Breaking News
Home / ಬೆಳಗಾವಿ / ಭಾರತೀಯ ಸಾoಸ್ಕೃತಿಕ ಪರಂಪರೆಯಲ್ಲಿ ಜಾನಪದ ಕಲೆ ಎಂಬುದು ಸರ್ವ ಕಾಲಕ್ಕೂ ಶ್ರೇಷ್ಠ – ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ಮೂಡಲಗಿ ತಾಲೂಕಾ ಘಟಕದ ಗೌರವಾಧ್ಯಕ್ಷ  ಸರ್ವೋತ್ತಮ ಜಾರಕಿಹೊಳಿ

ಭಾರತೀಯ ಸಾoಸ್ಕೃತಿಕ ಪರಂಪರೆಯಲ್ಲಿ ಜಾನಪದ ಕಲೆ ಎಂಬುದು ಸರ್ವ ಕಾಲಕ್ಕೂ ಶ್ರೇಷ್ಠ – ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ಮೂಡಲಗಿ ತಾಲೂಕಾ ಘಟಕದ ಗೌರವಾಧ್ಯಕ್ಷ  ಸರ್ವೋತ್ತಮ ಜಾರಕಿಹೊಳಿ

Spread the love

ಮೂಡಲಗಿ : ಭಾರತೀಯ ಸಾoಸ್ಕೃತಿಕ ಪರಂಪರೆಯಲ್ಲಿ ಜಾನಪದ ಕಲೆ ಎಂಬುದು ಸರ್ವ ಕಾಲಕ್ಕೂ ಶ್ರೇಷ್ಠ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ಮೂಡಲಗಿ ತಾಲೂಕಾ ಘಟಕದ ಗೌರವಾಧ್ಯಕ್ಷ  ಸರ್ವೋತ್ತಮ ಜಾರಕಿಹೊಳಿ ಹೇಳಿದರು.
         ತಾಲೂಕಿನ ಜೋಕಾನಟ್ಟಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಹಾಗೂ  ಶಿವಾನಂದ ಭಾರತಿಸ್ವಾಮಿ ಜಾನಪದ ಕಲಾ ಯುವ ಸಂಘ ಜೋಕಾನಟ್ಟಿ ಇವುಗಳ ಸoಯುಕ್ತ ಆಶ್ರಯದಲ್ಲಿ ಜರುಗಿದ ಜಾನಪದ ಕಲಾ ಉತ್ಸವ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಜಾನಪದ ಕಲೆ ಇನ್ನು ಜೀವಂತವಾಗಿದ್ದು, ಕನ್ನಡ ಸಾಹಿತ್ಯಕ್ಕೆ ಜನಪದರ ಕೊಡುಗೆ ಅಪಾರವಾಗಿದೆ ಎಂದರು.
ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತ ಸಿದ್ದಣ್ಣ ದುರದುಂಡಿ ಮಾತನಾಡಿ, ಟಿವಿ ಮತ್ತು ಮೊಬೈಲ್ ಹಾವಳಿಯಲ್ಲಿ ನಸಿಸಿ ಹೋಗುತ್ತಿರುವ ನಮ್ಮ ಮೂಲ ಜಾನಪದ ಕಲೆಯನ್ನು  ಉಳಿಸಿ ಬೆಳಸಲು ಪ್ರತಿಯೊಬ್ಬರು ಸಂಘಟಿತರಾಗಬೇಕು. ಈ ಗ್ರಾಮೀಣ ಭಾಗಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಮ್ಮ ಭಾಗದ ಶಾಸಕ ಬಾಲಚಂದ್ರ  ಜಾರಕಿಹೊಳಿ ಅವರು ಕೂಡಾ ಜಾನಪದ ಕಲೆ ಉಳಿವಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋತ್ತಿದ್ದಾರೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಜೋಕಾನಟ್ಟಿಯ ಬಿಳಿಯಾನಸಿದ್ದ ಸ್ವಾಮೀಜಿ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಯಲ್ಲಪ್ಪ ನಾಯ್ಕರ, ಯಮನವ್ವಾ ಮಾದರ, ರುದ್ರಪ್ಪ ಮಾದರ, ಹಿರಿಯರಾದ ಶಿದ್ದಲಿಂಗಪ್ಪ ಕಂಬಳಿ, ಕುಬೆಂದ್ರ ತೆಗ್ಗಿ, ಗುಂಡುರಾವ ಗುಜನಟ್ಟಿ, ಸಂತೋಷ ಅವಜ್ಜಪಗೋಳ, ಡಾ. ರಮೇಶ ಹರಿಜನ, ಶ್ರೀಶೈಲ ಕಂಬಳಿ, ವಿಠ್ಠಲ್ ಮೋಕಾಸಿ, ಶಿವಾನಂದ ಮಾದರ, ಶೆಟೆಪ್ಪಾ ಮಾದರ ಹಾಗೂ ಸಂಘಟಕರು ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಪ್ರಶಸ್ತಿ ವಿಜೇತೆ ಅಕ್ಕಮಹಾದೇವಿ ಮಾದರ ಸ್ವಾಗತಿಸಿದರು. ಶಿವಗೊಂಡ ಪಾಟೀಲ ನಿರೂಪಿಸಿದರು. ಲಕ್ಷ್ಮಿ ಜೋಕಾನಟ್ಟಿ ವಂದಿಸಿದರು.

Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ