ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ
ಮೂಡಲಗಿ: ಕೋವಿಡ್-19 ತಡೆಯಲು ಅವಿರತ ಪರಿಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಲ್ಲಿ ಆತ್ಮಸ್ಥೆತ್ರೖರ್ಯ ತುಂಬಲು ಪಟ್ಟಣದ ಮೂಡಲಗಿ ಶ್ರೀ ಸಾಯಿ ಸೌಹಾರ್ದ ಸಹಕಾರಿ ನಿ,ಮೂಡಲಗಿ ವತಿಯಿಂದ ಪ್ರೋತ್ಸಾಹಕರ ಧನ ವಿತರಿಸಿತು.
ಆಶಾ ಕಾರ್ಯಕರ್ತೆಯರು ಕೊರೊನಾ ವೈರಸ್ ಹರಡುವಿಕೆ ತಡೆಯುವಲ್ಲಿಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿಅವರಲ್ಲಿಧೈರ್ಯ ತುಂಬುವಂತೆ ಸಿಎಂ ಯಡಿಯೂರಪ್ಪ ಅವರು ಎಲ್ಲಸಹಕಾರಿ ಸಂಘಗಳಿಗೆ ನಿರ್ದೇಶನ ನೀಡಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ. ಪ್ರೋತ್ಸಾಹ ಧನ ನೀಡುವಂತೆ ಸೂಚಿಸಲಾಗಿತ್ತು. ಹಾಗಾಗಿ ಮೂಡಲಗಿ ಶ್ರೀ ಸಾಯಿ ಸೌಹಾರ್ದ ಸಹಕಾರಿ ನಿ,ಮೂಡಲಗಿ ವತಿಯಿಂದ ಆಶಾ ಕಾರ್ಯಕರ್ತೆಯರಾದ ಶೋಭಾ ಶಾಬಣ್ಣವರ ಹಾಗೂ ಬೌರವ್ವ ನಾಶಿ ಅವರಿಗೆ ತಲಾ 3 ಸಾವಿರ ರೂ.ಗಳ ಚೆಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮೂಡಲಗಿ ಶ್ರೀ ಸಾಯಿ ಸೌಹಾರ್ದ ಸಹಕಾರಿ ನಿ, ಅಧ್ಯಕ್ಷ ಮರೆಪ್ಪ ಮರೆಪ್ಪಗೊಳ, ಉಪಾಧ್ಯಕ್ಷ ಶಿವಪ್ಪ ಚಂಡಕಿ, ಸದಸ್ಯರಾದ ಮಲ್ಲಿಕಾರ್ಜುನ ಕಬ್ಬೂರ,ಚಿನ್ನಪ್ಪ ಝಂಡೇಕುರಬರ,ನಾರಾಯಣ ಮಾಲಿ,ರಾಮಪ್ಪ ಕೆಂಚರಡ್ಡಿ, ಶಂಕರ ಮುಗಳಖೋಡ, ಹಸನಸಾಬ ಕುರಬೇಟ,ಶಂಕರ ತುಪ್ಪದ,ರವೀಂದ್ರ, ಮಠಪತಿ,ಮಹೇಶ್ವರ ಹಳ್ಳೂರ.ಶ್ರೀಮತಿ ಸುನೀತಾ ಹೊಸೂರ, ಮಹಾದೇವಿ ಪಾಟೀಲ ಹಾಗೂ ಸಿಬ್ಬಂದಿ ಉಪ್ಥಿತರಿದ್ದರು.