
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಾ ಮಟ್ಟದ ಸ್ವ-ಸಹಾಯ ಸಂಘದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಉದ್ಘಾಟನೆ
ಮೂಡಲಗಿ: ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಡಾ.ಹೇಮಾವತಿ ಹೆಗ್ಗಡೆಯವರು ಜನಪರ ಹೃದಯದವರು, ರಾಜ್ಯಾದ್ಯಾಂತ ಸರಕಾರ ಮಾಡುವ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಎಲ್ಲ ಕ್ಷೇತ್ರದಲ್ಲಿ ಮಾಡುತ್ತಿರುವ ಕಾರ್ಯ ಶ್ಲಾಘನಿಯ ಎಂದು ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಹೇಳಿದರು.
ಅವರು ಪಟ್ಟಣದ ಅತ್ತಾರ ಸಭಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳಿಗೆ ಏರ್ಪಡಿಸಿದ ಮೂಡಲಗಿ ತಾಲೂಕಾ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲ ವಿಕಾಸಗಳಿಗೆ ಮತ್ತು ಸಂಪತ್ತನ್ನು ಉಳಿಸಲ್ಲಿಕೆ ಜ್ಞಾನ ಅಡಿಪಾಯ, ಒಕ್ಕೂಟದ ಪದಾಧಿಕಾರಿಗಳು ಈ ಸಮಾವೇಶದಲ್ಲಿ ಜ್ಞಾನ ಪಡೆದು ತಮ್ಮ ಸಂಘದ ಎಲ್ಲ ಸದಸ್ಯರಿಗೆ ಹಾಗೂ ತಮ್ಮ ಸುತ್ತಮೂತಲಿನ ಜನರಿಗೆ ತಿಳುವಳಿಕೆ ನೀಡಿ ಅನೂಕ್ಕೂಲ ಮಾಡುವ ಕಾರ್ಯವನ್ನು ಮಾಡಬೇಕೆಂದು ಸ್ವ-ಸಹಾಯ ಸಂಘದ ಪದಾಧಿಕಾರಿಗಳಿಗೆ ಕೀವಿ ಮಾತು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯು ಏಷ್ಯಾದಲ್ಲಿ ಮತ್ತು ಅಂತರಾಷ್ಡ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸಂಘವಾಗಿದೆ, ಸೂರ್ಯ ನೋಡುವದನ್ನು ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಎಲ್ಲ ಕ್ಷೇತ್ರದಲ್ಲಿ ಅಭಿವೃದ್ದಿ ಹೊಂದಲು ಸಂಕಲ್ಪ ಮಾಡಿ ಎಲ್ಲ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಪ್ರತಿಯೋಬ್ಬ ಮಹಿಳೆಯರು ತಮ್ಮ ಮಕ್ಕಳಿಗೆ ಒಳ್ಳೇಯ ಶಿಕ್ಷಣ ನೀಡಿ ಮಕ್ಕಳನ್ನೆ ಆಸ್ತಿವಂತರಾಗಿಸಿಕೊಳ್ಳಿ ಎಂದರು
ಯೋಜನೆಯ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ನಾಗರತ್ನಾ ಹೆಗಡೆ ಮಾತನಾಡಿ, ಪೂಜ್ಯರು ಕಳೆದ 47 ವರ್ಷಗಳಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿ ಹಾಗೂ ವಿವಿಧರಂಗದಲ್ಲಿ ಕಡು ಬಡವರಿಗೆ ಸಹಾಯ ಸಹಕಾರ ಮಾಡಿ ಸಮಾಜದಲ್ಲಿ ಎಲ್ಲರೂ ಒಳ್ಳೆಯರೀತಿಯಿಂದ ಜೀವನಸಾಗಿಸಲ್ಲಿ ಎಂದು ಶ್ರಮಿಸುತ್ತಿದ್ದಾರೆ. ಯೋಜನೆಯ ಸ್ವ-ಸಹಾಯ ಸಂಘದ ಜನರಿಗೆ ಸುಮಾರು 25 ರಾಷ್ಟ್ರೀಕೃತ ಬ್ಯಾಂಕಿನೊಂದಿಗೆ ಒಪ್ಪದ ಮಾಡಿಕೊಂಡು ಸದಸ್ಯರಿಗೆ ನೇರ ಸಾಲ ಸೌಲಭ್ಯ ನೀಡುತ್ತಿದು. ಮೂಡಲಗಿ ತಾಲೂಕಿನಲ್ಲಿ 14 ವರ್ಷಗಳಿಂದ 22 ಸಾವಿರ ಸಂಘದ ಸದಸ್ಯರನ್ನು ಹೊಂದಿದೆ. ಸದಸ್ಯರು ಪಡೆ ಸಾಲವನ್ನು ಸರಿಯಾದ ರೀತಿ ಉಪಯೋಗ ಮಾಡಿಕೊಂಡು ಪ್ರತಿ ಮಹಿಳೆಯರು ಸಮಾಜದಲ್ಲಿ ಆರ್ಥಿಕವಾಗಿ ಸಬಲರಾಗಬೇಕೆಂದರು. ಯೋಜನೆಯಲ್ಲಿ ರಾಜ್ಯಾದ್ಯಾಂತ 54 ಲಕ್ಷ ಸದಸ್ಯರು ಹೊಂದಿ ಸುಮಾರು 45 ಸಾವಿರ ಕುಟುಂಬಗಳು ಗೌರವದನದಲ್ಲಿ ಬದುಕು ಸಾಗಿಸುತ್ತಿದ್ದಾರೆ ಎಂದರು.
ಮುಖ್ಯ ಅತಿಥಿ ಬ್ಯಾಂಕ್ ಆಫ್ ಮಹಾರಾಷ್ಟ್ರ ಗೋಕಾಕ ಶಾಖಾ ಪ್ರಬಂಧಕಿ ರಶ್ಮಿ ವಿ ಮಾತನಾಡಿ, ದೇಶ ಅಭಿವೃದ್ಧಿಯಾಗಬೇಕಾದರೆ ಮೊದಲು ಗ್ರಾಮಾಭಿವೃದ್ಧಿ ಹೊಂದಬೇಕು, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯವರು ಬ್ಯಾಂಕ ಮತ್ತು ಸದಸ್ಯರಿಗೆ ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆ ಅವರ ಶಿಫಾರಸಿನ ಮೇರಿಗೆ ಸಾಲ ನೀಡಲಾಗುತ್ತಿದೆ ಎಂದರು.
ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶಿವಲೀಲಾ ಗಾಣಿಗೇರ, ಶ್ರೀಶೈಲ್ ಢವಳೇಶ್ವರ, ಶಿವಶಂಕರ ಖಾನಾಪೂರ, ಈರಪ್ಪ ಸೊಂಡುರ ಮಾತನಾಡಿ, ಪೂಜ್ಯ ಮಹಿಳೆಯರ ಸುಧಾರಣೆಗೆ ಹೆಚ್ಚು ಒತ್ತುಕೋಟಿದ್ದಾರೆ ಎಂದರು
ಯೋಜನೆಯ ಎಮ್.ಐ.ಸಿ ಯೋಜನಾಧಿಕಾರಿ ನಿಂಗಪ್ಪ ಬಾಳಿಕಾಯಿ, ಮತ್ತು ಯೋಜನೆಯ ಸೇವಾ ಕೇಂದ್ರದ ಪ್ರತಿನಿದಿಗಳು ಹಾಗೂ ಸ್ವ-ಸಹಾಯ ಸಂಘದ ಸುಮಾರು 600 ಸದಸ್ಯರು ಭಾಗವಹಿಸಿದ್ದರು.
ಯೋಜನೆಯ ಮೂಡಲಗಿ ತಾಲೂಕಾ ಯೋಜನಾಧಿಕಾರಿ ರಾಜು ನಾಯ್ಕ ವರದಿವಾಚಿಸಿ ಸ್ವಾಗತಿಸಿದರು. ವಿಜಯಲಕ್ಷ್ಮೀ ನಾಗರಾಳ ನಿರೂಪಿಸಿದರು, ಕೃಷಿ ಮೇಲ್ವಿಚಾರಕ ಮೈಲಾರಪ್ಪ ಪೈಲಿ ವಂದಿಸಿದರು.