Breaking News
Home / ಬೆಳಗಾವಿ / ‘ಕನ್ನಡ ನಾಡಿನ ಕೀರ್ತಿಯು ವಿಶ್ವವ್ಯಾಪ್ತಿಯಾಗಿ ಹಬ್ಬಿದೆ’- ಡಾ. ಮಹಾದೇವ ಪೋತರಾರಜ

‘ಕನ್ನಡ ನಾಡಿನ ಕೀರ್ತಿಯು ವಿಶ್ವವ್ಯಾಪ್ತಿಯಾಗಿ ಹಬ್ಬಿದೆ’- ಡಾ. ಮಹಾದೇವ ಪೋತರಾರಜ

Spread the love


ಮೂಡಲಗಿ ತಾಲ್ಲೂಕಿನ ಫುಲಗಡ್ಡಿಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಜಾನಪದ ಸಮ್ಮೇಳನದಲ್ಲಿ ರೂಪಕ ಪ್ರದರ್ಶಿಸಿದ ಶಾಲಾ ಬಾಲಕರನ್ನು ಗೌರವಿಸಿದರು.

ಮೂಡಲಗಿ: ‘ಕನ್ನಡ ನಾಡು, ನುಡಿ, ಸಂಸ್ಕøತಿಯ ವೈಶಿಷ್ಟ್ಯತೆಯ ಕುರಿತು ಪ್ರಾಚೀನ ಕವಿಗಳು ಬಣ್ಣಿಸಿದ್ದು, ಕನ್ನಡ ನಾಡಿನ ಕೀರ್ತಿಯು ವಿಶ್ವವ್ಯಾಪ್ತಿಯಾಗಿ ಹಬ್ಬಿದೆ’ ಎಂದು ಬನಹಟ್ಟಿ ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕ ಡಾ. ಮಹಾದೇವ ಪೋತರಾಜ ಹೇಳಿದರು.
ತಾಲ್ಲೂಕಿನ ಫುಲಗಡ್ಡಿ ಗ್ರಾಮದ ಮಹರ್ಷಿ ವಾಲ್ಮೀಕಿ ಸಮಿತಿ, ಡಾ. ಬಿ.ಆರ್.ಅಂಬೇಡ್ಕರ್ ಯುವಕ ಸಂಘ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಗೋಕಾಕದ ಕನ್ನಡ ಜಾನಪದ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಜಾನಪದ ಸಮ್ಮೇಳನದಲ್ಲಿ ಅತಿಥಿಯಾಗಿ ಉಪನ್ಯಾಸ ನೀಡಿದ ಅವರು ಹಲ್ಮೀಡಿ ಶಾಸನ ಮತ್ತು ಕವಿರಾಜಮಾರ್ಗ ಗ್ರಂಥದ ಮೂಲಕ ಕನ್ನಡದ ವಿಸ್ತಾರತೆ, ಭವ್ಯತೆಯನ್ನು ಅರಿಯಬಹುದಾಗಿದೆ ಎಂದರು.
ಪಂಪ, ರನ್ನ, ಜನ್ನ ಹಾಗೂ ವಚನ, ದಾಸ, ತತ್ವ ಸಾಹಿತ್ಯ ಮತ್ತು ಹೊಸಹಗನ್ನಡದ ವರೆಗೆ ಕನ್ನಡ ಭಾಷೆಯ ಸಮೃದ್ಧತೆಯನ್ನು ಕಾಣಬಹುದಾಗಿದೆ ಎಂದರು.
ಸಾಹಿತಿ ಜಯಾನಂದ ಮಾದರ, ಚಿಂತಕರಾದ ಬಲದೇವ ಸಣ್ಣಕ್ಕಿ, ಶಂಕರ ಕ್ಯಾಸ್ತಿ ಮಾತನಾಡಿ ದೂರದರ್ಶನದ ಕಾರ್ಯಕ್ರಮಳಲ್ಲಿ ಬಳಸುವ ಇಂಗ್ಲಿಷ ಮಿಶ್ರಿತ ಕನ್ನಡದಿಂದ ಕನ್ನಡ ಭಾಷೆಯ ಕನ್ನಡ ಭಾಷೆಗೆ ವ್ಯತಿರಿಕ್ತ ಪರಿಣಾಮವಾಗುತ್ತಲಿದೆ. ಜಾನಪದ ಕಲೆಗಳ ಬೆಳವಣಿಗೆಯಲ್ಲಿ ಕಲಾವಿದರ ಜವಾಬ್ದಾರಿಯೂ ಸಹ ಇದೆ ಎಂದರು.
ಕನ್ನಡ ಜಾನಪದ ಸಂಸ್ಥೆಯ ಅಧ್ಯಕ್ಷ ಡಾ ಉದ್ದಣ್ಣ ಗೋಡೇರ ಮಾತನಾಡಿ ಗ್ರಾಮೀಣ ಜಾನಪದ ಕಲೆಗಳು ಮರೆಯಾಗಬಾರದು ಎನ್ನುವ ಉದ್ದೇಶದಿಂದ ಕಲಾವಿದರಿಗೆ ಪ್ರೋತ್ಸಾಹ ನೀಡುವುದಾಕ್ಕಾಗಿ ಜಾನಪದ ಸಮ್ಮೇಳವನ್ನು ಆಯೋಜಿಸಿರುವೆವು ಎಂದರು.

ಅಧ್ಯಕ್ಷತೆವಹಿಸಿದ್ದ ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ ಜಾನಪದ ಕಲಾವಿದರು ಬಡವರಾಗಿದ್ದರು ಸಹ ಅವರಲ್ಲಿಯ ಕಲೆಯಿಂದ ಶ್ರೀಮಂತರೆನಿಸುತ್ತಾರೆ. ಕಲಾವಿದರಿಗೆ ಪ್ರೋತ್ಸಾಹದ ಕೊರತೆ ಇದ್ದು ಅದನ್ನು ಸರ್ಕಾರ ಮತ್ತು ಸಮುದಾಯ ಜನರು ಗಮನಿಸಬೇಕಾಗಿದೆ ಎಂದರು.
ಸಾನಿಧ್ಯವಹಿಸಿದ್ದ ವಡೇರಹಟ್ಟಿ ಅಂಭಾದರ್ಶನ ಪೀಠದ ಪೀಠಾಧ್ಯಕ್ಷ ನಾರಾಯಣ ಶರಣರು ಆಶೀರ್ವಚನ ನೀಡಿದರು.
ಮಕ್ಕಳ ಸಾಹಿತಿ ಡಾ. ಲಕ್ಷ್ಮಣ ಚೌರಿ, ಕಲಾವಿದ ಯಲ್ಲಪ್ಪ ನಾಯ್ಕರ, ಸಂಘಟಕ ಅಧ್ಯಕ್ಷ ಸೋಮನಾಥ ಹೊಸಟ್ಟಿ, ಕವಯತ್ರಿ ವಿದ್ಯಾ ರೆಡ್ಡಿ, ಗ್ರಾಮ ಪಂಚಾಯ್ತಿ ಸದಸ್ಯರಾದ ತಂಗೆವ್ವ ಬಾಜನವರ, ಯಮನಪ್ಪ ಸಣ್ಣಕ್ಕಿ, ಗೌಡಪ್ಪ ಗೌಡರ, ಅಶೋಕ ಹುಚರಡ್ಡಿ, ಎಸ್.ಎಂ. ನಾಯಿಕ ವೇದಿಕೆಯಲ್ಲಿದ್ದರು.
ಆನಂದ ಸೊರಗಾಂವಿ ನಿರೂಪಿಸಿದರು.
ಜಾನಪದ ಕಲಾ ಸಂಭ್ರಮ: ಗೀಗಿಪದ, ಜಾನಪದ ಹಾಡು, ಸೋಬಾನ ಪದ, ಜಾನಪದ ನೃತ್ಯ, ಜಾನಪದ ರೂಪಕ, ಏಕಪಾತ್ರಭಿನಯ, ಭಜನೆ, ಡೋಳಿನ ಹಾಡು, ದಟ್ಟಿ ಕುಣಿತ ಕಲಾ ಪ್ರದರ್ಶನವು ಎಲ್ಲರ ಮೆಚ್ಚುಗೆ ಪಡೆದವು.


Spread the love

About inmudalgi

Check Also

*ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಪಾಠ*

Spread the loveಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಪಾಠ   ವರದಿ*ಅಡಿವೇಶ ಮುಧೋಳ. ಬೆಟಗೇರಿ: ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ