ಧನುರ್ಮಾಸ ಪ್ರಯುಕ್ತ ದಿ.4 ರಂದು ‘ಶ್ರೀ ಪವಮಾನ ಹೋಮ‘
ಮೂಡಲಗಿ : ಧನುರ್ಮಾಸ ಪ್ರಯುಕ್ತ ಪಟ್ಟಣದ ಪೊಲೀಸ್ ಕ್ವಾರ್ಟರ್ ಹತ್ತಿರ ಇರುವ ಶ್ರೀ ಹನುಮಾನ್ ದೇವಸ್ಥಾನದಲ್ಲಿ ಇದೇ ಶನಿವಾರ ದಿ.4 ರಂದು ಬೆಳಗ್ಗೆ 7 ಗಂಟೆಗೆ ‘ಶ್ರೀ ಪವಮಾನ ಹೋಮ ಕಾರ್ಯಕ್ರಮ’ ಜರುಗಲಿದೆ ಎಂದು ದೇವಸ್ಥಾನ ಅರ್ಚಕರಾದ ಶ್ರೀ ವೆಂಕಟೇಶ್ ಬಡಿಗೇರ ತಿಳಿಸಿದ್ದಾರೆ.
ಶನಿವಾರದಂದು ಹನುಮ ದೇವರಿಗೆ ವಿಶೇಷ ಪೂಜೆಯೊಂದಿಗೆ ಬೆಳಗ್ಗೆ 6 ಗಂಟೆಗೆ ಮಹಾಪಂಚಾಮೃತ ಅಭಿಷೇಕ, ವೀಳ್ಯದೆಲೆ ಪೂಜೆ, ಸುಮಂಗಲೆಯರಿಗೆ ಉಡಿ ತುಂಬುವುದು, ಪವಮಾನ ಹೋಮದ ಪೂರ್ಣಾಹುತಿಯೊಂದಿಗೆ ಬಂದ ಸಧ್ಭಕರಿಗೆಲ್ಲ ಮಧ್ಯಾನ್ಹ ಅನ್ನಸಂತರ್ಪಣೆ ಇರುವುದು.
ಮೂಡಲಗಿಯ ಪುರೋಹಿತರಾದ ಶ್ರೀ ಗುಂಡು ಆಚಾರ್ಯ ಹಾಗೂ ವೇದಮೂರ್ತಿ ಶ್ರೀ ರಾಘವೇಂದ್ರ ಆಚಾರ್ಯ ರವರ ನೇತೃತ್ವದಲ್ಲಿ ಹಲವಾರು ದಂಪತಿಗಳು ಕಂಕಣ ಧರಿಸುವ ಮೂಲಕ ಶ್ರೀ ಪವಮಾನ ಹೋಮ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸದ್ಭಕ್ತರು ಆಗಮಿಸಿ ಹನುಮ ದೇವರ ಕೃಪೆಗೆ ಪಾತ್ರರಾಗಬೇಕೆಂದು ಅರ್ಚಕರು ವಿನಂತಿಸಿದ್ದಾರೆ.
IN MUDALGI Latest Kannada News