Breaking News
Home / ಬೆಳಗಾವಿ / ಶಿಕ್ಷಣದಿಂದ ದೇಶ ಪ್ರಗತಿಯಾಗಲು ಸಾಧ್ಯ-ಮಂಗಲಾ ಅಂಗಡಿ

ಶಿಕ್ಷಣದಿಂದ ದೇಶ ಪ್ರಗತಿಯಾಗಲು ಸಾಧ್ಯ-ಮಂಗಲಾ ಅಂಗಡಿ

Spread the love

ಮೂಡಲಗಿ: ಭಾರತ ದೇಶದ ಭವಿಷ್ಯ ಯುವ ಶಕ್ತಿಯ ಮೇಲೆ ಅವಲಂಬಿತವಾಗಿದ್ದು, ಸಮಾಜದಲ್ಲಿರುವ ಪ್ರತಿಯೋಬ್ಬ ಕುಟುಂಬದ ಸದಸ್ಯರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಿದಾಗ ಮಾತ್ರ ದೇಶ ಆರ್ಥಿಕವಾಗಿ, ಸಮಾಜಿಕವಾಗಿ ಬಲಿಷ್ಠ ರಾಷ್ಟ್ರವಾಗುವದು ಎಂದು ಬೆಳಗಾವಿ ಲೋಕಸಭಾ ಮಾಜಿ ಸದಸ್ಯೆ ಮಂಗಲಾ ಅಂಗಡಿ ಹೇಳಿದರು.

ಅವರು ಗುರ್ಲಾಪೂರದ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 2023-24ರಲ್ಲಿ ಸಂಸದರ ಅನುದಾನಲ್ಲಿ ಮಂಜೂರಾಗಿದ್ದ ಕಾಮಗಾರಿಗೆ ಗುದ್ದಲಿ ಪೂಜೆ ನೇರವೆರಿಸಿ ಮಾತನಾಡಿದರು.
ಜಿಲ್ಲಾ ಬಿಜೆಪಿ ಮಹಿಳಾ ಮುಖಂಡರಾದ ಶೃದ್ಧಾ ಸಂಕಲ್ಪ ಶೆಟ್ಟರ ಮಾತನಾಡಿ, ಅರಬಾವಿ ಮತಕ್ಷೇತ್ರದ ಜನತೆ ಲೋಕಸಭಾ ಸದಸ್ಯರ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಪ್ರಕಾಶ ಮಾದರ, ಎಸ್.ಎಸ್.ಮೂಗಳಖೋಡ, ಬಿ.ಸಿ.ಮೂಗಳಖೋಡ, ಆರ್.ಬಿ.ನೇಮಗೌಡರ, ಸದಾಶಿವ ನೇರಲಿ, ಕೆಂಪಣ್ಣಾ ದೇವರಮನಿ, ದುಂಡಪ್ಪ ಮೂಗಳಖೋಡ, ಮಲ್ಲಪ್ಪ ನೇಮಗೌಡರ, ಶಿವಬಸು ಇಟ್ನಾಳ, ರಾಮಣ್ಣ ನೇಮಗೌಡರ, ಬಸವರಾಜ ಗಾಡವಿ, ಶ್ರೀಕಾಂತ ಕೌಜಲಗಿ, ಈಶ್ವರ ಮುರಗೋಡ, ಡಾ.ಮಹೇಶ ಹಳ್ಳೂರ, ಮಹಾಲಿಂಗ ಒಂಟಗೋಡಿ, ಆನಂದ ಮೂಡಲಗಿ ಮತ್ತಿತರರು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ