Breaking News
Home / Recent Posts / ಭಕ್ತಿ ಸಂಜೀವನ ಕೂಟಗಳು-2023ರ ಸಮಾರೋಪ ಸಮಾರಂಭ

ಭಕ್ತಿ ಸಂಜೀವನ ಕೂಟಗಳು-2023ರ ಸಮಾರೋಪ ಸಮಾರಂಭ

Spread the love

ಭಕ್ತಿ ಸಂಜೀವನ ಕೂಟಗಳು-2023ರ ಸಮಾರೋಪ ಸಮಾರಂಭ

ಮೂಡಲಗಿ: ಯುವ ಶಕ್ತಿ ದುಶ್ಚಟಗಳಿಗೆ ಬಲಿಯಾಗದೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣಕ್ಕೆ ಒತ್ತುಕೊಟ್ಟು ಸತತ ಅಧ್ಯಯನ ಮಾಡಿ ಒಳ್ಳೆಯ ಸ್ಥಾನಮಾನ ಹೊಂದುವದರ ಜೊತೆಗೆ ತಮ್ಮನ್ನು ಉನ್ನತಸ್ಥಿತಿಗೆ ತಂದ ಸಮಾಜಕ್ಕೆ ಋಣಿಯಾಗಿ ಬದುಕಬೇಕೆಂದು ಬೆಳಗಾವಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಷನ ಅಧ್ಯಕ್ಷ ರಾಹುಲ್ ಸತೀಶ ಜಾರಕಿಹೊಳಿ ಹೇಳಿದರು.
ಅವರು ರವಿವಾರ ಸಂಜೆ ಪಟ್ಟಣದ ಮೆಥೋಡಿಸ್ಟ್ ಚರ್ಚ ಆಶ್ರಯದಲ್ಲಿ ಮೂರ ದಿನಗಳ ಕಾಲ ಜರುಗಿದ ಭಕ್ತಿ ಸಂಜೀವನ ಕೂಟಗಳು-2023ರ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮದರಥೇರಿಸಾ ಅವರ ಸಮಾಜಿಕ ಸೇವೆಯನ್ನು ಸ್ಮರಿಸಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ತಾವುಗಳು ಸೇವಾ ಮನೋಭಾವ ರೂಢಿಸಿಕೊಳ್ಳಲು ಕರೆ ನೀಡಿ ಅವರು ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಕ್ರೈಸ್ಥ ನಿಗಮ ಮಂಡಳಿಯನ್ನು ಜಾರಿಗೆ ತಂದಿದ್ದು, ಈ ನಿಗಮದಿಂದ ಸಿಗುವ ಸಹಾಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಮೂಡಲಗಿ ಪಟ್ಟಣದಲ್ಲಿ ನೂತನ ಚರ್ಚ ಕಟ್ಟಡ ನಿರ್ಮಾನಕ್ಕೆ ಜಿಲ್ಲಾ ಉಸ್ತುವಾರಿ ಮತ್ತು ಲೋಕಪಯೋಗಿ ಸಚಿವರಾದ ನಮ್ಮ ತಂದೆ ಸತೀಶ ಜಾರಕಿಹೊಳಿ ಅವರ ಮುಖಾಂತರ ಅನುದಾನ ನೀಡಲು ಶ್ರಮೀಸುವದಾಗಿ ಭರಸೆ ನೀಡಿದರು.

ಮೂರು ದಿನಗಳ ಕಾಲ ದೈವ ಸಂದೇಶ ನೀಡಿದ ಬೆಂಗಳೂರು ನ್ಯೂ ಹಾರ್ವೆಸ್ಟ್ ಚರ್ಚನ ರೇ. ಪಿ.ಎಸ್. ಮಾಚಯ್ಯಾ ಮ್ಯಾಥ್ಯೂ ಅವರು ಸತ್ಯವೇದದ ವಾಕ್ಯದ ಅನುಸಾರ ಜೀವಿಸಿ ತಮ್ಮ ಜೀವಿತವನ್ನು ಸಾರ್ಥಕ ಪಡಿಸಿಕೊಳ್ಳ ಬೇಕೆಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮೆಥೋಡಿಸ್ಟ್ ಚರ್ಚ ಸಭಾ ಪಾಲಕ ರೇ. ವಿಜಯಕುಮಾರ ಮೂಡಲಗಿ ವಹಿಸಿದ್ದರು.

ವೇದಿಕೆಯಲ್ಲಿ ಎಸ್.ಆರ್.ಸೋನವಲಕರ, ಡಾ.ಗಿರೀಶ ಸೋನವಾಲಕರ, ಕೆ.ಟಿ.ಗಾಣಿಗೇರ, ಮೂಡಲಗಿ ಶಿಕ್ಷಣಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ಮಲ್ಲಿಕಾರ್ಜುನ ಕಬ್ಬೂರ, ಸಂತೋಷ ಸೋನವಾಲಕರ, ಹನಮಂತ ಗುಡ್ಲಮನಿ, ಸುಭಾಸ ಪೂಜೇರಿ, ಅನ್ವರ ನದಾಫ್, ಸಚೀನ್ ಸೋನವಾಲಕರ, ಈಶ್ವರ ಕಂಕಣವಾಡಿ, ಕಾರ್ಯಕ್ರಮದ ರೂವಾರಿ ಮರೆಪ್ಪ ಮರೆಪ್ಪಗೋಳ, ರವೀಂದ್ರ ಸಣ್ಣಕ್ಕಿ, ಸುಭಾಸ ಸಣ್ಣಕ್ಕಿ, ರಮೇಶ ಸಣ್ಣಕ್ಕಿ, ಆನಂದ ಬೈಬಲ್, ರಾಜೇಂದ್ರ ಪರಸನ್ನವರ ಮತ್ತಿತರರು ಉಪಸ್ಥಿತರಿದ್ದರು.

ಮೂರು ದಿನಗಳ ಕೂಟದಲ್ಲಿ ಮೆಥೋಡಿಸ್ಟ್ ಚರ್ಚ ಸಭೆಯ ಹಿರಿಯರು, ಮಹಿಳೆಯರು, ಕ್ರಿಸ್ತಜ್ಯೋತಿ ಸಂಸ್ಥೆ ಮತ್ತು ಎಮ್.ವಾಯ್.ಎಫ್ ಕೂಟದ ಸದಸ್ಯರು, ಮೂಡಲಗಿ ಪಟ್ಟಣ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳ ಜನರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದರು.
ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಪಿ.ಪರಸನ್ನವರ ನಿರೂಪಿಸಿ ವಂದಿಸಿದರು.
.ಫೋಟೋ ಕ್ಯಾಪ್ಷನ್> ಮೂಡಲಗಿ: ಪಟ್ಟಣದ ಮೆಥೋಡಿಸ್ಟ್ ಚರ್ಚ ಆಶ್ರಯದಲ್ಲಿ ನಡೆದ ಭಕ್ತಿ ಸಂಜೀವನ ಕೂಟಗಳು ಸಮಾರೋಪ ಸಮಾರಂಭವನ್ನು ರಾಹುಲ್ ಜಾರಕಿಹೊಳಿ ಉದ್ಘಾಟಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ