Breaking News
Home / Recent Posts / ನವರಾತ್ರಿ ಉತ್ಸವ ನಿಮಿತ್ಯ ಅ.5ರಿಂದ ಮೂರು ದಿನಗಳ ಕಾಲ ಮೂಡಲಗಿಯಲ್ಲಿ ಕೃಷಿ ಮೇಳ ಆಯೋಜನೆ

ನವರಾತ್ರಿ ಉತ್ಸವ ನಿಮಿತ್ಯ ಅ.5ರಿಂದ ಮೂರು ದಿನಗಳ ಕಾಲ ಮೂಡಲಗಿಯಲ್ಲಿ ಕೃಷಿ ಮೇಳ ಆಯೋಜನೆ

Spread the love

ಮೂಡಲಗಿ : ಪಟ್ಟಣದ ನವರಾತ್ರಿ ಉತ್ಸವ ಕಮೀಟಿಯಿಂದ ಅ.3ರಿಂದ ಜರಗುವು 9 ದಿನಗಳ ನವರಾತ್ರಿ ಉತ್ಸವದ ಅಂಗವಾಗಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ, ತುಕ್ಕಾನಟ್ಟಿ ಬಡ್ರ್ಸ ಕೃಷಿ ವಿಜ್ಞಾನ ಕೇಂದ್ರ ಹಾಗೂ ಶಿವಬೋಧರಂಗ ಪಿಕೆಪಿಎಸ್, ನಿಸರ್ಗ ಫೌಂಡೇಶನ್ ಮೂಡಲಗಿ ಇವುಗಳ ಸಹಯೋಗದೊಂದಿಗೆ ಕೃಷಿ ಮೇಳವನ್ನು ಅ.5,6 ಮತ್ತು 7 ರಂದು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ದ್ವೀತಿಯ ಬಾರಿಗೆ ಆಯೋಜಿಸಲಾಗಿದೆ ಎಂದು ಉತ್ಸವ ಕಮೀಟಿಯ ಕೃಷ್ಣಾ ನಾಶಿ ಹೇಳಿದರು.
ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಕೃಷಿ ಮೇಳದ ಪ್ರಚಾರ ಕರಪತ್ರಗಳು ಮತ್ತು ಟೀ ಶರ್ಟ ಬಿಡುಗೋಡೆಗೊಳ್ಳಿಸಿ ಮಾತನಾಡಿದ ಅವರು, ರೈತಾಪಿ ವರ್ಗಕ್ಕೆ ಉಪಯೋಗವಾಗುಂತ ಸಲಕರಣೆಗಳು, ಕೃಷಿ ಯಂತ್ರೋಪಕರಣಗಳು ಪ್ರದರ್ಶನ, ಸಾವಯುವ ಕೃಷಿ, ಸಿರಿಧ್ಯಾನಗಳ ಉತ್ಪಾದನೆ, ವಿಜ್ಞಾನ ವಸ್ತು ಪ್ರದರ್ಶನ, ಶ್ವಾನ ಪ್ರದರ್ಶನ, ಜಾನುವಾರುಗಳ ಪ್ರದರ್ಶನ, ಜೈವಿಕ ಗೊಬ್ಬರ ಹಾಗೂ ಪೀಡೆನಾಶಕ, ಜೇನು ಕೃಷಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಈ ಭಾಗದ ರೈತರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೃಷಿ ಮೇಳವನ್ನು ಆಯೋಜಿಸಲಾಗಿದೆ ಎಂದರು.
ಈರಪ್ಪ ಢವೇಶ್ವರ ಮಾತನಾಡಿ, ಕೃಷಿ ಮೇಳದಲ್ಲಿ ಸುಸ್ಥಿರ ಕೃಷಿಗಾಗಿ ಸಿರಿಧಾನ್ಯಗಳು, ಪ್ರಪ್ರಥಮ ಬಾರಿಗೆ ಮೂಡಲಗಿ ಪಟ್ಟಣಕ್ಕೆ 18 ಭಾಷೆಯ ಸಂವಹನದಿಂದ ಕಾರ್ಯನಿರ್ವಸಿಸುವ ಶ್ವಾನದಿಂದ ವಿಶೇಷ ಪ್ರದರ್ಶನ, ಉತ್ತಮ ರಾಸುಗಳ ಪ್ರದರ್ಶನ, ಕಿಲಾರಿ ಆಕಳ ಪ್ರದರ್ಶನ, ಟಗರಿನ ಕಾದಾಟ, ರಂಗೋಲಿ ಸ್ಪರ್ಧೆ, ಬಲೂನ್ ಸ್ಪರ್ಧೆ, ಕಣ್ಣು ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆ, ಬಾಳೆ ಹಣ್ಣು ತಿನ್ನುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ಹಾಗೂ ವಿವಿಧ ಜಿಲ್ಲೆಗಳಿಂದ ರೈತಬಾಂಧವರು ಮೂರು ದಿನದ ಕೃಷಿ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದ್ವೀತಿಯ ಕೃಷಿ ಮೇಳವನ್ನು ಯಶಸ್ವಿಯಾಗಿಸಲು ಸಹಕರಿಸಬೇಕೆಂದು ಮತ್ತು ಹೆಚ್ಚಿನ ಮಾಹಿತಿಗಾಗಿ ಮೊ.8277934043, 9590718444, 8971047386, 9008846822, ಗೆ ಸಂಪರ್ಕಿsಸಲು ಕೋರಿದರು.
ಕುಮಾರ ಗಿರಡ್ಡಿ ಮತ್ತು ಜಗದೀಶ ತೇಲಿ ಮಾತನಾಡಿ, ಅ.3ರಿಂದ ನವರಾತ್ರಿ ಉತ್ಸವದ ವೇದಿಕೆಯಲ್ಲಿ ಪ್ರತಿ ವರ್ಷದಂತೆ ವಿವಿಧ ತೇರನಾದ ಸಂಸ್ಕøತಿ ಕಾರ್ಯಕ್ರಮಗಳು, ದುರ್ಗಾ ಮಾತೆಯ ವಿವಿಧ ಪೂಜೆಗಳು ಸತತ 9 ದಿನಗಳ ಕಾಲ ಜರಗುತ್ತವೆ ಎಂದರು.
ಈ ಸಂದರ್ಭದಲ್ಲಿ ನವರಾತ್ರಿ ಉತ್ಸವ ಕಮೀಟಿಯ ಅಜ್ಜಪ್ಪ ಅಂಗಡಿ, ಅಜ್ಜಪ್ಪ ಬಳಿಗಾರ, ಹಣಮಂತ ಸತರಡ್ಡಿ, ಸದಾಶಿವ ನಿಡಗುಂದಿ, ಸಂಜು ಕಮತೆ, ಯಲ್ಲಪ್ಪ ಪೂಜೇರಿ, ಪ್ರಭು ತೇರದಾಳ, ಚೇತನ ನಿಶಾನಿಮಠ ಮಹೇಶ ಒಡೆಯರ್, ಅಜ್ಜಪ್ಪ ಜರಾಳೆ, ಬಸು ಅಂಗಡಿ, ಶ್ರೀರಂಗ ಜೋಶಿ, ಚೇತನ ಹೊಸಕೋಟಿ, ಮಲ್ಲಪ್ಪ ಪಾರ್ಶಿ, ಪ್ರದೀಪ ದರೂರ, ಕಾಡಪ್ಪ ಮೇಳ್ಳಿಗೇರಿ ಮತ್ತಿತರು ಉಪಸ್ಥಿತರಿದ್ದರು


Spread the love

About inmudalgi

Check Also

ಸಾಹಿತಿ ಚಿದಾನಂದ ಹೂಗಾರ ರವರ ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ

Spread the loveಮೂಡಲಗಿಯ ಚೈತನ್ಯ ಸೊಸೈಟಿಯಲ್ಲಿ ಮೂಡಲಗಿ ತಾಲ್ಲೂಕು ಚುಸಾಪ ಮತ್ತು ಮಲ್ಲಿಕಾರ್ಜುನ ಪ್ರಕಾಶನದಿಂದ ಏರ್ಪಡಿಸಿದ ಚಿದಾನಂದ ಹೂಗಾರ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ