷ್ಟಕ್ಕೆ 73 ರನ್ನ ಗಳಿಸಿತು, ಮೈಸುರು ತಂಡ ಎರಡು ವಿಕೇಟ್ ಕಳೆದುಕೊಂಡು 76 ರನ್ನ ಗಳಿಸಿ ವಿಜಯ ಶಾಲಿಯಾಯಿತ್ತು.
ಈ ಪಂದ್ಯಾವಳಿಯಲ್ಲಿ ಉತ್ತಮ ಬ್ಯಾಟ್ಸಮನ್ನಾಗಿ ಮೈಸೂರ ತಂಡದ ಪ್ರಣಿತ ಶೆಟ್ಟಿ, ಉತ್ತಮ ಬಾಲರಾಗಿ ಚೀರು ಕೃಷ್ಣಾ ಆಯ್ಕೆಗೊಂಡರು.
ಪಂದ್ಯಾವಳಿಯಲ್ಲಿ ನಿರ್ಣಾಯಕರಾಗಿ ಕೃಷ್ಣಾ ಯಡಹಳ್ಳಿ, ಬಾಳು ಸಣ್ಣಕ್ಕಿ, ದುಂಡಪ್ಪ ಢವಳೇಶ್ವರ, ಮಂಜು ಕೊಕಟನೂರ ಕಾರ್ಯನಿರ್ವಹಿಸಿದರು, ಪಂದ್ಯದ ವೀಕ್ಷಕ ವಿವರವನ್ನು ದೈಹಿಕ ಶಿಕ್ಷಕರಾದ ಮಾರುತಿ ಮುತ್ತೇನವರ ಮತ್ತು ಎಮ್.ಡಿ.ರಾಠೋಡ ನೀಡಿದರು.
ಮುಂಜಾನೆ ಪಂದ್ಯಾವಳಿಯನ್ನು ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ಬಿಇಒ ಅಜೀತ ಮನ್ನಿಕೇರಿ, ಸುಭಾಸ ಪೂಜೇರಿ, ಲಕ್ಷ್ಮಣ ಅಡಿಹುಡಿ, ಪುರಸಭೆ ಸದಸ್ಯರು ಉದ್ಘಾಟಿಸಿ ಟೂರ್ನಿಗೆ ಚಾಲನೆ ನೀಡಿದರು.
ವಿಜೇತ ತಂಡಗಳಿಗೆ ದೈಹಿಕ ಶಿಕ್ಷಣ ಪರಿವೀಕ್ಷಕ ಎ.ಎ.ಜುನೇದಪಟೇಲ್, ಮೂಡಲಗಿ ಶೈಕ್ಷಣಿಕ ವಲಯದ ವಿವಿಧ ಶಿಕ್ಷಕರ ಸಂಘಟನೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ದೈಹಿಕ ಶಿಕ್ಷಕರು ಬಹುಮಾನ ವಿತರಿಸಿದರು.