Breaking News
Home / Uncategorized / ಬೀದರ ಡಾ|| ಶಿವಕುಮಾರ ಸ್ವಾಮೀಜಿಗಳಿಂದ ಡಿ.3ರಿಂದ 15ನೇ ಸತ್ಸಂಗ ಸಮ್ಮೇಳನ –ವೇ.ಶಂಕರಯ್ಯಾ ಹಿರೇಮಠ

ಬೀದರ ಡಾ|| ಶಿವಕುಮಾರ ಸ್ವಾಮೀಜಿಗಳಿಂದ ಡಿ.3ರಿಂದ 15ನೇ ಸತ್ಸಂಗ ಸಮ್ಮೇಳನ –ವೇ.ಶಂಕರಯ್ಯಾ ಹಿರೇಮಠ

Spread the love

ಬೀದರ ಡಾ|| ಶಿವಕುಮಾರ ಸ್ವಾಮೀಜಿಗಳಿಂದ
ಡಿ.3ರಿಂದ 15ನೇ ಸತ್ಸಂಗ ಸಮ್ಮೇಳನ –ವೇ.ಶಂಕರಯ್ಯಾ ಹಿರೇಮಠ

ಮೂಡಲಗಿ: ಪಟ್ಟಣದ ಆರ್.ಡಿ.ಸಂಸ್ಥೆಯ ಆವರಣದಲ್ಲಿ ಮಂಗಳವಾರ ಡಿ.3 ರಿಂದ ಡಿ.9 ರವರಿಗೆ ಏಳು ದಿನಗಳ ಕಾಲ ಬೀದರ ಚಿದಂಬರಾಶ್ರಮ ಸಿದ್ಧಾರೂಢ ಮಠದ ಸದ್ಗುರು ಶ್ರೀ ಡಾ|| ಶಿವಕುಮಾರ ಸ್ವಾಮೀಜಿಗಳಿಂದ 15ನೇ ಸತ್ಸಂಗ ಸಮ್ಮೇಳನ ಜರುಗಲಿದೆ ವೇದಮೂರ್ತಿ ಶ್ರೀ ಶಂಕರಯ್ಯಾ ಹಿರೇಮಠ ಸ್ವಾಮೀಜಿ ತಿಳಿಸಿದರು.
ಅವರು ಪಟ್ಟಣದಲ್ಲಿ ಗುರು ಮಠದಲ್ಲಿ 15ನೇ ಸತ್ಸಂಗ ಸಮ್ಮೇಳನದ ಪ್ರಚಾರ ಪತ್ರಿಕೆಯನ್ನು ಬಿಡುಗಡೆಗೋಳಿಸಿ ಮಾತನಾಡಿ, ವಿಶ್ವ ಶಾಂತಿಗಾಗಿ ಮೂಡಲಗಿ ಪಟ್ಟಣದ ಹಮ್ಮಿಕೊಳ್ಳುತ್ತಿರು ಸತ್ಸಂಗ ಸಮ್ಮೇಳನವನ್ನು ಹಮ್ಮಿಕೊಳ್ಳುತ್ತಿದು, ಮಂಗಳವಾರ ಡಿ.3 ರಂದು ನಡೆಯುವ ಸತ್ಸಂಗ ಸಮ್ಮೇಳವನ್ನು ಸದ್ಗುರು ಶ್ರೀ ಡಾ|| ಶಿವಕುಮಾರ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಇಂಚಲ ಸಾಧು ಸಂಸ್ಥಾನ ಮಠ ಡಾ|| ಶಿವಾನಂದ ಭಾರತಿ ಮಹಾಸ್ವಾಮೀಜಿಗಳು ಉದ್ಘಾಟಿಸುವರು.ಮಹಾಲಿಂಗಪೂರ ಸಿದ್ದಾರೂಢ ಮಠ ಶ್ರೀ ಸಹಜಾನಂದ ಮಹಾಸ್ವಾಮಿಗಳು, ಕಲಬುರ್ಗಿ ಎಂ.ಎ.ಪೂರ್ಣಪ್ರಜ್ಞಾ ಯೋಗಾಶ್ರಮದ ಮಾತೊಶ್ರೀ ಲಕ್ಷ್ಮೀ ತಾಯಿಯವರು, ಜೋಡಕುರಳಿ ಸಿದ್ದಾರೂಢ ಮಠ ಶ್ರೀ ಚಿದ್ಘನಾನಂದ ಭಾರತಿ ಮಹಾಸ್ವಾಮೀಜಿ, ಶಿವಾಪೂರ(ಹ) ಅಡವಿಸಿದ್ದೇಶ್ವರ ಮಠದ ಶ್ರೀ ಅಡವಿಸಿದ್ಧರಾಮ ಮಹಾಸ್ವಾಮಿಜಿ, ಇಟನಾಳ ಮೈಲಾರಲಿಂಗೇಶ್ವರ ದೇವಸ್ಥಾನ ಮತ್ತು ಸಿದ್ದೇಶ್ವರ ಆಶ್ರಮದ ಪ.ಪೂ.ಸಿದ್ದೇಶ್ವರ ಮಹಾಸ್ವಾಮಿಗಳು ಭಾಗವಹಿಸುವರು.
ಡಿ.3 ರಂದು ಅಪಾರ ಸಂಸಾರ ಸಮುದ್ರ ಮಧ್ಯೆ, ಡಿ.4ರಂದು ನಹಿ ಮನುಷ್ಯಾತ್ ಶ್ರೇಷ್ಠತರಂ ಕಿಂಚಿದಸ್ತಿ, ಡಿ.5ರಂದು ದಾನಂ ಪರಂ ಕಿಂ?, ಡಿ.6 ರಂದು ಕ್ರಮತಪ್ಪಿ ನಡೆವುದರಿಂ ಕಷ್ಟಮಿನ್ನುಂಟೇ?, ಡಿ.7ರಂದು ವಿರತಿಯಿಂದಿತರ ಸಂಪದ ಸುಖಮುಂಟೇ?, ಡಿ.8 ರಂದು ಧರ್ಮಾತ್ ಸುಖಮ್ ಹಾಗೂ ಡಿ.9 ರಂದು ಗುರುದೈವಾತ್ ಪರಂನಾಸ್ತಿ ಎಂಬ ವಿಷಯಗಳ ಮೇಲೆ ಡಾ|| ಶಿವಕುಮಾರ ಸ್ವಾಮೀಜಿಗಳು ಮತ್ತು ವಿವಿಧ ಶ್ರೀಗಲಿಂದ ಪ್ರವಚನ ಜರುಗುವುದು ಹಾಗೂ ಪ್ರತಿದಿನ ಪ್ರವಚನ ಮುಗಿದ ನಂತರ ಅನ್ನ ದಾಸೋಹ ಜರುಗುವುದು ಎಂದರು.
ಈ ಸಮಯದಲ್ಲಿ ವಿಲಾಸ ನಾಶಿ, ನೇಮಣ್ಣಾ ಬೇವಿನಕಟ್ಟಿ, ತಮ್ಮಣ್ಣ ಗಡಾದ, ಹನಮಂತ ಗುಬಚ್ಚಿ ಮತ್ತಿತರರು ಇದ್ದರು.


Spread the love

About inmudalgi

Check Also

ಗುರುವಾರದಿಂದ ಹಿಡಕಲ್ ಜಲಾಶಯದಿಂದ ಜಿ.ಆರ್.ಬಿ.ಸಿ/ ಜಿ.ಎಲ್.ಬಿ.ಸಿ/ ಸಿ.ಬಿ.ಸಿ ಕಾಲುವೆಗಳಿಗೆ 15 ದಿನಗಳವರೆಗೆ ನೀರು ಬಿಡುಗಡೆ*

Spread the love*ಗುರುವಾರದಿಂದ ಹಿಡಕಲ್ ಜಲಾಶಯದಿಂದ ಜಿ.ಆರ್.ಬಿ.ಸಿ/ ಜಿ.ಎಲ್.ಬಿ.ಸಿ/ ಸಿ.ಬಿ.ಸಿ ಕಾಲುವೆಗಳಿಗೆ 15 ದಿನಗಳವರೆಗೆ ನೀರು ಬಿಡುಗಡೆ* *ಸಚಿವ ಸತೀಶ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ