Breaking News
Home / ಬೆಳಗಾವಿ / ತಾಲೂಕಾ ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ

ತಾಲೂಕಾ ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ

Spread the love

ತಾಲೂಕಾ ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ

ಮೂಡಲಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ಮೂಡಲಗಿ ಯೋಜನಾ ಕಛೇರಿಯ ವ್ಯಾಪ್ತಿಯ ತಾಲೂಕಾ ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶವನ್ನು ಮಂಗಳವಾರ ನ.12 ರಂದು ಬೆಳಿಗ್ಗೆ 9 ಗಂಟೆಗೆ ಮೂಡಲಗಿಯ ಅತ್ತಾರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯೋಜನೆಯ ಮೂಡಲಗಿ ತಾಲೂಕಾ ಯೋಜನಾಧಿಕಾರಿ ರಾಜು ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾವೇಶವನ್ನು ಯೋಜನೆಯ ಧಾರವಾಡ ಪ್ರಾದೇಶಿಕ ವ್ಯಾಪ್ತಿ ನಿರ್ದೇಶಕರಾದ ಶ್ರೀಮತಿ ದಯಾಶೀಲ ಅವರು ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಬ್ಯಾಂಕ್ ಆಫ್ ಮಹಾರಾಷ್ಟ್ರ ಗೋಕಾಕ ಶಾಖಾ ಪ್ರಬಂಧಕಿ ರಶ್ಮಿ ವಿ, ಬಿಇಒ ಅಜೀತ ಮನ್ನಿಕೇರಿ, ಯೋಜನೆಯ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ನಾಗರತ್ನಾ ಹೆಗಡೆ ಭಾಗವಹಿಸುವರು ಹಾಗೂ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶಿವಲೀಲಾ ಗಾಣಿಗೇರ, ಶ್ರೀಶೈಲ್ ಢವಳೇಶ್ವರ,ಶಿವಶಂಕರ ಖಾನಾಪೂರ, ಈರಪ್ಪ ಸೊಂಡುರ ಗೌರವ ಉಪಸ್ಥಿತರಿರುವರು.


Spread the love

About inmudalgi

Check Also

ಯುವ ಸಾಧಕ ಹಣಮಂತ ಮದಣ್ಣವರ ಗೆ ರಾಜ್ಯ ಯುವ ಪ್ರಶಸ್ತಿ ಪ್ರಧಾನ

Spread the love ಮೂಡಲಗಿ : ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಕೊಡಮಾಡುವ ರಾಜ್ಯ ಯುವ ಪ್ರಶಸ್ತಿಯನ್ನು ಅಮೆಚೂರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ