ಮೂಡಲಗಿಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಾನಿಂಗ್ ಸ್ಟಾರ್ ಕ್ರಿಕೆಟರ್ಸ್ ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಆಯೋಜಿಸಿದ ಎಂಪಿಎಲ್-2023 ಕ್ರಿಕೆಟ್ ಟೂರ್ನಿಯನ್ನು ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ಉದ್ಘಾಟಿಸಿದರು
—————————————————
ಮೂಡಲಗಿಯಲ್ಲಿ ‘ಎಂಪಿಎಲ್-2023’ ಕ್ರಿಕೆಟ್ ಟೂರ್ನಿ ಉದ್ಘಾಟನೆ
ಮೂಡಲಗಿ: ಕನ್ನಡ ರಾಜ್ಯೋತ್ಸವ ಅಂಗವಾಗಿ ಮೂಡಲಗಿಯ ಮಾರ್ನಿಂಗ್ ಸ್ಟಾರ್ ಕ್ರಿಕೆಟರ್ಸ್ ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಆಯೋಜಿಸಿದ ಮೂಡಲಗಿ ಪ್ರಿಮಿಯರ್ ಲಿಂಗ್ ಟೂರ್ನಿಯ ಉದ್ಘಾಟನೆಯನ್ನು ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ನೆರವೇರಿಸಿದರು.
ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಈರಣ್ಣ ಕಡಾಡಿ ಪಿಚ್‍ವನ್ನು ಉದ್ಘಾಟಿಸಿ ಮಾತನಾಡಿ ‘ಕ್ರೀಡೆಗಳು ಪರಸ್ಪರ ಸೌಹಾರ್ದತೆ, ಸ್ನೇಹತ್ವವನ್ನು ಬೆಳೆಸುತ್ತವೆ’ ಎಂದರು.
ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಗ್ರಾಮೀಣ ಭಾಗದಲ್ಲಿ ಸಂಘಟಿಸುವ ಕ್ರೀಡಾಕೂಟಗಳು ಕ್ರೀಡಾಪಟುಗಳಿಗೆ ಸಹಕಾರಿಯಾಗುತ್ತವೆ. ಉತ್ತಮ ಆಟವಾಡಿ ಕ್ರೀಡೆಗಳಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಬೇಕು ಎಂದು ಹೇಳಿದರು.
ಟ್ರೋಪಿಗಳ ಅನಾವರಣವನ್ನು ಬಸವೇಶ್ವರ ಅರ್ಬನ್ ಕೋ.ಆಪ್ ಸೊಸೈಟಿ ಉಪಾಧ್ಯಕ್ಷ ಗಿರೀಶ ಎಸ್. ಢವಳೇಶ್ವರ, ಪುರಸಭೆ ಸದಸ್ಯ ರವೀಂದ್ರ ಸಣ್ಣಕ್ಕಿ ಅವರು ನೆರವೇರಿಸಿದರು.
ಅತಿಥಿಯಾಗಿ ಮೂಡಲಗಿ ಶಿಕ್ಷಣ ಸಂಸ್ಥೆ ನಿರ್ದೇಶಕ ರವಿ ಸೋನವಾಲಕರ, ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಅಧ್ಯಕ್ಷ ಶ್ರೀಶೈಲ್ ಲೋಕನ್ನವರ, ಪುರಸಭೆ ಸದಸ್ಯ ಈರಣ್ಣ ಕೊಣ್ಣೂರ, ವೆಂಕಟೇಶ ಸೋನವಾಲಕರ, ಸುಪ್ರೀತ ಸೋನವಾಲಕರ, ಡಾ. ಎಸ್.ಎಸ್. ಪಾಟೀಲ, ಪ್ರಕಾಶ ಮಾದರ, ಪ್ರೊ. ಎಸ್.ಬಿ. ಖೋತ, ಡಾ. ಸಂಜಯ ಶಿಂಧಿಹಟ್ಟಿ, ಹನಮಂತ ಸತರಡ್ಡಿ, ಕೃಷ್ಣಾ ಕೆಂಪಸತ್ತಿ, ಪ್ರಶಾಂತ ನಿಡಗುಂದಿ, ಪ್ರಗತಿ ವಿಹಾರ ಚಿಟ್ಸ್ ಶಿವಬಸು ಭುಜನ್ನವರ, ಡಾ. ಬಸವರಾಜ ಫಾಲಬಾವಿ, ಮಹಮ್ಮದರಫಿ ಕೋಲೂರ, ಡಾ. ಮಹೇಶ ಮುಳವಾಡ, ಜೇಮ್ಸ್ ಗಾಡಿಕಾರ, ಮೈನು ಪಟೇಲ, ಪ್ರಕಾಶ ಕಾಳಪ್ಪಗೋಳ, ಮಲ್ಲಪ್ಪ ಕುರಬಗಟ್ಟಿ, ಗಿರೀಶ ಮೇತ್ರಿ, ರವಿ ಪತ್ತಾರ, ಶಿವಾನಂದ ಗಾಡವಿ, ಸೋಮು ಮಠಪತಿ, ಸುರೇಶ ಸಣ್ಣಕ್ಕಿ, ಮಹಮ್ಮದ, ಬಂಧು ವೇದಿಕೆಯಲ್ಲಿದ್ದರು.
ಪ್ರಸ್ತಾವಿಕವಾಗಿ ಬಾಲಶೇಖರ ಬಂದಿ ಮಾತನಾಡಿದರು. ಮಹಾವೀರ ಸಲ್ಲಾಗೋಳ, ಶಿವಾನಂದ ಕಿತ್ತೂರ ನಿರೂಪಿಸಿದರು.