ಕೃಷಿ ಹೊಂಡದಲ್ಲಿ ಮೀನುಗಾರಿಕೆಯಿಂದ ಆದಾಯ
inmudalgi
ಜೂನ್ 26, 2020
ತಾಲ್ಲೂಕು, ಬೆಳಗಾವಿ
ಮೂಡಲಗಿ ತಾಲ್ಲೂಕಿನ ಅರಭಾವಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಏರ್ಪಡಿಸಿದ್ದ ಮೀನುಗಾರಿಕೆ ತರಬೇತಿ ಕುರಿತು ಬಡ್ರ್ಸ್ ಸಂಸ್ಥೆ ವಿಜ್ಞಾನಿ ಡಾ. ಆದರ್ಶ ಎಚ್.ಎಸ್. ಮಾತನಾಡಿದರು. ಕೃಷಿ ಅಧಿಕಾರಿ ಜರೀನಾ ಮಸೂತಿ, ಡಾ. ರಾಮಚಂದ್ರ ನಾಯ್ಕ ಇದ್ದಾರೆ
ಕೃಷಿ ವಿಜ್ಞಾನಿ ಡಾ. ಆದರ್ಶ ಎಚ್.ಎಸ್. ಅಭಿಪ್ರಾಯ
ಕೃಷಿ ಹೊಂಡದಲ್ಲಿ ಮೀನುಗಾರಿಕೆಯಿಂದ ಆದಾಯ
ಮೂಡಲಗಿ: ‘ಕೃಷಿ ಹೊಂಡದಲ್ಲಿ ಮೀನುಗಾರಿಕೆಯ ಮೂಲಕ ರೈತರು ದ್ವಿಗುಣ ಆದಾಯ ಪಡೆಯಬಹುದು’ ಎಂದು ತುಕ್ಕಾನಟ್ಟಿಯ ಬಡ್ರ್ಸ್ ಸಂಸ್ಥೆಯ ಕೃಷಿ ವಿಜ್ಞಾನಿ ಡಾ. ಆದರ್ಶ ಎಚ್.ಎಸ್. ಹೇಳಿದರು.
ತಾಲ್ಲೂಕಿನ ಅರಭಾವಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರೈತರಿಗೆ ‘ಕೃಷಿ ಹೊಂಡದಲ್ಲಿ ಮೀನುಗಾರಿಕೆ’ ಕುರಿತು ಆನ್‍ಲೈನ್ ತರಬೇತಿಯಲ್ಲಿ ಮಾತನಾಡಿದ ಅವರು ಸಾಕುವ ಮೀನುಗಳಿಗೆ ನೈಸರ್ಗಿಕ ಆಹಾರ ಸುಲಭವಾಗಿ ದೊರೆಯುವ ರೀತಿಯಲ್ಲಿ ಕೃಷಿ ಹೊಂಡದ ಆಳ ಮತ್ತು ಅಗಲದ ಬಗ್ಗೆ ಹೆಚ್ಚು ನಿಗಾವಹಿಸಬೇಕು ಎಂದರು.
ಮೀನು ಸಾಕುವ ಹೊಂಡದಲ್ಲಿ ಕಲುಷಿತ ನೀರು ಮತ್ತು ಕೀಟನಾಶಕಗಳು ಸೇರದಂತೆ ನೋಡಿಕೊಳ್ಳಬೇಕು. ಮೀನುಗಾರಿಕೆ ಯಶಸ್ಸಿಯಾಗಲು 6ರಿಂದ 8 ಸೆ.ಮಿ. ಉದ್ದನೆಯ ಮೀನಿನ ಮರಿಗಳನ್ನು ಸಾಕಬೇಕು. ಏಕೆಂದರೆ ಅವುಗಳಿಗೆ ಬದುಕುವ ಶಕ್ತಿ ಅಧಿಕ ಇರುತ್ತದೆ ಎಂದರು.
ತೋಟದಲ್ಲಿರುವ ಅತ್ಯಂತ ಶೂನ್ಯ ಭೂಮಿಯಲ್ಲಿ ವರ್ಷಕ್ಕೆ ರೂ. 30ರಿಂದ 40 ಸಾವಿರವರೆಗೆ ರೈತರು ಆದಾಯ ಪಡೆಯಬಹುದಾಗಿದೆ ಎಂದು ಡಾ. ಅದರ್ಶ ಹೇಳಿದರು.
ವಿವಿಧೆಡೆಯ 60ಕ್ಕೂ ಅಧಿಕ ಸಂಖ್ಯೆಯ ರೈತರು ತರಬೇತಿಯಲ್ಲಿ ಭಾಗವಹಿಸಿ ವಿಜ್ಞಾನಿಗಳೊಂದಿಗೆ ಚರ್ಚಿಸಿ ಮಾಹಿತಿಗಳನ್ನು ಪಡೆದುಕೊಂಡರು.
ತರಬೇತಿ ಕೇಂದ್ರದ ಕೃಷಿ ಅಧಿಕಾರಿ ರುಬೀನಾ ಮಸೂತಿ ಪ್ರಾಸ್ತಾವಿಕ ಮಾತನಾಡಿದರು. ಡಾ. ರಾಮಚಂದ್ರ ನಾಯ್ಕ, ಡಾ. ತಟಗಾರ, ಡಾ. ದಿಲೀಪ ಮಸೂತಿ, ಡಾ. ಪ್ರವೀನ ಉಪಸ್ಥಿತರಿದ್ದರು.