ಮೂಡಲಗಿ: ಶಿವಬೋಧರಂಗ ಮಲ್ಟಿಪರಪಜ್ ಸಹಕಾರಿಯು ಕಡಿಮೆ ಅವಧಿಯಲ್ಲಿ ಗ್ರಾಹಕರ ಸಹಕಾರದಿಂದ ಎರಡು ಶಾಖೆಗಳನ್ನು ಹೊಂದಿ ಕಳೆದ ಮಾರ್ಚ ಅಂತ್ಯಕ್ಕೆ 27.13 ಲಕ್ಷ ಲಾಭಗಳಿಸಿ ಪ್ರಗತಿಪಥತ್ತದ ಸಾಗಿದೆ, ಶಿಘ್ರದಲ್ಲಿಯೇ ಇನ್ನೂ ಎರಡು ಶಾಖೆಗಳನ್ನು ಪ್ರಾರಂಭಿಸಲಾಗುವುದು ಎಂದು ಸಹಕಾರಿ ಅಧ್ಯಕ್ಷ ವೆಂಕಟೇಶ ಸೋನವಾಲಕರ ಹೇಳಿದರು.
ಅವರು ಪಟ್ಟಣದ ಶ್ರೀ ಶಿವಬೋಧರಂಗ ಮಲ್ಟಿಪರಪಜ್ ಸೌಹಾರ್ದ ಸಹಕಾರಿಯ ಸಭಾ ಭವನದಲ್ಲಿ ಜರುಗಿದ 13ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 2011ರಲ್ಲಿ ಕೆವಲ ಮೂರು ನೂರ ಸದಸ್ಯರೊಂದಗೆ ಆರಂಭವಾದ ಸಂಸ್ಥೆಯು ಕಳೆದ ಮಾರ್ಚ ಅಂತ್ಯಕ್ಕೆ 1625 ಸದಸ್ಯರಿಂದ 24.35 ಲಕ್ಷ ರೂ ಶೇರು ಬಂಡವಾಳ, 1.50 ಕೋಟಿ ರೂ ನಿಧಿಗಳು, ಸಾರ್ವಜನಿಕರಿಂದ 17.67 ಕೋಟಿ ಠೇವು ಸಂಗ್ರಹಿಸಿ ಒಟ್ಟು 19.42 ಕೋಟಿ ರೂ ದುಂಡಿಯುವ ಬಂಡವಾಳ ಹೊಂದಿ ಸಹಕಾರಿಯ ಸದಸ್ಯರಿಗೆ 10.43 ಕೋಟಿ ರೂ ಸಾಲ ವಿತರಿಸಿದು. ಅಡಿಟ್‍ದಲ್ಲಿ ‘ಅ’ ಶ್ರೇಣಿಯನ್ನು ಪಡೆದುಕೊಂಡು ಗ್ರಾಹಕರ ವಿಶ್ವಾಸವನ್ನು ಕಾಯ್ದುಕೊಂಡು ಬಂದಿದೆ, ಗೋಕಾಕ ಮತ್ತು ಚಿಕ್ಕೋಪ್ಪ ಕೆ.ಎಸ್ ಎರಡು ಶಾಖೆಗಳು ಪ್ರಗತಿಯಲ್ಲಿ ಸಾಗಿವೆ ಎಂದ ಅವರು ಸಹಕಾರಿಯ ಪ್ರಧಾನ ಕಛೇರಿಗೆ ಸ್ವಂತ ಕಟ್ಟಡದ ನಿರ್ಮಾಣದ ಗುರಿ ಹೊಂದಲಾಗಿದೆ ಎಂದರು.
ಗೋಕಾಕ ಶಾಖೆಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಮಾನಗಾಂವಿ ಮತ್ತು ಚಿಕ್ಕೋಪ್ಪ ಕೆ.ಎಸ್ ಶಾಖೆಯ ನಿರ್ದೇಶಕ ಬಸಪ್ಪ ಗಾಣಗಿ ಅವರು ಮಾತನಾಡಿ ಸಹಕಾರಿಯು ಅಭಿವೃದ್ಧಿ ಪರ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಸಹಕಾರಿಯ ಉಪಾಧ್ಯಕ್ಷ ಸಂಜಯ ಮೋಕಾಶಿ, ನಿರ್ದೇಶಕರಾದ ಪ್ರಕಾಶ ಸೋನವಾಲಕರ, ಡಾ.ತಿಮ್ಮಣ್ಣಾ ಗಿರಡ್ಡಿ, ಈರಪ್ಪ ಬಾಡದ, ಪರಶುರಾಮ ಬಂಡಿವಡ್ಡರ, ಗೋಕಾಕ ಶಾಖೆಯ ನಿರ್ದೇಶಕರಾದ ಬಸವರಾಜ ಬನ್ನಶೆಟ್ಟಿ, ಶ್ರೀಧರ ಬೆನ್ನೂರ, ಸುರೇಶ ಕುದರಿ, ಜಯಾನಂದ ಸವಣೂರ, ಲಕ್ಷ್ಮಣ ದಂಡಿನ, ನಾಗರಾಜ ಬಾನಿ, ಚಿಕ್ಕೋಪ್ಪ ಕೆ.ಎಸ್ ಶಾಖೆಯ ಅಧ್ಯಕ್ಷ ಸುನೀಲ ದಾಸರಡ್ಡಿ, ನಿರ್ದೇಶಕರಾದ ರಾಜಶೇಖರ ಕರ್ಕಿ, ನಾಗರಾಜ ಮಳ್ಳಿ, ಹಣಮಂತಗೌಡ ಪಾಟೀಲ, ಮುಖಂಡ ಪುಲಕೇಶ ಸೋನವಾಲಕರ ಮತ್ತಿತರರು ಇದ್ದರು. ಸಹಕಾರಿಯ ಪ್ರಧಾನ ಕಾರ್ಯದರ್ಶಿ ಕಿರಣ ಕುದರಿ ಮತ್ತು ಈರಣ್ಣಾ ಪಾಲಭಾಂವಿ ನಿರೂಪಿದರು, ಶೋಮಶೇಖರ ಬಾಡದ ವಿಷಯ ಮಂಡಿಸಿದರು, ಸಮೀರ ಹವಾಲ್ದಾರ ವಾರ್ಷಿಕ ವರದಿ ಮಂಡಿಸಿದರು, ಈಶ್ವರ ಕುರಣಿ ವಂದಿಸಿದರು.